ಇಸ್ಲಾಮಾ ಬಾದ್: FATF Gray List Latest News - ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಗೆ ಬಹುದೊಡ್ಡ ಆಘಾತ ದೊರೆತಿದೆ. ಟೆರರ್ ಫಂಡಿಂಗ್ (Terror Funding) ಮೇಲೆ ನಿಗಾವಹಿಸುವ ಸಂಸ್ಥೆಯಾಗಿರುವ FATF ಪಾಕ್ ಹೆಸರನ್ನು ಗ್ರೇ ಲಿಸ್ಟ್ ನಲ್ಲಿಯೇ ಮುಂದುವರೆಸಲು ತೀರ್ಮಾನಿಸಿದೆ. ಏಕೆಂದರೆ ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸುವ ಹಲವು ನ್ಯೂನ್ಯತೆಗಳು ಪಾಕಿಸ್ತಾನದಲ್ಲಿ ಹಾಗೆಯೇ ಮುಂದುವರೆದಿವೆ.
FATF ಪ್ರಕಾರ ಗ್ರೇ ಲಿಸ್ಟ್ ನಲ್ಲಿನ ಪಾಕ್ ಸ್ಥಾನದ ಕುರಿತು ಜೂನ್ 2021ರಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದೆ. UN (United Nations) ನಿಂದ ನಾಮನಿರ್ದೇಶನಗೊಂಡ ಭಯೋತ್ಪಾದಕರು ಹಾಗೂ ಅವರ ಸಹಚರರಿಗೆ ಆರ್ಥಿಕ ನೆರವು ಒದಗಿಸುವುದು ಸೇರಿದಂತೆ ಓಟ್ಟು ಮೂರು ಮಟ್ಟದಲ್ಲಿ ಪಾಕಿಸ್ತಾನ ತನ್ನ ಸುಧಾರಣೆ ತೋರಿಸುವ ಅನಿವಾರ್ಯತೆ ಇದೆ.
ಬರುವ ಜೂನ್ 2021 ರಂದು ಈ ನಿಟ್ಟಿನಲ್ಲಿ ಪಾಕ್ ಕೈಗೊಳ್ಳುವ ಹೆಜ್ಜೆಗಳು ಎಷ್ಟೊಂದು ಪರಿಣಾಮಕಾರಿ ಸಾಬೀತಾಗಿವೆ ಎಂಬುದರ ಕುರಿತು ನಾವು ಮತ್ತೊಮ್ಮೆ ಸಮೀಕ್ಷೆ ನಡೆಸುವೆವು. ಆ ಬಳಿಕ ಮಾತ್ರವೇ FATF ಸದಸ್ಯ ರಾಷ್ಟ್ರಗಳು ಗ್ರೆ ಲಿಸ್ಟ್ ನಲ್ಲಿರುವ ಪಾಕ್ ಸ್ಥಾನದ ಕುರಿತು ನಿರ್ಣಯ ಕೈಗೊಳ್ಳಲಿವೆ ಎಂದು FATF ಸ್ಪಷ್ಟಪಡಿಸಿದೆ.
ಇದನ್ನೂ ಓದಿ- ಭಾರತ ವಿರೋಧಿ China ಪರಿಸ್ಥಿತಿ ಕಂಡು ಬೆಚ್ಚಿಬಿದ್ದ Pakistan, ಅಮೆರಿಕಕ್ಕೆ ಮಾಡಿರುವ ಮನವಿ ಏನು ಗೊತ್ತೇ?
ಜೂನ್ 2018 ರಲ್ಲಿ, ಪ್ಯಾರಿಸ್ ಮೂಲದ ಹಣಕಾಸು ಕಾರ್ಯಪಡೆ (FATF) ಪಾಕಿಸ್ತಾನವನ್ನು 'ಬೂದು ಪಟ್ಟಿ'ಗೆ (FATF Gray List) ಸೇರಿಸಿತ್ತು. ನಂತರ 2019 ರ ಅಂತ್ಯದ ವೇಳೆಗೆ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಆರ್ಥಿಕ ನೆರವು ಒದಗಿಸುವುದನ್ನು ನಿಲ್ಲಿಸುವಂತೆ ಎಫ್‌ಎಟಿಎಫ್ ಪಾಕಿಸ್ತಾನಕ್ಕೆ ಸೂಚಿಸಿತ್ತು. ಆದರೆ, ನಂತರ ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆ ಈ ಗಡುವನ್ನು ವಿಸ್ತರಿಸಲಾಗಿತ್ತು.
ಬಳಿಕ ಅಕ್ಟೋಬರ್ 2020 ರಲ್ಲಿ ನಡೆದ ಎಫ್‌ಎಟಿಎಫ್ ಸಭೆಯಲ್ಲಿ, ಫೆಬ್ರವರಿ 2021 ರವರೆಗೆ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿತ್ತು. ಜಾಗತಿಕ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಮೇಲ್ವಿಚಾರಣೆಯ 27 ಕಟ್ಟುಪಾಡುಗಳಲ್ಲಿ ಆರನ್ನು ಪೂರೈಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಎಫ್‌ಎಟಿಎಫ್ ಹೇಳಿದೆ.
ಇದನ್ನೂ ಓದಿ-Pakistan ಪ್ರಧಾನಿ ಖುರ್ಚಿಗೆ ಕಂಟಕ, Imran Khan ಆತಂಕ ಹೆಚ್ಚಿಸಿದ ಜ್ಯೋತಿಷಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.