Omicron ಆತಂಕದ ನಡುವೆಯೇ ಬಂದ ಡೆಲ್ಟಾಕ್ರಾನ್ Fake ಅಥವಾ Real? WHO ಹೇಳಿದ್ದೇನು?

DeltaCron Is Not Real - ಕೊರೊನಾ ವೈರಸ್ ನ ವೇಗ ಮತ್ತು ಓಮಿಕ್ರಾನ್ (Omicron) ಆತಂಕದ ನಡುವೆ, ಇದೀಗ ಮತ್ತೊಂದು ರೂಪಾಂತರಿಯು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ. ಸೈಪ್ರಿಯೋಟ್ ವಿಜ್ಞಾನಿಗಳು (Cyprus Scientist) ಕೋವಿಡ್ 19 (Covid-19) ರ ರೂಪಾಂತರಿ ಎಂದು ವಿವರಿಸಿರುವ ಡೆಲ್ಟಾಕ್ರಾನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO Report) ನಿಜವಾದ ವೈರಸ್ ಎಂದು ಪರಿಗಣಿಸಿಲ್ಲ.

Written by - Nitin Tabib | Last Updated : Jan 10, 2022, 06:48 PM IST
  • Omicron ನಂತರ, DeltaCron ಹೊಸ ರೂಪಾಂತರವನ್ನು ಹೇಳಲಾಗುತ್ತಿದೆ
  • WHO ತಜ್ಞರು ಸಂಶೋಧನೆಯ ನಂತರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಡೆಲ್ಟಾಕ್ರೌನ್ ನಿಜವಲ್ಲ, ಚಿಂತಿಸಬೇಕಾಗಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Omicron ಆತಂಕದ ನಡುವೆಯೇ ಬಂದ ಡೆಲ್ಟಾಕ್ರಾನ್ Fake ಅಥವಾ Real? WHO ಹೇಳಿದ್ದೇನು? title=
DeltaCron Is Not Real (File Photo)

ನವದೆಹಲಿ: DeltaCron Is Not Real Virus - ಸೈಪ್ರಸ್ ವಿಜ್ಞಾನಿಯೊಬ್ಬರು ತಮ್ಮ ತಂಡವು ಡೆಲ್ಟಾಕ್ರಾನ್ (DeltaCron) ಹೆಸರಿನ ಹೊಸ ಕೋವಿಡ್ -19 (Coronavirus) ರೂಪಾಂತರಿ ಗುರುತಿಸಿದೆ ಎಂದು ಹೇಳಿಕೊಂಡಿದ್ದಾರೆ. ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆಯ (WHO) ಭಾರತೀಯ ಮೂಲದ ಕೋವಿಡ್ ತಜ್ಞರಾದ ಡಾ. ಕೃತಿಕಾ ಕುಪ್ಪಳ್ಳಿ ಅವರು ಡೆಲ್ಟಾಕ್ರಾನ್ ರಿಯಲ್ ವೈರಸ್ ಅಲ್ಲ ಎಂದು ಹೇಳಿದ್ದಾರೆ.

ಡೆಲ್ಟಾಕ್ರಾನ್ ನಿಜವಲ್ಲ
ಎಜೆನ್ಸಿಯೊಂದರ ವರದಿಯ ಪ್ರಕಾರ, ಕೋವಿಡ್ ತಾಂತ್ರಿಕ ತಂಡದ ಭಾಗವಾಗಿರುವ ಕುಪ್ಪಳ್ಳಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ, "ಡೆಲ್ಟಾಕ್ರಾನ್ ನಿಜವಲ್ಲ ಮತ್ತು ಬಹುಶಃ ಸಿಕ್ವೆನ್ಸಿಂಗ್ ಆರ್ಟಿಫ್ಯಾಕ್ಟ್ (ಡೆಲ್ಟಾ ಮಾದರಿಯಲ್ಲಿ (Delta Variant) ಓಮಿಕ್ರಾನ್ ಸಿಕ್ವೆನ್ಸ್ ಅಂಶಗಳ ಪ್ರಯೋಗಾಲಯ ಮಾಲಿನ್ಯ)" ಆಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈರಾಲಜಿಸ್ಟ್ ಟಾಮ್ ಪೀಕಾಕ್, ಹಲವಾರು ಪ್ರಮುಖ ಮಾಧ್ಯಮಗಳು ವರದಿ ಮಾಡಿದ ಸೈಪ್ರಸ್ ಡೆಲ್ಟಾಕ್ರಾನ್ ಸಿಕ್ವೆನ್ಸ ಸಾಕಷ್ಟು ಸ್ಪಷ್ಟವಾಗಿ ಕಲುಷಿತಗೊಂಡಂತೆ ತೋರುತ್ತಿವೆ ಎಂದು ಅವರು ಹೇಳಿದ್ದಾರೆ.

ಇದು ಡೆಲ್ಟಾಕ್ರಾನ್ ವೇರಿಯಂಟ್ ಆಗಿರದೆ, ಮೂಲ ರೂಪಾಂತರಿಯ ಕಂಟಾಮಿನೆಟ್ ರೂಪವಾಗಿದೆ
ವೈರಾಲಜಿಸ್ಟ್ ಟಾಮ್ ಪೀಕಾಕ್ ಡೆಲ್ಟಾಕ್ರಾನ್ ಮೂಲ ರೂಪಾಂತರದ ಪಕ್ಕದ ರೂಪವಾಗಿರಬಹುದು ಮತ್ತು ಇದು ಹೊಸ ರೂಪಾಂತರಿಯಲ್ಲ. ಹೊಸ ರೂಪಾಂತರದ ಜೀನೋಮ್ ಅನುಕ್ರಮವನ್ನು ಮಾಡಿದಾಗ, ಅಂತಹ ಸಂಯೋಜಿತ ಆವೃತ್ತಿಗಳನ್ನು ರಚಿಸಬಹುದು. ಇವುಗಳನ್ನು ಸಾಮಾನ್ಯವಾಗಿ ರೂಪಾಂತರಗಳೆಂದು ಪರಿಗಣಿಸಲಾಗುವುದಿಲ್ಲ. ಅವರು ಮೂಲ COV-2 ವೈರಸ್‌ನಂತಹ ಆನುವಂಶಿಕ ಲಿಂಕ್ ಅನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. 

ಈ ಕುರಿತು 'ದಿ ಮಿರರ್' ಗೆ ಮಾಹಿತಿ ನೀಡಿರುವ ಕೆಂಟ್ ವಿಶ್ವವಿದ್ಯಾನಿಲಯದ ಮಾಲಿಕ್ಯುಲರ್ ಮೆಡಿಸಿನ್ ಪ್ರೊಫೆಸರ್ ಮಾರ್ಟಿನ್ ಮೈಕೆಲಿಸ್ ಮಾದರಿಗಳು ಅಸಲಿಯೇ ಅಥವಾ ಸಿಕ್ವೆನ್ಸ್ ದೋಷ ಅಥವಾ ಕಂಟಾಮಿನೆಟ್ ಗಳಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

"ಸೈಪ್ರಸ್‌ನ ಸಂಶೋಧಕರು ಕೋವಿಡ್‌ಗೆ ಕಾರಣವಾಗುವ SARS-CoV-2 ಕೊರೊನಾ ವೈರಸ್‌ನಿಂದ ಮಾದರಿಗಳನ್ನು ಅನುಕ್ರಮಗೊಳಿಸುತ್ತಿದ್ದಾರೆ ಮತ್ತು ಒಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳ ಗುಣಲಕ್ಷಣಗಳನ್ನು ಸಂಯೋಜಿಸುವ ಜೀನೋಮಿಕ್ ಅನುಕ್ರಮಗಳನ್ನು ಪಡೆದಿದ್ದಾರೆ" ಎಂದು ಅವರು ಹೇಳಿದ್ದಾರೆ. ಇದು ನಿಜವೇ ಅಥವಾ ಸಿಕ್ವೆನ್ಸ್ ದೋಷ ಅಥವಾ ಕಂಟಾಮಿನೆಟ್ ಪರಿಣಾಮವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸೈಪ್ರಸ್‌ನಲ್ಲಿ ಹೊಸ ಕೊರೊನಾವೈರಸ್ ರೂಪಾಂತರ ಡೆಲ್ಟಾಕ್ರಾನ್ ಕಂಡುಬಂದಿದೆ
ಇದಕ್ಕೂ ಮೊದಲು, ಸೈಪ್ರಸ್ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನದ ಮುಖ್ಯಸ್ಥ ಲಿಯೊಂಡಿಯೊಸ್ ಕೊಸ್ಟ್ರಿಯಾಕಿಸ್, ಸೈಪ್ರಸ್‌ನಲ್ಲಿ ಹೊಸ ಕೊರೊನಾವೈರಸ್ ರೂಪಾಂತರ ಡೆಲ್ಟಾಕ್ರಾನ್ ಕಂಡುಬಂದಿದೆ ಎಂದು ಹೇಳಿದ್ದರು. ಕೊಸ್ಟ್ರಿಕಿಸ್ ತನ್ನ ತಂಡವು 25 ಜನರಲ್ಲಿ ಡೆಲ್ಟಾಕ್ರಾನ್ ಎಂಬ ಹೊಸ ರೂಪಾಂತರವನ್ನು ಪತ್ತೆಹಚ್ಚಿದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ-Third Eye For Human: ಇನ್ಮುಂದೆ ಮನುಷ್ಯರು ಕೂಡ ಮುಕ್ಕಣ್ಣರಾಗಬಹುದು, ಹೇಗೆ ತಿಳಿಯಲು ಸುದ್ದಿ ಓದಿ

25 ಮಾದರಿಗಳ ಪೈಕಿ 11 ಜನರನ್ನು ಈ ವೈರಸ್‌ನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ
ಕೊಸ್ಟ್ರಿಕಿಸ್ ಪ್ರಕಾರ, ಸೈಪ್ರಸ್‌ನಲ್ಲಿ ಪಡೆದ 25 ಮಾದರಿಗಳಲ್ಲಿ, 11 ಜನರನ್ನು ವೈರಸ್‌ನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು 14 ಜನರು ಸಾಮಾನ್ಯ ಜನಸಂಖ್ಯೆಯಿಂದ ಬಂದಿವೆ ಎಂದಿದ್ದರು. ಆದರೆ, ಇನ್ನೊಂದೆಡೆ ಹೊಸ ರೂಪಾಂತರಿ ಆತಂಕಕ್ಕೆ ಕಾರಣವಲ್ಲ ಎಂದು ಸೈಪ್ರಸ್ ಆರೋಗ್ಯ ಸಚಿವ ಮಿಖ್ಲಿಸ್ ಹಾಜಿಪಾಂಡೆಲಾಸ್ ಹೇಳಿದ್ದಾರೆ. ಹೊಸ ಸ್ಟ್ರೈನ್ ಬೇರೆಡೆ ಕಂಡುಬಂದಿಲ್ಲ ಮತ್ತು ಪ್ರಕರಣಗಳ ಸಿಕ್ವೆನ್ಸ್ ಅನ್ನು ಕರೋನವೈರಸ್ನಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚುವ ಮುಕ್ತ ಪ್ರವೇಶ ಡೇಟಾಬೇಸ್ GISAID ಗೆ ಕಳುಹಿಸಲಾಗಿದೆ ಎಂದು ಸೈಪ್ರಸ್ ಮೇಲ್ ವರದಿ ಮಾಡಿದೆ.

ಇದನ್ನೂ ಓದಿ-ಸೈಪ್ರಸ್‌ನಲ್ಲಿ ಹೊಸ ಕರೋನವೈರಸ್ ರೂಪಾಂತರ ಡೆಲ್ಟಾಕ್ರಾನ್ ಪತ್ತೆ..!

ಇದೆ ವೇಳೆ ಸ್ಕ್ರಿಪ್ಸ್ ರಿಸರ್ಚ್ ಟ್ರಾನ್ಸ್‌ಲೇಶನಲ್ ಇನ್‌ಸ್ಟಿಟ್ಯೂಟ್‌ನ ಆಣ್ವಿಕ ಜೀವಶಾಸ್ತ್ರಜ್ಞರಾಗಿರುವ  ಎರಿಕ್ ಟೋಪೋಲ್ ಅವರು ಡೆಲ್ಟಾಕ್ರಾನ್ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ತಮ್ಮ ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ-Story Of Champagne: ಸಂಭ್ರಮಾಚರಣೆ ವೇಳೆ ಸಿಂಪಡಿಸಲಾಗುವ ಶಾಂಪೇನ್ ಬಾಟಲಿಯಲ್ಲೆನಿರುತ್ತದೆ? ತಿಳಿಯಲು ವರದಿ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News