ಢಾಕಾ: ಅಪಹರಣದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದುಬೈ ಬೇಸ್'ನ ಬಿಮಾನ್ ಬಾಂಗ್ಲಾದೇಶ ಏರ್ಲೈನ್ಸ್ ವಿಮಾನವು ತುರ್ತು ಲ್ಯಾಂಡಿಂಗ್ ಮಾಡಿದೆ.
ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ಢಾಕಾದಿಂದ ದುಬೈಗೆ ತೆರಳುತ್ತಿದ್ದ ವಿಮಾನ ಬಿಜಿ 147 ಅನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದರಿಂದ, ಚಿತ್ತಗಾಂಗ್ನ ಷಾ ಅಮನತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಕಾಕ್ಪಿಟ್ನ ನಿಯಂತ್ರಣವನ್ನು ತೆಗೆದುಕೊಳ್ಳಲು ಬಂದೂಕುದಾರಿಯೊಬ್ಬ ಪ್ರಯತ್ನಿಸಿದ್ದರಿಂದ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ AFP(Agence France-Presse)ಗೆ ಮಾಹಿತಿ ನೀಡಿರುವ ಏರ್ ವೈಸ್ ಮಾರ್ಶಲ್ ನಯೀಮ್ ಹಸನ್ "ಢಾಕಾದಿಂದ ದುಬೈಗೆ ಹೋಗುತ್ತಿದ್ದ ಬಿಜಿ 147 ವಿಮಾನದಲ್ಲಿದ್ದ ಎಲ್ಲಾ 150 ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ" ಎಂದಿದ್ದಾರೆ.
#BREAKING: Attempt to hijack Dubai-bound plane in Bangladesh: TV pic.twitter.com/CiHnftaDI3
— AFP news agency (@AFP) February 24, 2019
"ನಾವೆಲ್ಲರೂ ಆತ ಒಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದಿದ್ದೆವು. ಆದರೆ ಆ ವ್ಯಕ್ತಿ ತನ್ನ ಬಾಂಬ್ ಇರುವುದಾಗಿ ಹೇಳಿ, ವಿಮಾನವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದ. ಹೀಗಾಗಿ ಚಿತ್ತಗಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಬೇಕಾಯಿತು" ಎಂದು ಅವರು ಹೇಳಿದ್ದಾರೆ.