ಭಾರತ ಆಫ್ಘಾನಿಸ್ತಾನದ ನಂಬಿಕಸ್ತ ದೇಶ- ಪೆಂಟಗಾನ್

ಭಾರತ ದೇಶವು  ಆಫ್ಘಾನ್ ದೇಶಕ್ಕೆ ನೀಡುತ್ತಿರುವ ಆರ್ಥಿಕ ವೈದ್ಯಕೀಯ ಸಹಕಾರಗಳಿಗೆ ಮೆಚ್ಚುಗೆ ಸೂಚಿಸಿರುವ ಪೆಂಟಗಾನ್ ಭಾರತವು ಆಫ್ಘಾನ ದೇಶದ ನಂಬಿಕಸ್ತ ರಾಷ್ಟ್ರ ಎಂದು ಕಾಂಗ್ರೆಸ್ ಗೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. 

Last Updated : Dec 17, 2017, 06:41 PM IST
ಭಾರತ ಆಫ್ಘಾನಿಸ್ತಾನದ ನಂಬಿಕಸ್ತ ದೇಶ- ಪೆಂಟಗಾನ್  title=

ನವದೆಹಲಿ: ಭಾರತ ದೇಶವು  ಆಫ್ಘಾನ್ ದೇಶಕ್ಕೆ ನೀಡುತ್ತಿರುವ ಆರ್ಥಿಕ ವೈದ್ಯಕೀಯ ಸಹಕಾರಗಳಿಗೆ ಮೆಚ್ಚುಗೆ ಸೂಚಿಸಿರುವ ಪೆಂಟಗಾನ್ ಭಾರತವು ಆಫ್ಘಾನ ದೇಶದ ನಂಬಿಕಸ್ತ ರಾಷ್ಟ್ರ ಎಂದು ಕಾಂಗ್ರೆಸ್ ಗೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. 

ಕಾಂಗ್ರೆಸ್ ಗೆ ಸಲ್ಲಿಸಿರುವ ಅಫ್ಘಾನಿಸ್ತಾನ್ ದಲ್ಲಿ ಸುಸ್ಥಿರತೆ ಮತ್ತು ರಕ್ಷಣೆ ಎನ್ನುವ ವರದಿಯಲ್ಲಿ ಭಾರತವು ಅಫ್ಘಾನಿಸ್ತಾನ ದೇಶಕ್ಕೆ ನೀಡುತ್ತಿರುವ ಎಲ್ಲ ರೀತಿಯ ಸಹಕಾರವನ್ನು ಹೊಗಳಿರುವ ಪೆಂಟಗಾನ್ ಈ ದೇಶದ ಅಭಿವೃದ್ದಿಯಲ್ಲಿ  ಭಾರತದ ಪಾಲು ಮಹತ್ವವಾದದ್ದು ಎಂದು ಅದು ಅಭಿಪ್ರಾಯಪಟ್ಟಿದೆ. 

ಅಲ್ಲದೆ ಭಾರತವು ಅಲ್ಲಿನ ಪಾರ್ಲಿಮೆಂಟಿನ ನಿರ್ಮಾಣದಲ್ಲಿ ಮತ್ತು ದ್ವಿಪಕ್ಷೀಯ ಮೈತ್ರಿಗೋಸ್ಕರ ಕಟ್ಟುತ್ತಿರುವ ಆಣೆಕಟ್ಟು ನಿರ್ಮಾಣದಂತಹ ಯೋಜನೆಗಳನ್ನು ಅದು ಶ್ಲಾಘಿಸಿದೆ.ಅಲ್ಲದೆ ಭಾರತವು ಆಫ್ಘಾನ್ನಿಗೆ ನೀಡುತ್ತಿರುವ ಮಿಲಿಟರಿ ತರಬೇತಿಯನ್ನು ಸಹ ಅದು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. 

Trending News