ಸೋಮಾರಿಗಳಿಗೆ ಭೂಮಿಗೆ ಭಾರ ಅಂತಾರ, ಆದರೆ ಈ ದೇಶದಲ್ಲಿ ಅವರೇ 'ಹಿರೋ' ಗಳು!...ನಂಬ್ತಿರಾ..?

ಜರ್ಮನಿ ಸರ್ಕಾರ ಜಾಹೀರಾತೊಂದನ್ನು ಬಿಡುಗಡೆ ಮಾಡಿದ್ದು ಇದರಲ್ಲಿ  ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸೋಮಾರಿ ಜನರನ್ನು ವೀರರಂತೆ ಚಿತ್ರಿಸಲಾಗಿದೆ.  

Last Updated : Nov 15, 2020, 05:35 PM IST
  • ಕೊರೊನಾ ವೈರಸ್ ನ ಮೂರನೇ ಅಲೆ ಇದೀಗ ವಿಶ್ವದ ಹಲವು ದೇಶಗಳಲ್ಲಿ ನೋಡಲಾಗುತ್ತಿದೆ.
  • ಈ ಕುರಿತು ಜರ್ಮನಿ ಸರ್ಕಾರ ಜಾಹೀರಾತೊಂದನ್ನು ಸಿದ್ಧಪಡಿಸಿದೆ.
  • ಈ ಜಾಹೀರಾತಿನಲ್ಲಿ ಮನೆಯಲ್ಲಿದ್ದು, ಕೊರೊನಾ ವಿರುದ್ಧ ಹೋರಾಡುವವರನ್ನು ಹಿರೋಗಳೆಂದು ಕರೆಯಲಾಗಿದೆ.
ಸೋಮಾರಿಗಳಿಗೆ ಭೂಮಿಗೆ ಭಾರ ಅಂತಾರ, ಆದರೆ ಈ ದೇಶದಲ್ಲಿ ಅವರೇ 'ಹಿರೋ' ಗಳು!...ನಂಬ್ತಿರಾ..? title=

ಬರ್ಲಿನ್: ಜರ್ಮನಿ ಸರ್ಕಾರ ಜಾಹೀರಾತೊಂದನ್ನು ಬಿಡುಗಡೆ ಮಾಡಿದ್ದು ಇದರಲ್ಲಿ  ಕೊರೊನಾ ವೈರಸ್ (Coronavirus) ವಿರುದ್ಧದ ಹೋರಾಟದಲ್ಲಿ ಸೋಮಾರಿ ಜನರನ್ನು ವೀರರಂತೆ ಚಿತ್ರಿಸಲಾಗಿದೆ. ಈ ಕುರಿತು ಸರ್ಕಾರ 90 ಸೆಕೆಂಡ್ ಗಳ ವಿಡಿಯೋವೊಂದನ್ನು ಆನ್ಲೈನ್ ನಲ್ಲಿ ಜಾರಿಗೊಳಿಸಿದೆ. ಈ ಜಾಹೀರಾತಿಯಲ್ಲಿ ವೃದ್ಧ ವ್ಯಕ್ತಿಯೊಬ್ಬರು 2020 ರಲ್ಲಿ ಕೊರೊನಾ ಮಹಾಮಾರಿ ದೇಶಕ್ಕೆ ಬಂದು ವಕ್ಕರಿಸಿದಾಗ ತಾವು ಯಾವ ರೀತಿ ದೇಶದ ಸೇವೆ ಸಲ್ಲಿಸಿದೆ ಎಂಬುದನ್ನು ವಿವರಿಸುತ್ತಿದ್ದಾರೆ. ಆ ವೇಳೆ ತಾವು ಓರ್ವ ವಿದ್ಯಾರ್ಥಿಯಾಗಿರುವುದಾಗಿ ಆ ವ್ಯಕ್ತಿ ಹೇಳಿದ್ದಾರೆ.

ಇದನ್ನು ಓದಿ- ಕೊವಿಡ್ 19 ಮಕ್ಕಳ ಮೇಲೆ ಯಾಕೆ ಪ್ರಭಾವ ಬೀರಲ್ಲ, ರಹಸ್ಯ ಭೇದಿಸಿದ ವಿಜ್ಞಾನಿಗಳು

ಜಾಹೀರಾತಿನಲ್ಲಿರುವ ವ್ಯಕ್ತಿ, 'ಇದ್ದಕ್ಕಿದ್ದಂತೆ ಈ ದೇಶದ ಭವಿಷ್ಯ ನಮ್ಮ ಕೈಗೆ ಬಂದಿತು. ನಂತರ ನಾವು ಧೈರ್ಯವನ್ನು ಒಟ್ಟುಗೂಡಿಸಿದ್ದೇವೆ ಮತ್ತು ನಮ್ಮಿಂದ ನಿರೀಕ್ಷಿಸಲ್ಪಟ್ಟದ್ದನ್ನು ಮತ್ತು ಸರಿಯಾದದ್ದನ್ನು ಮಾಡಿದ್ದೇವೆ. ಅಂದರೆ, ನಾವು ಏನನ್ನೂ ಮಾಡಿಲ್ಲ. ” ಮುಂದುವರೆದು ಮಾತನಾಡುವ ಆ ವ್ಯಕ್ತಿ, “ ಹಗಲು ರಾತ್ರಿ, ನಾವು ಮನೆಯಲ್ಲಿಯೇ ಇದ್ದು ಕರೋನಾ ವೈರಸ್ ವಿರುದ್ಧ ಹೋರಾಡುತ್ತಿದ್ದೇವೆ. ಈ ವೇಳೆ ನಮ್ಮ ಮಂಚ ಮತ್ತು ನಮ್ಮ ತಾಳ್ಮೆಯೇ ನಮ್ಮ ಆಯುಧವಾಗಿತ್ತು." ಎನ್ನುತ್ತಾರೆ.

ಇದನ್ನು ಓದಿ-  Good News: ಭಾರತಕ್ಕೆ ತಲುಪಿದ ರಷ್ಯಾ Corona Vaccine Sputnik-V ಮೊದಲ ಸರದಿ

ಈ ಜಾಹೀರಾತಿನ ಕೊನೆಯ ಭಾಗದಲ್ಲಿ ಅಲ್ಲಿನ ಸರ್ಕಾರ "ಮನೆಯಲ್ಲಿಯೇ ಇದ್ದುಕೊಂಡು ನೀವು ಹಿರೋ ಆಗಬಹುದು" ಎಂಬ ಸಂದೇಶ ನೀಡಿದೆ. ಕೊರೊನಾ ವೈರಸ್ ಪ್ರಕೋಪವನ್ನು ತಡೆಯಲು ಜರ್ಮನಿ ಸರ್ಕಾರ ನವೆಂಬರ್ ತಿಂಗಳಿಂದ ಹೊಸ ನಿರ್ಬಂಧನೆಗಳನ್ನು ವಿಧಿಸಿರುವುದು ಇಲ್ಲಿ ಉಲ್ಲೇಖನೀಯ. ಅಲ್ಲಿ ರೆಸ್ಟೋರೆಂಟ್, ಬಾರ್ ಮತ್ತು ಜಿಮ್ ಗಳನ್ನು ಬಂದ್ ಮಾಡಲಾಗಿದ್ದು, ಜನರು ಒಂದುಗೂಡುವುದರ ಮೇಲೆ ನಿರ್ಬಂಧನೆ ವಿಧಿಸಲಾಗಿದೆ.

Trending News