Earthquake: ಪಾಕಿಸ್ತಾನದಲ್ಲಿ ಭೂಕಂಪ; 8 ಸಾವು 100ಕ್ಕೂ ಹೆಚ್ಚು ಮಂದಿಗೆ ಗಾಯ!

Earthquake: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತೀವ್ರತೆಯ ಭೂಕಂಪ ಸಂಭವಿಸಿದ್ದು ಮಾನವ, ಪ್ರಾಣಿ ಸೇರಿದಂತೆ ಎಲ್ಲವೂ ನೆಲಸಮವಾಗಿವೆ. ಭೀಕರ ಭೂಕಂಪಯು ಅಮಾಯಕರನ್ನು ಬಲಿ ಪಡೆದು ಜನಸಾಮನ್ಯರ ಕಣ್ಣಿರಿಗೆ ಕಾರಣವಾಗಿದೆ. 

Written by - Zee Kannada News Desk | Last Updated : Mar 22, 2023, 04:13 PM IST
  • ಪಾಕಿಸ್ತಾನದಲ್ಲಿ ತೀವ್ರತೆಯ ಭೂಕಂಪ
  • ಮಾನವ ಪ್ರಾಣಿ ಸೇರಿದಂತೆ ಎಲ್ಲ ನೆಲಸಮ
  • ಅಮಾಯಕರನ್ನು ಬಲಿ ಪಡೆದ ಭೂಕಂಪ
Earthquake: ಪಾಕಿಸ್ತಾನದಲ್ಲಿ ಭೂಕಂಪ; 8 ಸಾವು 100ಕ್ಕೂ ಹೆಚ್ಚು ಮಂದಿಗೆ ಗಾಯ! title=

ಪಾಕಿಸ್ತಾನ: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತೀವ್ರತೆಯ ಭೂಕಂಪ ಸಂಭವಿಸಿದ್ದು ಮನೆಗಳು ಕಚೇರಿ ಸೇರಿದಂತೆ ಎಲ್ಲವೂ ನೆಲಸಮವಾಗಿವೆ. ಭೀಕರ ಭೂಕಂಪಯು ಅಮಾಯಕರನ್ನು ಬಲಿ ಪಡೆದುಕೊಂಡಿದೆ. 

ಪಾಕಿಸ್ತಾನದಲ್ಲಿ  ಪ್ರಬಲ ಭೂಕಂಪನದಿಂದ 11 ಮಂದಿ ಸಾವನ್ನಪ್ಪಿ, 290ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ 100 ಕ್ಕೂ ಹೆಚ್ಚು  ಗಾಯಗೊಂಡವರನ್ನು   ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನದ ತುರ್ತು ಸೇವೆಗಳ ವಕ್ತಾರ ಬಿಲಾಲ್ ಫೈಜಿ ತಿಳಿಸಿದ್ದಾರೆ.

ಇದನ್ನೂ ಓದಿ: ಲಂಡನ್‌ನ ಭಾರತೀಯ ಹೈಕಮಿಷನ್‌ ಮೇಲಿರುವ ತ್ರಿವರ್ಣ ಧ್ವಜ ಕೆಳಗಿಳಿಸಲು ಯತ್ನ

ಭೂಕಂಪದಿಂದಾಗಿ ಕೆಲವು ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.ಪ್ರಬಲವಾದ ನಡುಕವು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅನೇಕ ಜನರ ಮನೆಗಳು   ತೀವ್ರ ಭೂಕಂಪಕ್ಕೆ ಒಳಗಾಗಿದ್ದು . ಇನ್ನು ಅನೇಕ ಮನೆಗಳು ಭೂಕಂಪದ ಪ್ರಭಾಕ್ಕೆ ಒಳಗಾಗಿ ಬಿರುಕು ಬಿಟ್ಟಾಂತ್ತಾಗಿದೆ.

ಇದರ ಪರಿಣಾಮವಾಗಿ ಭಾರತ ಹಾಗೂ ಪಾಕಿಸ್ತಾನದ ಗಡಿಭಾಗಳಲ್ಲಿ ಭೂ ಪ್ರದೇಶ ನಲುಗಿದ್ದಾಂತಾಗಿದೆ ಎಂದು ಹೇಳಲಾಗುತ್ತಿದೆ.  ಭೂಕಂಪದಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ದೇಶದಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ನಿಲ್ಲದ ಭೂಕಂಪದಿಂದಾಗಿ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ  ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Viral Video: ಕಾಗೆ ದಾಳಿಯಿಂದ ಫಜೀತಿಗೊಳಗಾದ ಯುವಕ, ಅಷ್ಟಕ್ಕೂ ಆತ ಮಾಡಿದ್ದೇನು? ವಿಡಿಯೋ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News