ಇರಾನ್ ಲ್ಲಿ ರಿಕ್ಟರ್ ಮಾಪಕದಲ್ಲಿ 4.1 ರಷ್ಟು ಭೂಕಂಪ

ರಿಕ್ಟರ್ ಮಾಪಕದಲ್ಲಿ ಭೂಕಂಪ 4.1 ರಷ್ಟು ಇರಾನ್ನ ದಕ್ಷಿಣದ ಆಗ್ನೇಯ ಪ್ರಾಂತ್ಯದ ಕೆರ್ಮನ್ಗೆ ನಲ್ಲಿ ಸಂಭವಿಸಿದೆ.

Last Updated : Jan 11, 2018, 03:50 PM IST
ಇರಾನ್ ಲ್ಲಿ ರಿಕ್ಟರ್ ಮಾಪಕದಲ್ಲಿ 4.1 ರಷ್ಟು ಭೂಕಂಪ  title=

ಟೆಹ್ರಾನ್: ರಿಕ್ಟರ್ ಮಾಪಕದಲ್ಲಿ ಭೂಕಂಪ 4.1 ರಷ್ಟು ಇರಾನ್ನ ದಕ್ಷಿಣದ ಆಗ್ನೇಯ ಪ್ರಾಂತ್ಯದ ಕೆರ್ಮನ್ಗೆ ನಲ್ಲಿ ಸಂಭವಿಸಿದೆ.

ಇರಾನಿನ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎ ಪ್ರಕಾರ, ಭೂಕಂಪನವು ರಾವರ್ ನಗರದ ಸಮೀಪ ಹೋಜ್ಡಾಕ್ ಗ್ರಾಮದಲ್ಲಿ ಉಂಟಾಗಿದೆ. ಈ ಭೂಕಂಪದಲ್ಲಿ ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಡಿಸೆಂಬರ್ 1 ರಂದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ಪ್ರಬಲ ಭೂಕಂಪ ಈ  ಪ್ರದೇಶದ ಮೇಲೆ ಉಂಟಾಗಿತ್ತು  ಎಂದು ವರದಿ ತಿಳಿಸಿದೆ.

ಇರಾನ್ ದೇಶವು ಪ್ರಮುಖ ಭೂಕಂಪ ವಲಯದ ಮೇಲೆ ಇರುವುದರಿಂದ  ದಿನನಿತ್ಯದ ಭೂಕಂಪಗಳಿಗೆ ಈ ದೇಶ ಗುರಿಯಾಗುತ್ತದೆ.

Trending News