Global Vaccination Program: ಕೊರೊನಾ ಲಸಿಕೆ ಹಾಕಿಸಿಕೊಂಡು ಕೋಟ್ಯಾಧಿಪತಿಯಾದ ಮಹಿಳೆ

Vaccination: ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕರೋನಾ ಲಸಿಕೆ ಪಡೆಯಲು ಹೋಗಿ 7.4 ಕೋಟಿ ರೂಪಾಯಿ ಗೆದ್ದಿದ್ದಾರೆ. ಈ ಹಣವನ್ನು 'ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್ ಲಾಟರಿ ಸಿಸ್ಟಮ್' ಅಡಿಯಲ್ಲಿ ನೀಡಲಾಗಿದೆ.

Written by - Nitin Tabib | Last Updated : Nov 8, 2021, 09:51 PM IST
  • ಲಸಿಕೆ ಪಡೆಯುವ ಮೂಲಕ ಮಿಲಿಯನೇರ್ ಆದ ಮಹಿಳೆ
  • ಲಕ್ಕಿ ಡ್ರಾ ನಲ್ಲಿ ಆಸ್ಟ್ರೇಲಿಯಾದ ಮಹಿಳೆ 7.4 ಕೋಟಿ ರೂ. ಗೆಲುವು
  • 30 ಮಿಲಿಯನ್ ಜನರಲ್ಲಿ ಜೋಆನ್ ಅತ್ಯಂತ ಅದೃಷ್ಟಶಾಲಿ
Global Vaccination Program: ಕೊರೊನಾ ಲಸಿಕೆ ಹಾಕಿಸಿಕೊಂಡು ಕೋಟ್ಯಾಧಿಪತಿಯಾದ ಮಹಿಳೆ title=
Global Vaccination Program (File Photo)

ಕ್ಯಾನ್‌ಬೆರಾ: COVID19 Vaccine - ಜಗತ್ತಿನಾದ್ಯಂತ ಕೋವಿಡ್‌-19 ಲಸಿಕೆ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಏಕೆಂದರೆ ಕರೋನಾ ತಡೆಗಟ್ಟಲು ಇದೊಂದೇ ದಾರಿ. ಇನ್ನೂ ಕೆಲವರು ಈ ಲಸಿಕೆಯನ್ನು ಪಡೆಯಲು ಭಯಪಡುತ್ತಿದ್ದಾರೆ. ಅದಕ್ಕಾಗಿಯೇ ಎಲ್ಲಾ ದೇಶಗಳು ತಮ್ಮ ನಾಗರಿಕರಿಗೆ ಅರಿವು ಮೂಡಿಸಲು ಕೆಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ಅಂದ ಹಾಗೆ, ಕರೋನಾ ಲಸಿಕೆ ಪಡೆಯುವುದು ಪ್ರತಿಯೊಬ್ಬರ ಸುರಕ್ಷತೆಯ ಪ್ರಶ್ನೆಯಾಗಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯದಿಂದ ಲಸಿಕೆ ಹಾಕಿದ್ದರಿಂದ ಮಹಿಳೆಯೊಬ್ಬಳ ಭವಿಷ್ಯವೇ ಬದಲಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಕರೋನಾ ಲಸಿಕೆ ಪಡೆದ ನಂತರ ಮಿಲಿಯನೇರ್ ಆಗಿದ್ದಾರೆ. 

ಈ ರೀತಿ ಯುವತಿ ಮಿಲಿಯನೇರ್ ಆಗಿದ್ದಾಳೆ
ದಿ ಆಸ್ಟ್ರೇಲಿಯನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ 'ದ ಮಿಲಿಯನ್ ಡಾಲರ್ ವ್ಯಾಕ್ಸ್ ಕ್ಯಾಂಪೇನ್' (The Million Dollar Vax Campaign) ನಡೆಯುತ್ತಿದೆ, ಇದರಲ್ಲಿ ಜೊವಾನ್ನೆ ಝು  (Joanne Zhu) ಎಂಬ ಯವತಿ ಮಿಲಿಯನ್ ಡಾಲರ್ ಲಾಟರಿ ಬಂದಿದೆ. ಇದನ್ನು ಭಾರತೀಯ ಕರೆನ್ಸಿಯಲ್ಲಿ ಅರ್ಥಮಾಡಿಕೊಂಡರೆ ಸುಮಾರು 7.4 ಕೋಟಿ ರೂ. . ಸರ್ಕಾರದ ಕೋರಿಕೆಯ ಮೇರೆಗೆ ಕರೋನಾ ಲಸಿಕೆಯನ್ನು(Corona Vaccine) ಪಡೆದ ಲಕ್ಷಾಂತರ ಆಸ್ಟ್ರೇಲಿಯನ್ನರಲ್ಲಿ ಜೋನ್ ಒಬ್ಬರು ಮತ್ತು ಲಕ್ಕಿ ಡ್ರಾದಲ್ಲಿ ಮಿಲಿಯನೇರ್ ಆಗಿದ್ದಾರೆ.

ಕ್ಯಾಂಪೇನ್ ಅಡಿಯಲ್ಲಿ ಹಣ ಸಂಗ್ರಹಣೆ ನಡೆದಿದೆ
ಜೋಆನ್ ಗೆ ಈ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಸರ್ಕಾರ ಮಾತ್ರವಲ್ಲದೆ ಅಲ್ಲಿನ ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ದತ್ತಿ ಸಂಸ್ಥೆಗಳು ಸಹ ನೀಡಿವೆ. ವಾಸ್ತವವಾಗಿ, ಅಲ್ಲಿ ಲಸಿಕೆ ಹಾಕುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರಿ ಬಹುಮಾನದ ಹಣವನ್ನು ಘೋಷಿಸಲಾಯಿತು, ಅದರ ನಂತರ ದಿ ಮಿಲಿಯನ್ ಡಾಲರ್ ವ್ಯಾಕ್ಸ್ ಅಲೈಯನ್ಸ್‌ನ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. 

ಇದನ್ನೂ ಓದಿ-ನಿಷೇಧದ ಬಳಿಕ ನಿಮ್ಮ 500 ಮತ್ತು 1000 ರೂ. ಹಳೆಯ ನೋಟುಗಳು ಏನಾದವು ಗೊತ್ತಾ..?

30 ಲಕ್ಷ ಜನರಲ್ಲಿ ಜೋಆನ್ ಲಕ್ಕಿ ಸಾಬೀತಾಗಿದ್ದಾರೆ
ವರದಿಯ ಪ್ರಕಾರ, ಈ ಲಕ್ಕಿ ಡ್ರಾದಲ್ಲಿ ಸುಮಾರು 3 ಮಿಲಿಯನ್ ಜನರು ಭಾಗವಹಿಸಿದ್ದರು, ಅದರಲ್ಲಿ ಜೋಆನ್ ಕೂಡ ಒಬ್ಬರು . ಲಸಿಕೆ ಪಡೆಯುವ ಮೊದಲು, ಮಾರನೆಯ ದಿನ ಬೆಳಗ್ಗೆ ತಾವು ಮಿಲಿಯನೇರ್ ಆಗಬಹುದೆಂದು ಜೋಆನ್ ಗೆ ತಿಳಿದಿರಲಿಲ್ಲ. ಈ ಲಾಟರಿಯನ್ನು ಅವಳಿಗೆ ನೀಡಲು ಅಧಿಕಾರಿಗಳು ಮೊದಲ ಬಾರಿಗೆ ಕರೆ ಮಾಡಿದಾಗಲೂ, ಜೋಆನ್ ಕರೆಯನ್ನು ಸಹ ಸ್ವೀಕರಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇದನ್ನೂ ಓದಿ-Sushma Swaraj, Kangana Ranaut, PV Sindhu ಸೇರಿದಂತೆ ಒಟ್ಟು 119 ಗಣ್ಯರಿಗೆ ಪದ್ಮ ಪ್ರಶಸ್ತಿ ಗೌರವ

ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡುವುದಾಗಿ ಹೇಳಿದ ಜೋಆನ್
ಲಕ್ಕಿ ಡ್ರಾ ಕುರಿತಂತೆ ಮಾಧ್ಯಮದವರು ಜೋಆನ್ ಅವರೊಂದಿಗೆ ಮಾತನಾಡುವಾಗ, ಲಕ್ಕಿ ಡ್ರಾ ಚೆಕ್ ಪಡೆದ ನಂತರ, ತಾವು ತಮ್ಮ ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡುವುದಾಗಿ ಮತ್ತು ಅವರ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಇದೇ ವೇಳೆ, ಚೈನೀಸ್ ನ್ಯೂ ಇಯರ್ ಸಂದರ್ಭದಲ್ಲಿ ಒಂದು ವೇಳೆ ಗಡಿ ತೆರೆದರೆ, ತನ್ನ ಕುಟುಂಬದೊಂದಿಗೆ ಪ್ರಥಮ ದರ್ಜೆ ಟಿಕೆಟ್‌ನಲ್ಲಿ ಪ್ರಯಾಣಿಸಲು ಬಯಸುವುದಾಗಿ ಮತ್ತು ಪಂಚತಾರಾ ಹೋಟೆಲ್ ಅನ್ನು ಬುಕ್ ಮಾಡುವುದಾಗಿ ಜೋಆನ್ ಹೇಳಿದ್ದಾರೆ.

ಇದನ್ನೂ ಓದಿ-ಕಾಂಗ್ರೆಸ್ ಪಕ್ಷ ಎನ್ನುವುದು ಒಂದು‌ ಪ್ರಭಾವಿಗಳ ಕುಟಿಲ ಕೂಟ: ಬಿಜೆಪಿ ಆಕ್ರೋಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News