ಅಕ್ರಮ ತೈಲ ಸಂಸ್ಕರಣಾಗಾರದಲ್ಲಿಸ್ಫೋಟ: 100ಕ್ಕೂ ಹೆಚ್ಚು ಜನರ ದುರ್ಮರಣ

ತೈಲ ಕಂಪನಿಗಳ ಒಡೆತನದ ಪೈಪ್‌ಲೈನ್‌ಗಳಿಂದ ಕಚ್ಚಾ ತೈಲವನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಸುಧಾರಿತ ಟ್ಯಾಂಕ್‌ಗಳಲ್ಲಿ ಉತ್ಪನ್ನಗಳಾಗಿ ಬಟ್ಟಿ ಇಳಿಸುವ ಮೂಲಕ ಇಂತಹ ಅಕ್ರಮ ತೈಲ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತವೆ.

Written by - Puttaraj K Alur | Last Updated : Apr 24, 2022, 12:53 PM IST
  • ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾ ಘಟಕದಲ್ಲಿ ಸ್ಫೋಟ ಸಂಭವಿಸಿ ಭಾರೀ ದುರಂತ
  • ಗುರುತಿಸಲಾಗದಷ್ಟು ಸುಟ್ಟು ಕರಕಲಾದ 100ಕ್ಕೂ ಹೆಚ್ಚು ಜನರು
  • ನಿರುದ್ಯೋಗ ಮತ್ತು ಬಡತನದಿಂದ ಅಕ್ರಮ ತೈಲ ಘಟಕಗಳಲ್ಲಿ ಯುವಕರ ಕೆಲಸ
ಅಕ್ರಮ ತೈಲ ಸಂಸ್ಕರಣಾಗಾರದಲ್ಲಿಸ್ಫೋಟ: 100ಕ್ಕೂ ಹೆಚ್ಚು ಜನರ ದುರ್ಮರಣ title=
100ಕ್ಕೂ ಹೆಚ್ಚು ಜನರ ದುರ್ಮರಣ

ನವದೆಹಲಿ: ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾ ಘಟಕದಲ್ಲಿ ಸ್ಫೋಟ ಸಂಭವಿಸಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಕ್ರಮ ಬಂಕರ್ ಸೈಟ್‌ನಲ್ಲಿ ರಾತ್ರಿಯಿಡೀ ನಡೆದ ಸ್ಫೋಟದಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಪರಿಣಾಮ 100ಕ್ಕೂ ಹೆಚ್ಚು ಮಂದಿ ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ ಎಂದು ಪೆಟ್ರೋಲಿಯಂ ಸಂಪನ್ಮೂಲಗಳ ರಾಜ್ಯ ಕಮಿಷನರ್ ಗುಡ್‌ಲಕ್ ಓಪಿಯಾ ಹೇಳಿದ್ದಾರೆ.

ತೈಲ-ಉತ್ಪಾದಿಸುವ ನೈಜರ್ ಡೆಲ್ಟಾದಲ್ಲಿನ ನಿರುದ್ಯೋಗ ಮತ್ತು ಬಡತನವು ಅಕ್ರಮ ಕಚ್ಚಾ ತೈಲ ಸಂಸ್ಕರಣೆಯನ್ನು ಆಕರ್ಷಕ ವ್ಯವಹಾರವನ್ನಾಗಿ ಮಾಡಿದೆ. ಆದರೆ ಇದರಿಂದ ಜನರ ಜೀವನದ ಮೇಲೆ ಮಾರಕ ಪರಿಣಾಮವಾಗುತ್ತಿದೆ. ಪ್ರಮುಖ ತೈಲ ಕಂಪನಿಗಳ ಒಡೆತನದ ಪೈಪ್‌ಲೈನ್‌ಗಳ ಮೂಲಕ ಕಚ್ಚಾ ತೈಲವನ್ನು ಕದಿಯಲಾಗುತ್ತದೆ. ಬಳಿಕ ತಾತ್ಕಾಲಿಕ ಟ್ಯಾಂಕ್‌ಗಳಲ್ಲಿ ಅದನ್ನು ಉತ್ಪನ್ನಗಳಾಗಿ ಸಂಸ್ಕರಿಸಲಾಗುತ್ತದೆ.

ಇದನ್ನೂ ಓದಿ: NRI : ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿ ಶಾಂತಿ ಸೇಥಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ಈ ಅಪಾಯಕಾರಿ ಪ್ರಕ್ರಿಯೆಯು ಅನೇಕ ಮಾರಣಾಂತಿಕ ಘಟನೆಗಳಿಗೆ ಕಾರಣವಾಗಿದೆ. ಕೃಷಿಭೂಮಿ, ತೊರೆಗಳು ಮತ್ತು ಖಾರಿಗಳಲ್ಲಿ ತೈಲ ಸೋರಿಕೆಗಳಿಂದ ಈಗಾಗಲೇ ಹಾನಿಗೊಳಗಾದ ಪ್ರದೇಶ ಸಾಕಷ್ಟು ಕಲುಷಿತಗೊಂಡಿದೆ.  ಅಕ್ರಮ ಇಂಧನ ಖರೀದಿಸಲು ಸರತಿ ಸಾಲಿನಲ್ಲಿದ್ದ ಹಲವಾರು ವಾಹನಗಳು ಸಹ ಸ್ಫೋಟದಲ್ಲಿ ಸುಟ್ಟು ಕರಕಲಾಗಿವೆ ಎಂದು ಯುವಜನ ಮತ್ತು ಪರಿಸರ ಅಡ್ವಕಸಿ ಸೆಂಟರ್ ತಿಳಿಸಿದೆ.

ದಕ್ಷಿಣ ನೈಜೀರಿಯಾದ ಸುತ್ತಲೂ ಹತ್ತಾರು ಅಕ್ರಮ ತೈಲ ವ್ಯವಹಾರ ನಡೆಸುವ ಬಂಕರ್‍ಗಳಿವೆ. ನಿರುದ್ಯೋಗಿ ಯುವಕರು ಜೀವನ ನಡೆಸಲು ತಮ್ಮದೇ ಆದ ತೈಲ ಉತ್ಪಾದಿಸುವ ಕೆಲಸ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಎಂದು ಯುವಕರಿಗೆ ತಿಳಿದಿದ್ದರೂ ಬಡತನದಿಂದಾಗಿ ಅವರು ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಕೈಹಾಕಿದ್ದಾರೆಂದು ತಿಳಿದುಬಂದಿದೆ. ಅಕ್ರಮ ತೈಲ ಬಂಕರ್‍ಗಳನ್ನು ನಡೆಸುತ್ತಿರುವ ಮಾಲೀಕರು ಸದ್ಯ ನಾಪತ್ತೆಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.  

ಅಕ್ಟೋಬರ್‌ನಲ್ಲಿ ರಿವರ್ಸ್ ರಾಜ್ಯದ ಮತ್ತೊಂದು ಅಕ್ರಮ ಸಂಸ್ಕರಣಾಗಾರದಲ್ಲಿ ಸ್ಫೋಟ ಸಂಭವಿಸಿ ಮಕ್ಕಳು ಸೇರಿದಂತೆ ಕನಿಷ್ಠ 25 ಜನರು ಸಾವನ್ನಪ್ಪಿದರು. ತೈಲ ಪೈಪ್‌ಲೈನ್ ವಿಧ್ವಂಸಕತೆ ಮತ್ತು ತೈಲ ಕಳ್ಳತನಗಳು ನೈಜೀರಿಯಾದಲ್ಲಿ ಆಗಾಗ್ಗೆ ವರದಿಯಾಗುತ್ತವೆ. ಇದು ದೇಶಕ್ಕೆ ಭಾರಿ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ.

ಇದನ್ನೂ ಓದಿ: ನಿಲ್ಲದ ರಷ್ಯಾ - ಉಕ್ರೇನ್‌ ಯುದ್ಧ: ಸಾಮೂಹಿಕ ಸಮಾಧಿಯ ಚಿತ್ರ ಬಿಡುಗಡೆ ಮಾಡಿದ ಉಪಗ್ರಹ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News