ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ! ಟಾರ್ಗೆಟ್ ಕಿಲ್ಲಿಂಗ್ ಹಿಂದಿರುವುದು ಯಾರು ?

Pakistan Dawood Ibrahim:ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಕುಳಿತ ಭಾರತದ ಶತ್ರುಗಳನ್ನು ಒಬ್ಬೊರನ್ನಾಗಿಯೇ ನಿರ್ಮೂಲನೆ ಮಾಡುವವರು ಯಾರು  ಎನ್ನುವ ಪ್ರಶ್ನೆ ಇದೀಗ ಎಲ್ಲರ  ಮನಸ್ಸಿನಲ್ಲಿ ಉದ್ಭವಿಸಿರುವ ಪ್ರಶ್ನೆಯಾಗಿದೆ.

Written by - Ranjitha R K | Last Updated : Dec 18, 2023, 08:28 AM IST
  • ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ವಿಷ ಪ್ರಾಶನ
  • ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
  • ಪಾಕಿಸ್ತಾನದಲ್ಲಿ ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ ಸೇವೆಗಳು ಸ್ಥಗಿತ
ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ! ಟಾರ್ಗೆಟ್ ಕಿಲ್ಲಿಂಗ್ ಹಿಂದಿರುವುದು ಯಾರು ?  title=

Pakistan Dawood Ibrahim: ಪಾಕಿಸ್ತಾನದಲ್ಲಿ ಅಡಗಿರುವ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಮಹತ್ವದ ಸುದ್ದಿಯೊಂದು ಹರಿದಾಡುತ್ತಿದ್ದು, ದಾವೂದ್ ಇಬ್ರಾಹಿಂಗೆ ಯಾರೋ ವಿಷ ಉಣಿಸಿದ್ದಾರೆ ಎನ್ನಲಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತ ಅರ್ಜೂ ಕಾಜ್ಮಿ ಸೇರಿದಂತೆ ಹಲವರು ಹೇಳಿದ್ದಾರೆ. ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಹೊರಬಿದ್ದ ಕೂಡಲೇ ಪಾಕಿಸ್ತಾನದಲ್ಲಿ ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ ಸೇವೆಗಳು ಸ್ಥಗಿತಗೊಂಡಿವೆ. ಈ ಸುದ್ದಿ ನಿನ್ನೆ ರಾತ್ರಿಯಿಂದ ಭಾರತದಲ್ಲಿ ಸಂಚಲನ ಮೂಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಕುಳಿತ ಭಾರತದ ಶತ್ರುಗಳನ್ನು ಒಬ್ಬೊರನ್ನಾಗಿಯೇ ನಿರ್ಮೂಲನೆ ಮಾಡುವವರು ಯಾರು  ಎನ್ನುವ ಪ್ರಶ್ನೆ ಇದೀಗ ಎಲ್ಲರ  ಮನಸ್ಸಿನಲ್ಲಿ ಉದ್ಭವಿಸಿರುವ ಪ್ರಶ್ನೆಯಾಗಿದೆ.

ಇದರ ಹಿಂದೆ ಇರುವವರು ಯಾರು ? : 
ವಾಸ್ತವವಾಗಿ, ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂಬುದು ಸ್ಪಷ್ಟ. ಪಾಕಿಸ್ತಾನ ಸಿಗುತ್ತಿದ್ದ ಫಂಡಿಂಗ್  ಕಡಿಮೆಯಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಭಯೋತ್ಪಾದಕರ ಬಗ್ಗೆ ಪಾಕಿಸ್ತಾನ ತೋರುತ್ತಿದ್ದ ಸಹಾನುಭೂತಿಯೇ ಇದಕ್ಕೆಲ್ಲ ಕಾರಣ. ಇದೀಗ ದೇಶವನ್ನು ಕಾಪಾಡಬೇಕಾದರೆ ಭಯೋತ್ಪಾದಕರಿಂದ ದೂರವಿರಬೇಕು ಎನ್ನುವ ಸತ್ಯವ ಇಲ್ಲಿನ ಆಡಳಿತಕ್ಕೆ ಅರಿವಾಗಿದೆ ಎನ್ನಲಾಗುತ್ತಿದೆ. ಆದರೆ, ಪಾಕಿಸ್ತಾನಕ್ಕೆ ಇದು ಅಷ್ಟು ಸುಲಭವಲ್ಲ. ಹಾಗಾಗಿ ಹೋರಾಟದ ನೆಪದಲ್ಲಿ ಈ ದೊಡ್ಡ ದೊಡ್ಡ ತಲೆಗಳನ್ನು ಉರುಳಿಸುತ್ತಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : Highest Inflation: ಈ ದೇಶಗಳು ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರವನ್ನು ಎದುರಿಸುತ್ತಿವೆ..!

ನಾಲ್ಕು ವರ್ಷಗಳ ನಂತರ ಅಂದರೆ ಕಳೆದ ವರ್ಷವಷ್ಟೇ ಎಫ್‌ಎಟಿಎಫ್‌ನ ಬೂದು ಪಟ್ಟಿಯಿಂದ ಹೊರಗಿತ್ತು. 2008 ರಲ್ಲಿ ಮೊದಲ ಬಾರಿಗೆ ಪಾಕ್ ಈ ಲಿಸ್ಟ್ ನಲ್ಲಿ ಕಾಣಿಸಿಕೊಂಡಿತ್ತು. ಕಳೆದ ವರ್ಷ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ನಿಧಿಯನ್ನು ತಡೆಯುವ ಮಸೂದೆಯನ್ನು ಅಂಗೀಕರಿಸಿದ್ದರಿಂದ ಪಾಕಿಸ್ತಾನಕ್ಕೆ ಪರಿಹಾರ ಸಿಕ್ಕಿತು. ಇದರ ನಂತರ, ಪಾಕಿಸ್ತಾನದ ಆರ್ಥಿಕತೆಯನ್ನು ಸುಧಾರಿಸಲು ವಿಶ್ವದ ಹೂಡಿಕೆಯ ನಿರೀಕ್ಷೆ ಹೆಚ್ಚಾಯಿತು. ಇದಕ್ಕೂ ಮೊದಲು ಇಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳು ಹಿಂಜರಿಯುತ್ತಿದ್ದವು. ಆದರೆ ಪಾಕ್ ನ ಈ ನಿಲುವಿನಿಂದ  ಈ ಕಂಪನಿಗಳು ಪಾಕಿಸ್ತಾನವನ್ನು ನಂಬುವುದು ಸಾಧ್ಯವಾಯಿತು. ಇದಾದ ನಂತರ ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಒಂದರ ಹಿಂದೆ ಒಂದರಂತೆ ಹಲವು ಭಯೋತ್ಪಾದಕರು ಹತರಾಗಿದ್ದಾರೆ.  

ಟಾರ್ಗೆಟ್ ಕಿಲ್ಲಿಂಗ್ ಗೆ ಎರಡನೇ ಪ್ರಮುಖ ಕಾರಣ : 
ಈ ವರ್ಷ ಪಾಕಿಸ್ತಾನದಲ್ಲಿ ಹತ್ತಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಡಿಸೆಂಬರ್ ಆರಂಭದಲ್ಲಿ, ಉಧಮ್‌ಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಲಷ್ಕರ್ ಭಯೋತ್ಪಾದಕ ಅದ್ನಾನ್ ಅಹ್ಮದ್ ಅಲಿಯಾಸ್ ಹಂಜಾಲನನ್ನು ಕರಾಚಿಯಲ್ಲಿ ಕೊಲ್ಲಲಾಯಿತು. ಈ ಪ್ರಕರಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿರುವುದು  ಎನ್ನಲಾಗಿದೆ. ಈತ 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ ಆಪ್ತನಾಗಿದ್ದ ಎನ್ನಲಾಗಿದೆ. 

ಇದನ್ನೂ ಓದಿ : Viral Video: ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿದ ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ!

ಇದಕ್ಕೂ ಒಂದು ದಿನ ಮೊದಲು ಮುಂಬೈ ದಾಳಿಗೆ ಸಂಚು ರೂಪಿಸಿದ್ದ ಲಷ್ಕರ್ ಭಯೋತ್ಪಾದಕ ಸಾಜಿದ್ ಮಿರ್ ಎಂಬಾತನಿಗೆ ಪಾಕಿಸ್ತಾನದ ಜೈಲಿನಲ್ಲಿ ವಿಷ  ನೀಡಲಾಗಿತ್ತು ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದಕ್ಕೂ ಕೆಲವು ತಿಂಗಳುಗಳ ಹಿಂದೆ ಖಲಿಸ್ತಾನಿ ಭಯೋತ್ಪಾದಕರಾದ ಪರಮ್‌ಜಿತ್ ಸಿಂಗ್ ಪಂಜ್ವಾಡ್, ಎಜಾಜ್ ಅಹ್ಮದ್, ಬಶೀರ್ ಅಹ್ಮದ್ ಪೀರ್, ಮುಫ್ತಿ ಖೈಸರ್ ಫಾರೂಕ್ ಅವರಂತಹ ಅನೇಕ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಹತರಾದರು. ಅವರೆಲ್ಲರನ್ನು ಅಪರಿಚಿತ ಬಂದೂಕುಧಾರಿಗಳೇ ಗುಂಡು ಹಾರಿಸಿ ಕೊಂಡಿರುವುದು ಎನ್ನುವುದು ಇಲ್ಲಿ ಗಮನಾರ್ಹ. ಹೀಗಿರುವಾಗ ಭಯೋತ್ಪಾದಕ ಸಂಘಟನೆಗಳ ನಡುವೆ ಆಂತರಿಕ ಕಲಹ ಶುರುವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾರು ಮೇಲೂ ಎನ್ನುವ ವಿಚಾರಕ್ಕಾಗಿ ಮೇಲುಗೈಗಾಗಿ ಯುದ್ಧವನ್ನು ಈ ಹಿಂದೆಯೂ ನೋಡಲಾಗಿದೆ. 

ಈ ವರ್ಷ ಪಾಕಿಸ್ತಾನದಲ್ಲಿ 20 ಹೈಪ್ರೊಫೈಲ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಹೀಗಿರುವಾಗ ಪಾಕಿಸ್ತಾನದ ನೆಲದಲ್ಲಿ ಭಾರತದ ಶತ್ರುಗಳನ್ನು ನಿರ್ನಾಮ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲವೇ ವಾರಗಳ ಹಿಂದೆ, ಈ ಎಲ್ಲಾ ಸಾವು ಐಎಸ್‌ಐನ ಆಳವಾದ ಪಿತೂರಿಯೇ? ಮುಂದಿನ ಟಾರ್ಗೆಟ್ ದಾವೂದ್ ಇಬ್ರಾಹಿಂ ಆಗಿರಬಹುದೇ ಎನ್ನುವ ಪ್ರಶ್ನೆ ಎದ್ದಿತ್ತು. ಇದೀಗ ಕೆಲವು ಗಂಟೆಗಳಿಂದ ದಾವೂದ್‌ಗೆ ವಿಷಪ್ರಾಶನ ಮಾಡಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. 

ಇದನ್ನೂ ಓದಿ : New Year 2024: ವರ್ಷದ ಮೊದಲ ತಿಂಗಳಿಗೆ ಜನವರಿ ಹೆಸರು ಹೇಗೆ ಬಂತು, ಅದರ ಹಿಂದಿನ ಕಥೆ ಏನು ಗೊತ್ತಾ?

ದಾವೂದ್ ಇಬ್ರಾಹಿಂ ಆರೋಗ್ಯ ಹೇಗಿದೆ ? : 
- ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರೋಗ್ಯ ತೀರಾ  ಹದಗೆಟ್ಟಿದೆ. - ದಾವೂದ್ ನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
- ಆಪ್ತರೊಬ್ಬರು ವಿಷ ಉಣಿಸಿದ್ದಾರೆ ಎನ್ನುವ ಊಹಾಪೋಹವಿದೆ. 
- ಎರಡು ದಿನಗಳಿಂದ ಆಸ್ಪತ್ರೆಯಲ್ಲಿದ್ದ  ದಾವೂದ್ ಆರೋಗ್ಯ ಇದೀಗ  ತೀರಾ  ಹದಗೆಟ್ಟಿದೆ. ಆಸ್ಪತ್ರೆಯೊಳಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
- ದಾವೂದ್ ಇರುವ ಮಹಡಿಯಲ್ಲಿ ಬೇರೆ ಯಾವುದೇ ರೋಗಿಯನ್ನು   ದಾಖಲಿಸಿಲ್ಲ. ವೈದ್ಯರನ್ನು ಹೊರತುಪಡಿಸಿ ಕುಟುಂಬದ ಸದಸ್ಯರಿಗೆ ಮಾತ್ರ ಆ ಮಹಡಿಗೆ ಹೋಗಲು ಅವಕಾಶ ನೀಡಲಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News