COVID-19: ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೋನಾ ಪಾಸಿಟಿವ್

ಕರೋನವೈರಸ್ನ ಸೌಮ್ಯ ಲಕ್ಷಣಗಳನ್ನು ಗಮನಿಸಿದ ನಂತರ ಝಾಲಾ, ನಿಮಾ ಮತ್ತು ರನ್ ರನ್ ಮತ್ತು ಕಿಯಂಬೆ ಎಂಬ ಸಿಂಹಗಳಿಗೆ ಕರೋನಾ ಟೆಸ್ಟ್ ಮಾಡಲಾಗಿದೆ.

Last Updated : Dec 10, 2020, 04:56 PM IST
  • ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕರೋನಾವೈರಸ್ ದೃಢಪಟ್ಟಿದೆ
  • ಸಿಂಹಗಳು ಹೇಗೆ ಸೋಂಕಿಗೆ ಒಳಗಾದವು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ
  • ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ ನಾಲ್ಕು ಹುಲಿಗಳು ಮತ್ತು ಮೂರು ಸಿಂಹಗಳಲ್ಲಿ COVID-19 ದೃಢಪಟ್ಟಿತ್ತು
COVID-19: ಮೃಗಾಲಯದ ನಾಲ್ಕು ಸಿಂಹಗಳಿಗೆ ಕರೋನಾ ಪಾಸಿಟಿವ್ title=
Representational Image

ಬಾರ್ಸಿಲೋನಾ: ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿದೆ ಎಂದು ಪಶುವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.  ಜಾಗತಿಕವಾಗಿ ದಾಖಲಾದ ಕೆಲವೇ ಕೆಲವು ಪ್ರಕರಣಗಳಲ್ಲಿ ಇದೂ ಕೂಡ ಒಂದಾಗಿದೆ.

ಕರೋನವೈರಸ್ನ (Coronavirus) ಸೌಮ್ಯ ಲಕ್ಷಣಗಳನ್ನು ಗಮನಿಸಿದ ನಂತರ ಝಾಲಾ, ನಿಮಾ ಮತ್ತು ರನ್ ರನ್ ಮತ್ತು ಕಿಯಂಬೆ ಎಂಬ ಸಿಂಹಗಳಿಗೆ ಕರೋನಾ ಟೆಸ್ಟ್ ಮಾಡಲಾಗಿದೆ. ಇವುಗಳಲ್ಲಿ ಮೂರು ಹೆಣ್ಣು ಸಿಂಹಗಳು ಎನ್ನಲಾಗಿದೆ.

Video: Gir National Parkನ ಗಾರ್ಡ್ ಸಿಂಹದಿಂದ ಸಹಾಯ ಬೇಡಿದಾಗ...

ಸಿಂಹಗಳಲ್ಲದೆ ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೂಡ ಕೋವಿಡ್-19 (Covid 19) ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಸಿಂಹಗಳು ಹೇಗೆ ಸೋಂಕಿಗೆ ಒಳಗಾದವು ಎಂದು ತನಿಖೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಏಪ್ರಿಲ್‌ನಲ್ಲಿ  ಬಾರ್ಸಿಲೋನಾದ ಪಶುವೈದ್ಯಕೀಯ ಸೇವೆಯು ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದಲ್ಲಿ ಅಂತರರಾಷ್ಟ್ರೀಯ ತಜ್ಞರು ಮತ್ತು ಸಹೋದ್ಯೋಗಿಗಳನ್ನು ಸಂಪರ್ಕಿಸಿತು. ಅಲ್ಲಿ ನಾಲ್ಕು ಹುಲಿಗಳು ಮತ್ತು ಮೂರು ಸಿಂಹಗಳಲ್ಲಿ COVID-19 ಪಾಸಿಟಿವ್ ಕಂಡು ಬಂದಿತ್ತು. ಇದೀಗ ಆ ಎಲ್ಲಾ ಹುಲಿಗಳು ಮತ್ತು ಸಿಂಹಗಳು ಗುನಮುಖವಾಗಿವೆ.

Watch Video: ದೆಹಲಿ ಮೃಗಾಲಯದಲ್ಲಿ ಸಿಂಹ ಇದ್ದ ಸ್ಥಳಕ್ಕೆ ಜಿಗಿದು ಕುಳಿತ ಯುವಕ! ಮುಂದೆ ಆಗಿದ್ದೇನು?

ಅಕ್ಟೋಬರ್‌ನಲ್ಲಿ ಯು.ಎಸ್. ಟೆನ್ನೆಸ್ಸೀ ರಾಜ್ಯದ ಝೂ ನಾಕ್ಸ್‌ವಿಲ್ಲೆಯಲ್ಲಿ ಕೆಲವು ಪ್ರಾಣಿಗಳಲ್ಲಿ ಕರೋನಾವೈರಸ್ ಕಂಡು ಬಂದಿತ್ತು.

Trending News