Largest Railway Station: ವಿಶ್ವದ ಏಕೈಕ ಅತಿದೊಡ್ಡ ರೈಲು ನಿಲ್ದಾಣ ಯಾವುದು ಗೊತ್ತಾ? ಇಲ್ಲಿ ಏಕಕಾಲಕ್ಕೆ 40ಕ್ಕೂ ಹೆಚ್ಚು ರೈಲುಗಳು ನಿಲ್ಲುತ್ತೆ!

World's Largest Railway Station: ವಿಶ್ವದ ಅತಿದೊಡ್ಡ ರೈಲು ನಿಲ್ದಾಣದ ಶೀರ್ಷಿಕೆಯನ್ನು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ನಿಲ್ದಾಣವನ್ನು 1901 ರಿಂದ 1903 ರ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈ ನಿಲ್ದಾಣದ ನಿರ್ಮಾಣದ ಹಿಂದಿನ ಕುತೂಹಲಕಾರಿ ಕಥೆಯೆಂದರೆ, ಆ ಸಮಯದಲ್ಲಿ ಪೆನ್ಸಿಲ್ವೇನಿಯಾದ ರೈಲು ನಿಲ್ದಾಣದೊಂದಿಗೆ ಸ್ಪರ್ಧಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆಯಂತೆ.

Written by - Bhavishya Shetty | Last Updated : Feb 19, 2023, 04:10 PM IST
    • ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ?
    • ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ.
    • ವಿಶ್ವದ ಅತಿದೊಡ್ಡ ರೈಲು ನಿಲ್ದಾಣದ ಶೀರ್ಷಿಕೆಯನ್ನು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.
Largest Railway Station: ವಿಶ್ವದ ಏಕೈಕ ಅತಿದೊಡ್ಡ ರೈಲು ನಿಲ್ದಾಣ ಯಾವುದು ಗೊತ್ತಾ? ಇಲ್ಲಿ ಏಕಕಾಲಕ್ಕೆ 40ಕ್ಕೂ ಹೆಚ್ಚು ರೈಲುಗಳು ನಿಲ್ಲುತ್ತೆ! title=
Largest Railway Station

World's Largest Railway Station grand central terminal: ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ. ನೀವು ಈ ನಿಲ್ದಾಣವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತ ದಲ್ಲಿರಬಹುದು ಎಂದು ಊಹೆ ಮಾಡಬಹುದು. ಆದರೆ ನಿಮ್ಮ ಊಹೆ ತಪ್ಪು. ಅಮೆರಿಕದ (ಯುಎಸ್) ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣ ಇದೆ.

ಇದನ್ನೂ ಓದಿ: Tail Baby: 6 ಸೆಂ.ಮೀ ಬಾಲದೊಂದಿಗೆ ಜನಿಸಿದ ಹೆಣ್ಣು ಮಗು! ಬಾಲ ಕಂಡು ಭಯದಿಂದ ವೈದ್ಯರು ಮಾಡಿದ್ದು…!

ವಿಶ್ವದ ಅತಿದೊಡ್ಡ ರೈಲು ನಿಲ್ದಾಣದ ಶೀರ್ಷಿಕೆಯನ್ನು ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ನಿಲ್ದಾಣವನ್ನು 1901 ರಿಂದ 1903 ರ ಅವಧಿಯಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಈ ನಿಲ್ದಾಣದ ನಿರ್ಮಾಣದ ಹಿಂದಿನ ಕುತೂಹಲಕಾರಿ ಕಥೆಯೆಂದರೆ, ಆ ಸಮಯದಲ್ಲಿ ಪೆನ್ಸಿಲ್ವೇನಿಯಾದ ರೈಲು ನಿಲ್ದಾಣದೊಂದಿಗೆ ಸ್ಪರ್ಧಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆಯಂತೆ.

'ಜನರಿಗೆ ತಿಳಿದಿಲ್ಲದ ಅತಿದೊಡ್ಡ ರೈಲು ನಿಲ್ದಾಣದ ವಿಷಯಗಳು'

ಭಾರೀ ಯಂತ್ರಗಳು ಇಲ್ಲದ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದರೆ ಅದು ಅಚ್ಛರಿಯ ವಿಷಯವೇ. ಈ ಅತಿದೊಡ್ಡ ರೈಲು ನಿಲ್ದಾಣವನ್ನು ನಿರ್ಮಿಸಲು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. ಅಮೇರಿಕನ್ ಮಾಧ್ಯಮ ವರದಿಗಳ ಪ್ರಕಾರ, ಈ ರೈಲು ನಿಲ್ದಾಣವು ಎಷ್ಟು ದೊಡ್ಡದಾಗಿದೆ ಎಂದರೆ ಇದನ್ನು ನಿರ್ಮಿಸಲು 10,000 ಪುರುಷರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ನಿಲ್ದಾಣವು ಅದರ ಗಾತ್ರಕ್ಕೆ ಮಾತ್ರವಲ್ಲದೆ ಅದರ ವಾಸ್ತುಶಿಲ್ಪ ಮತ್ತು ವಿನ್ಯಾಸಕ್ಕೂ ಹೆಸರುವಾಸಿಯಾಗಿದೆ.

ಈ ನಿಲ್ದಾಣದಲ್ಲಿ ಒಟ್ಟು 44 ಪ್ಲಾಟ್‌ಫಾರ್ಮ್‌ಗಳಿದ್ದು, ಇಲ್ಲಿ 44 ರೈಲುಗಳು ಏಕಕಾಲದಲ್ಲಿ ನಿಲ್ಲಬಹುದಾಗಿದೆ. ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ:Turkiye Earthquake: ಅದ್ಭುತ ಪವಾಡ! 13 ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ಪತಿ-ಪತ್ನಿಯ ರಕ್ಷಣೆ

ಈ ನಿಲ್ದಾಣವನ್ನು ಹೊರತುಪಡಿಸಿ ಭಾರತದ ಬಗ್ಗೆ ಮಾತನಾಡುವುದಾದರೆ, ದೇಶದ ಅತಿದೊಡ್ಡ ರೈಲ್ವೆ ಜಂಕ್ಷನ್ ಶೀರ್ಷಿಕೆಯು ಯುಪಿಯ ಮಥುರಾ ಹೆಸರಿನಲ್ಲಿ ನೋಂದಣಿಯಾಗಿದೆ. ರೈಲ್ವೆ ನಿಲ್ದಾಣದ ಮೂಲಕ ಕನಿಷ್ಠ 3 ಮಾರ್ಗಗಳು ಹಾದುಹೋಗುವ ಆ ಸ್ಥಳಗಳನ್ನು ಜಂಕ್ಷನ್‌ಗಳು ಎಂದು ಕರೆಯಲಾಗುತ್ತದೆ. ಈ ಮೂಲಕ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣದಲ್ಲಿದೆ. ಈ ಹಿಂದೆ ಈ ದಾಖಲೆ ಖರಗ್‌ಪುರ ನಿಲ್ದಾಣದ ಹೆಸರಿನಲ್ಲಿ ದಾಖಲಾಗಿತ್ತು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News