ಲಾಕ್‌ಡೌನ್‌ನಿಂದಾಗಿ ಪಾಕಿಸ್ತಾನದಲ್ಲಿ ಹಾಹಾಕಾರ, ರೇಷನ್‍ಗಾಗಿ ಬೀದಿಗಿಳಿದ ಲಕ್ಷಾಂತರ ಜನ

ಪ್ರತಿಭಟನೆಗಳಲ್ಲಿ ಹೆಚ್ಚಿನ ಜನಸಮೂಹವು ಸೇರುತ್ತಿರುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಜಾರಿಗೆ ತಂದಿರುವ ಲಾಕ್‌ಡೌನ್‌ನ ಉದ್ದೇಶವೂ ವಿಫಲವಾಗಿದೆ.  

Last Updated : Apr 6, 2020, 10:06 AM IST
ಲಾಕ್‌ಡೌನ್‌ನಿಂದಾಗಿ ಪಾಕಿಸ್ತಾನದಲ್ಲಿ ಹಾಹಾಕಾರ, ರೇಷನ್‍ಗಾಗಿ ಬೀದಿಗಿಳಿದ ಲಕ್ಷಾಂತರ ಜನ title=

ಇಸ್ಲಾಮಾಬಾದ್: ಕರೋನಾವೈರಸ್ (Coronavirus)  ಬಗ್ಗೆ ಗಮನಹರಿಸಲು ಹೊರಟರೆ ನಮ್ಮ ಜನ ಆಹಾರಕ್ಕಾಗಿ ಪರದಾಡುವಂತಾಗುತ್ತದೆ ಎಂದಿದ್ದ ಇಮ್ರಾನ್ ಖಾನ್ (Imran Khan) ಅವರ ಭವಿಷ್ಯವಾಣಿ ನಿಜವಾದಂತೆ ತೋರುತ್ತಿದೆ. ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೆ ತಂದಿರುವ ಲಾಕ್‌ಡೌನ್ (Lockdown) ಪ್ರತಿ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಒಂದು ದೊಡ್ಡ ಜನಸಮುದಾಯದ ಮುಂದೆ ಹಸಿವಿನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸರ್ಕಾರದಿಂದ ನೀಡಲಾಗುತ್ತಿರುವ ಸಹಾಯದಿಂದಲೂ ವಂಚಿತರಾಗುತ್ತಿರುವ ಜನರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಗಳಲ್ಲಿ ಹೆಚ್ಚಿನ ಜನಸಮೂಹವು ಸೇರುತ್ತಿರುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಜಾರಿಗೆ ತಂದಿರುವ ಲಾಕ್‌ಡೌನ್‌ನ ಉದ್ದೇಶವೂ ವಿಫಲವಾಗಿದೆ. ಇದರಿಂದಾಗಿ ಒಂದೆಡೆ ಕೊರೋನಾವೈರಸ್, ಇನ್ನೊಂದೆಡೆ ಹಸಿವಿನ ಭವಣೆ ಈ ಜನರಿಗೆ ಕಂಟಕವಾಗಿ ಕಾಡುತ್ತಿವೆ. 

Corona Crisisi: ಪಾಕ್ ಪ್ರಧಾನಿ ಮುಂದಿದೆ ಎರಡು ದೊಡ್ಡ ಸವಾಲುಗಳು

ಪಾಕಿಸ್ತಾನ (Pakistan)ದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪಂಜಾಬ್‌ನ ರಾಜಧಾನಿ ಲಾಹೋರ್‌ನಲ್ಲಿರುವ ಗವರ್ನರ್ ಹೌಸ್‌ನಲ್ಲಿ ಹೆಚ್ಚಿನ ಜನ ಜಮಾಯಿಸುತ್ತಿದ್ದು, ನಾವು ಬಡವರು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೆವು. ಈಗಿನ ಪರಿಸ್ಥಿತಿಯಲ್ಲಿ ನಮಗೆ ದೆಳಸವೂ ಸಿಗುತ್ತಿಲ್ಲ ಕೂಲಿಯೂ ಸಿಗುತ್ತಿಲ್ಲ. ಇದರಿಂದಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನ ಗುಂಪು ಕಟ್ಟಿ ಸಾಲು ಸಾಲಲ್ಲಿ ನಿಂತಿರುವುದನ್ನು ಕಂಡು ಪೊಲೀಸ್ ಠಾಣೆಯ  ಹೊರಗೆ ರೇಷನ್ ದೊರೆಯುವುದಾಗಿ ತಿಳಿಸಿ ಅವರನ್ನು ಅಲ್ಲಿಂದ ತೆರಳುವಂತೆ ಮನವಿ ಮಾಡಲಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಅಲ್ಲಿಂದ ಹಿಂದಿರುಗಿದ ಜನರಿಗೆ ಪಡಿತರ ಸಿಗದ ಕಾರಣ ಮತ್ತೆ ನಿರಾಸೆಯಾಗಿದೆ. ಇದರಿಂದ ಕೋಪಗೊಂಡ ಜನತೆ ಗವರ್ನರ್ ಹೌಸ್‌ನ ಹೊರಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ. ನಂತರ ಪೊಲೀಸರು ಜನರನ್ನು ಅಲ್ಲಿಂದ ಓಡಿಸಿದ್ದಾರೆ.

Corona ಭೀತಿ ಮಧ್ಯೆ ಎಲ್ಲಾ ಹೆದ್ದಾರಿಗಳನ್ನು ತೆರೆಯುವಂತೆ ಪಾಕ್ ಪ್ರಧಾನಿ ಇಮ್ರಾನ್ ಆದೇಶ

ಲಾಹೋರ್‌ (Lahor)ನಲ್ಲಿ ಮಾತ್ರವಲ್ಲದೆ ರೇಷನ್ ಸಿಗದ ಕಾರಣ ಪಾಕಿಸ್ತಾನದ ಇತರ ಭಾಗಗಳಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ.  ದೇಶದ ಅತಿದೊಡ್ಡ ನಗರ ಕರಾಚಿಯಲ್ಲಿ ಇಂತಹ ಅನೇಕ ಪ್ರತಿಭಟನೆಗಳು ವರದಿಯಾಗಿವೆ.

ಪಾಕಿಸ್ತಾನದ ಮಾಧ್ಯಮಗಳ ವರದಿಯ ಪ್ರಕಾರ ಸಿಂಧ್‌ (Sindh) ನ ಸರ್ಕಾರಕ್ಕೆ ಇನ್ನೂ ಸಹ ಬಡವರಿಗೆ ಪಡಿತರವನ್ನು ಹೇಗೆ ಒದಗಿಸುವುದು ಎಂಬುದರ ಕುರಿತು ಕ್ರಿಯಾ ಯೋಜನೆಯನ್ನು ರೂಪಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ದಿನಗೂಲಿ ಕಾರ್ಮಿಕರು ಹಸಿವಿನಿಂದ ಪರದಾಡುವಂತಾಗಿದೆ ಎಂದು ತಿಳಿದುಬಂದಿದೆ.

ಕರಾಚಿ (Karachi) ಯಲ್ಲಿ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದು ಯಾರೂ ಸಹ ಹೊರಬರದಂತೆ ಕ್ರಮ ವಹಿಸಲಾಗಿದೆ ಎಂದು 'ವರ್ಲ್ಡ್ ನ್ಯೂಸ್' ವರದಿ ತಿಳಿಸಿದೆ, ಆದರೆ ಕೆಲವು ದಿನಗಳ ಹಿಂದೆ ಬಡ ಕುಟುಂಬಗಳು ಕರಾಚಿಯ ಕೊರಂಗಿ ಪ್ರದೇಶದ ಜಿಲ್ಲಾಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿದರು. ಅಂತೆಯೇ, ನಗರದ ಲಿಯಾರಿ ಪ್ರದೇಶದಲ್ಲಿಯೂ ಜನರ ಪ್ರತಿಭಟನಾ ದೃಶ್ಯಗಳು ಕಂಡು ಬಂದವು.

ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳನ್ನು ಉಲ್ಲೇಖಿಸಿ ವರದಿಯಲ್ಲಿ ಜನರು ಈಗ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ. ಜನರಿಗೆ ಶೀಘ್ರದಲ್ಲೇ ಆಹಾರ ಮತ್ತು ಪಾನೀಯ ತಲುಪದಿದ್ದರೆ, ಪರಿಸ್ಥಿತಿ ಚಿಂತಾಜನಕವಾಗಬಹುದು ಎಂದು ಊಹಿಸಲಾಗಿದೆ. 

Trending News