Helicopter Crash: 16 ಜನರಿದ್ದ ಹೆಲಿಕಾಪ್ಟರ್ ಪತನ; ಹಲವರು ನಾಪತ್ತೆ..!

ರಷ್ಯಾದ ಕಮ್‌ಚಟ್ಕಾದ ಪೂರ್ವ ಪೂರ್ವ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.

Written by - Zee Kannada News Desk | Last Updated : Aug 12, 2021, 11:09 AM IST
  • ಹೆಲಿಕಾಪ್ಟರ್ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು
  • ತಾಂತ್ರಿಕ ದೋಷ ಕಾಣಿಸಿಕೊಂಡ 16 ಜನರಿದ್ದ ಎಂಐ -8 ಹೆಲಿಕಾಪ್ಟರ್ ಪತನಗೊಂಡು ಕೆರೆಗೆ ಬಿದ್ದಿದೆ
  • ಘಟನೆಯಲ್ಲಿ 9 ಜನರು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆದರೆ 7 ಮಂದಿ ನಾಪತ್ತೆಯಾಗಿದ್ದಾರೆ.
Helicopter Crash: 16 ಜನರಿದ್ದ ಹೆಲಿಕಾಪ್ಟರ್ ಪತನ; ಹಲವರು ನಾಪತ್ತೆ..! title=
ಹೆಲಿಕಾಪ್ಟರ್ ಪತನಗೊಂಡು ಕೆರೆಯಲ್ಲಿ ಬಿದ್ದಿದೆ

ಮಾಸ್ಕೋ: 16 ಜನರಿದ್ದ ಎಂಐ -8 ಹೆಲಿಕಾಪ್ಟರ್ ವೊಂದು ರಷ್ಯಾದ ಕಮ್‌ಚಟ್ಕಾದ ಪೂರ್ವ ಪೂರ್ವ ಪ್ರದೇಶದಲ್ಲಿ ಪತನ(Russian Helicopter Crash)ಗೊಂಡಿದೆ. ಘಟನೆಯಲ್ಲಿ 9 ಮಂದಿ ಸುರಕ್ಷಿತವಾಗಿ ಪತ್ತೆಯಾಗಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಕಮ್‌ಚಟ್ಕಾದ ಪರ್ಯಾಯ ದ್ವೀಪದ ದಕ್ಷಿಣದಲ್ಲಿರುವ ಕೆರೆಯ ಬಳಿ 13 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಟಜ್-ಏರೋ ಕಂಪನಿ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಸ್ಥಳೀಯ ತುರ್ತು ಸೇವೆ ಮಾಹಿತಿ ನೀಡಿದೆ.

ಹೆಲಿಕಾಪ್ಟರ್ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು ಎಂದು ತುರ್ತು ಸೇವೆಯ ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹೆಲಿಕಾಪ್ಟರ್ ಪತನ(Russian Helicopter Crash)ಗೊಂಡು ಕೆರೆಗೆ ಬಿದ್ದಿದೆ ಎಂದು ತಿಳಿದುಬಂದಿದೆ.   

ಇದನ್ನೂ ಓದಿ: ಈ ದೇಶದಲ್ಲಿ ಸೈನ್ಯಕ್ಕೆ ಸೇರುವ ಮಹಿಳೆಯೆರಿಗೆ ಮಾಡಲಾಗುತ್ತೆ Virginity Test : ಈ ಬದಲಾವಣೆಗೆ ಮುಂದಾದ ಸರ್ಕಾರ

ಘಟನೆಯಲ್ಲಿ 9 ಜನರು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆದರೆ 7 ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಕಮ್‌ಚಟ್ಕಾದ ಆರೋಗ್ಯ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ‘ಹೆಲಿಕಾಪ್ಟರ್(Helicopter)ನಲ್ಲಿ ಪ್ರಯಾಣಿಸುತ್ತಿದ್ದ 16 ಜನರ ಪೈಕಿ 7 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಅಪಘಾತದಿಂದ ಪಾರಾಗಿದ್ದಾರೆ. ಇನ್ನುಳಿದ 7 ಮಂದಿ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಅಂತಾ ತುರ್ತು ಸೇವಾ ಪ್ರತಿನಿಧಿಗಳು ತಿಳಿಸಿದ್ದಾರೆ.   

ಕಮ್‌ಚಟ್ಕಾ(Kamchatka) ಪರ್ಯಾಯ ದ್ವೀಪವು ತನ್ನ ಪ್ರಕೃತಿ ಸೌಂದರ್ಯಕ್ಕೆ ಜನಪ್ರಿಯವಾಗಿದೆ. ಇದು ಮಾಸ್ಕೋದ ಪೂರ್ವಕ್ಕೆ 6,000 ಕಿಮೀ (3,728 ಮೈಲಿಗಳು) ಮತ್ತು ಅಲಾಸ್ಕಾದ ಪಶ್ಚಿಮಕ್ಕೆ ಸುಮಾರು 2,000 ಕಿಮೀ ದೂರದಲ್ಲಿದೆ. ಪ್ರವಾಸಿಗರ ಸ್ವರ್ಗವಾಗಿ ಈ ದ್ವೀಪವು ಗುರುತಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ರಷ್ಯಾದ ವಾಯುಯಾನ ಸುರಕ್ಷತಾ ಮಾನದಂಡಗಳು ಸುಧಾರಣೆಯಾಗಿವೆ. ಆದರೆ ಹಳೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಬಳಕೆಯಿಂದಾಗಿ ಈ ರೀತಯ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ ಅಂತಾ ತಿಳದುಬಂದಿದೆ.

ಇದನ್ನೂ ಓದಿ: OMG ! ಈ ದೇಶದಲ್ಲಿ Ladies Fingerಗಳನ್ನು ಬೆಂಡೆಯಂತೆ ಕತ್ತರಿಸಿ ಸುಡುತ್ತಾರಂತೆ !

ಇದೇ ವರ್ಷದ ಜುಲೈ ತಿಂಗಳಿನಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಲ್ಯಾಂಡಿಂಗ್‌ಗೆ ಯತ್ನಿಸಿದ್ದ AN-26 ವಿಮಾನವು ರಷ್ಯಾದ ಪೂರ್ವ ಕರಾವಳಿ ತೀರ ಪ್ರದೇಶದಲ್ಲಿ ಪತನಗೊಂಡು 28 ಪ್ರಯಾಣಿಕರು ಸಾವನ್ನಪ್ಪಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News