Afghanistan: ತಾಲಿಬಾನ್ ಸರ್ಕಾರ ರಚನೆ; ಕಾಬೂಲ್‌ನಿಂದ ವಾಣಿಜ್ಯ ವಿಮಾನ ಹಾರಾಟ ನಿಷೇಧ

Afghanistan: ಕಾಬೂಲ್ (Kabul) ನ ರಾಷ್ಟ್ರಪತಿ ಭವನದಿಂದ ಅಫ್ಘಾನಿಸ್ತಾನದ (Afghanistan) ಇಸ್ಲಾಮಿಕ್ ಎಮಿರೇಟ್ (Islamic Emirate) ಸ್ಥಾಪನೆಯನ್ನು ರೆಬೆಲ್ ಸಂಸ್ಥೆ ಶೀಘ್ರವೇ ಘೋಷಿಸಲಿದೆ ಎಂದು ತಾಲಿಬಾನ್  (Taliban) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Written by - Yashaswini V | Last Updated : Aug 16, 2021, 07:12 AM IST
  • ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವುದಾಗಿ ತಾಲಿಬಾನ್ ಘೋಷಿಸಿತು
  • ಅಫ್ಘಾನ್ ರಾಷ್ಟ್ರಪತಿ ಭವನದಿಂದ ಇಸ್ಲಾಮಿಕ್ ಎಮಿರೇಟ್ ಅನ್ನು ರಚಿಸುವ ಘೋಷಣೆ
  • ಅಧಿಕಾರ ವರ್ಗಾವಣೆಗಾಗಿ ಸಮಿತಿಯನ್ನೂ ರಚಿಸಲಾಗಿದೆ
Afghanistan: ತಾಲಿಬಾನ್ ಸರ್ಕಾರ ರಚನೆ; ಕಾಬೂಲ್‌ನಿಂದ ವಾಣಿಜ್ಯ ವಿಮಾನ ಹಾರಾಟ ನಿಷೇಧ title=
Image courtesy: Reuters

ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ, ತಾಲಿಬಾನ್  (Taliban) ಭಾನುವಾರ ತಡರಾತ್ರಿ ಸರ್ಕಾರ ರಚಿಸುವುದಾಗಿ ಘೋಷಿಸಿತು. ಈ ಘೋಷಣೆಯ ನಂತರ, ಪ್ರಪಂಚದಾದ್ಯಂತದ ದೇಶಗಳು ಜಾಗರೂಕರಾಗಿವೆ ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ನಾಗರಿಕರು ಮತ್ತು ರಾಯಭಾರಿಗಳನ್ನು ಸ್ಥಳಾಂತರಿಸಲು ಯೋಜನೆ ಆರಂಭಿಸಿವೆ.

ಸಂಸದರನ್ನು ರಜೆಯಿಂದ ಮರಳಿ ಕರೆಯಲಾಗಿದೆ:
ಬ್ರಿಟನ್ ಬಗ್ಗೆ ಹೇಳುವುದಾದರೆ, ಸಂಸದರನ್ನು ಬೇಸಿಗೆ ರಜೆಯಿಂದ ಮರಳಿ ಕರೆಸಿಕೊಳ್ಳಲಾಗುತ್ತಿದೆ. ಇದರಿಂದ ಅಫ್ಘಾನಿಸ್ತಾನದಲ್ಲಿ (Afghanistan) ಹದಗೆಟ್ಟಿರುವ ಪರಿಸ್ಥಿತಿಯನ್ನು ಸಂಸತ್ತಿನಲ್ಲಿ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ. ಮಾಹಿತಿಯ ಪ್ರಕಾರ, ಬುಧವಾರ ಒಂದು ದಿನದ ಸಂಸತ್ತಿನ ಸಭೆ ನಡೆಯಲಿದ್ದು, ಅಲ್ಲಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಚರ್ಚೆಯಾಗಲಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಕಡೆಗೆ ತಾಲಿಬಾನ್ ಮೆರವಣಿಗೆ ಸಾಗುತ್ತಿದ್ದಂತೆ ಪ್ರಧಾನಿ ಬೋರಿಸ್ ಜಾನ್ಸನ್ (Boris Jonson) ಭಾನುವಾರ ತಮ್ಮ ಸಚಿವ ಸಂಪುಟದ ತುರ್ತು ಸಮಿತಿಯ ಸಭೆಯನ್ನು ಕರೆದಿದ್ದಾರೆ.

ಇದನ್ನೂ ಓದಿ- ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಏನಾಗುತ್ತೆ? ಉಗ್ರ ಸಂಘಟನೆಯ ಕ್ರೂರ ಇತಿಹಾಸ ತಿಳಿಯಿರಿ

ಬ್ರಿಟನ್ 600 ಸೈನಿಕರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುತ್ತದೆ!
ಯುಎಸ್ ಅಧ್ಯಕ್ಷ ಜೋ ಬಿಡೆನ್  (Joe Biden) ಅವರು ಅಫ್ಘಾನಿಸ್ತಾನದಿಂದ ಅಮೆರಿಕನ್ ಸೈನ್ಯವನ್ನು ಸೆಪ್ಟೆಂಬರ್ 11 ರೊಳಗೆ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ  ಬ್ರಿಟನ್, ಇತರ ನ್ಯಾಟೋ ಮಿತ್ರರಾಷ್ಟ್ರಗಳಂತೆ, ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಾರಂಭಿಸಿದರು. ಅಫ್ಘಾನಿಸ್ತಾನದಲ್ಲಿನ ಬ್ರಿಟನ್‌ನ ರಾಯಭಾರಿ ಲಾರಿ ಬೈರ್‌ಸ್ಟೊ ಅವರನ್ನು ಸೋಮವಾರ ಬೆಳಿಗ್ಗೆ ಅಫ್ಘಾನಿಸ್ತಾನದಿಂದ ಮರಳಿ ಕರೆಸಲಿದೆ. ಆದರೆ, ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಆದರೆ ಬ್ರಿಟಿಷ್ ಪಡೆಗಳೊಂದಿಗೆ ಕೆಲಸ ಮಾಡುತ್ತಿರುವ ಉಳಿದ ಬ್ರಿಟಿಷ್ ನಾಗರಿಕರು ಮತ್ತು ಅಫ್ಘಾನ್ ನಾಗರಿಕರನ್ನು ಸ್ಥಳಾಂತರಿಸಲು 600 ಸೈನಿಕರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಕಳೆದ ವಾರ ಹೇಳಿದೆ.

ಅಧಿಕಾರ ವರ್ಗಾವಣೆಗಾಗಿ ಸಮಿತಿಯನ್ನು ರಚಿಸಲಾಗಿದೆ:
ಅಫ್ಘಾನಿಸ್ತಾನದ ನಾಯಕರು ತಾಲಿಬಾನ್‌ಗಳನ್ನು ಭೇಟಿ ಮಾಡಲು ಮತ್ತು ಅಧಿಕಾರದ ವರ್ಗಾವಣೆಯನ್ನು ನಿರ್ವಹಿಸಲು ಸಮನ್ವಯ ಮಂಡಳಿಯನ್ನು ಸ್ಥಾಪಿಸಿದ್ದಾರೆ. ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ  (Hamid Karzai) ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, 'ಕೌನ್ಸಿಲ್ ಅನ್ನು ರಾಷ್ಟ್ರೀಯ ಸಾಮರಸ್ಯದ ಉನ್ನತ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ, ಹಿಜ್-ಇ-ಇಸ್ಲಾಮಿಯ ಮುಖ್ಯಸ್ಥ ಗುಲ್ಬುಡಿನ್ ಹೆಕ್ಮತ್ಯಾರ್ ಮತ್ತು ಅವರೇ ನೇತೃತ್ವ ವಹಿಸಲಿದ್ದಾರೆ. ಅರಾಜಕತೆ ತಡೆಯಲು, ಜನರ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಶಾಂತಿಯುತವಾಗಿ ಅಧಿಕಾರವನ್ನು ವರ್ಗಾಯಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ- Afghanistan Crisis: ತಾಲಿಬಾನಿಗಳ ಮುಂದೆ ಕಾಬೂಲ್ ಸರೆಂಡರ್! ಅಧಿಕಾರ ಹಸ್ತಾಂತರಕ್ಕೆ ಮಾತುಕತೆ ಆರಂಭ !

ಕಾಬೂಲ್‌ನಿಂದ ವಾಣಿಜ್ಯ ವಿಮಾನಗಳನ್ನು ನಿಷೇಧಿಸಲಾಗಿದೆ:
ಕಾಬೂಲ್‌ನ 11 ಜಿಲ್ಲೆಗಳನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣದಿಂದ ಎಲ್ಲಾ ವಾಣಿಜ್ಯ ವಿಮಾನಗಳನ್ನು ನಿಷೇಧಿಸಿದೆ. ಅದೇ ಸಮಯದಲ್ಲಿ, ವಿಮಾನ ನಿಲ್ದಾಣದಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರತೆಗೆಯಲು ಸೇನಾ ವಿಮಾನಗಳು ಅಲ್ಲಿಂದ ಹಾರುತ್ತಿವೆ. ಯುಎಸ್ ಮಿಲಿಟರಿ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News