ನವದೆಹಲಿ: Covishield Vaccine Updates - ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ (Oxford-Astrazeneca Vaccine) ಲಸಿಕೆ Covishield ಎರಡು ಪ್ರಮಾಣಗಳ ನಡುವಿನ ಸಮಯದ ಅಂತರ 10 ತಿಂಗಳು ಇಟ್ಟುಕೊಂಡರೆ, ಕರೋನದ (Coronavirus) ವಿರುದ್ಧದ ಅದರ ಪ್ರತಿರಕ್ಷೆಯು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಮೂರನೆಯ ಬೂಸ್ಟರ್ ಶಾಟ್ ಅನ್ನು ಕೂಡ ನೀಡಿದರೆ, ಅದು ಪ್ರತಿಕಾಯಗಳನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ ಸಾಬೀತಾಗಲಿದೆ ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನದ ವರದಿ ಬಂದ ನಂತರ, ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ದೇಶಗಳಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಸರಾಗವಾಗಿ ನಡೆಸಲು ಇದು ಸಹಾಯ ಮಾಡಲಿದೆ ಎನ್ನಲಾಗಿದೆ. ಲಸಿಕೆಯ ಮೊದಲ ಡೋಸ್ ನಂತರ ಪ್ರತಿಕಾಯಗಳು ಸುಮಾರು ಒಂದು ವರ್ಷದವರೆಗೆ ಇರುತ್ತವೆ ಎಂದು ಅಧ್ಯಯನಹೇಳಿದೆ. ಇದಲ್ಲದೆ ಬೂಸ್ಟರ್ ಡೋಸ್ಗೆ ಸಂಬಂಧಿಸಿದಂತೆ, ಎರಡನೇ ಡೋಸ್ ನಂತರ ಆರು ತಿಂಗಳ ನಂತರ ಬೂಸ್ಟರ್ ಶಾಟ್ ನೀಡಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ಹಾಗೂ Oxford-Astrazeneca ಕಂಪನಿ ಈ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಒಡಂಬಡಿಕೆ ಮಾಡಿಕೊಂಡಿವೆ. ಭಾರತದಲ್ಲಿ ಈ ಲಸಿಕೆಯ ಟ್ರಯಲ್ ಅನ್ನು ಸೀರಮ್ ಇನ್ಸ್ಟಿಟ್ಯೂಟ್ ಕೈಗೊಂಡಿದೆ. ಭಾರತದಲ್ಲಿ ಈ ವ್ಯಾಕ್ಸಿನ್ ಗೆ ಕೋವಿಶೀಲ್ಡ್ (Covishield) ಎಂಬ ಹೆಸರನ್ನು ಕೂಡ ಸೀರಮ್ ಇನ್ಸ್ಟಿಟ್ಯೂಟ್ ಸೂಚಿಸಿದೆ. ದೇಶಾದ್ಯಂತ ಅತಿ ಹೆಚ್ಚು ಸಪ್ಲೈ ಆಗುತ್ತಿರುವ ವ್ಯಾಕ್ಸಿನ್ ಇದಾಗಿದೆ. ಭಾರತದಲ್ಲಿ ಈ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಅಂತರವನ್ನು ಹಲವು ಬಾರಿ ಬದಲಾಯಿಸಲಾಗಿದೆ. ಪ್ರಸ್ತುತ ಈ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಅಂತರವನ್ನು 12-16 ವಾರಗಳವರೆಗೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ- 2DG Commercial Launch: Dr.Reddy's Lab ವತಿಯಿಂದ 2-DG ಕೊರೊನಾ ಔಷಧಿಯ ಕಮರ್ಷಿಯಲ್ ಲಾಂಚ್
ಅತ್ಯಂತ ವೇಗವಾಗಿ ಉತ್ಪಾದಿಸಲಾಗುತ್ತಿದೆ ವ್ಯಾಕ್ಸಿನ್
ಇದುವರೆಗೆ ಜೂನ್ ತಿಂಗಳಲ್ಲಿ 100 ದಶಲಕ್ಷಕ್ಕೂ ಹೆಚ್ಚು ಕೋವಿಶೀಲ್ಡ್ ಲಸಿಕೆಯ ಪ್ರಮಾಣಗಳನ್ನು ಉತ್ಪಾದಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆಯ ಸಾಧ್ಯತೆಯನ್ನು (Coronavirus Third Wave) ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲಾಗಿದೆ. ಭಾರತದಲ್ಲಿ ಜೂನ್ 21 ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಉಚಿತ COVID-19 ವ್ಯಾಕ್ಸಿನೇಷನ್ ಅಭಿಯಾನದ (Vaccination Program) ನಂತರ ಕಳೆದ ಆರು ದಿನಗಳಲ್ಲಿ ಸರಾಸರಿ 69 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ.
ಮತ್ತೊಂದು ವ್ಯಾಕ್ಸಿನ್ ಆಮದು ಮಾಡಿಕೊಳ್ಳಲಿದೆ ಸೀರಮ್ ಇನ್ಸ್ಟಿಟ್ಯೂಟ್
ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೊರೊನಾ ವೈರಸ್ ವಿರುದ್ಧ ರಕ್ಷಣೆ ನೀಡುವ ಮತ್ತೊಂದು ವ್ಯಾಕ್ಸಿನ್ 'ಕೊವೋವ್ಯಾಕ್ಸ್ (Covovax)' ಉತ್ಪಾದನೆಯನ್ನು ಕೂಡ ಆರಂಭಿಸಿದೆ. ಕ್ಲಿನಿಕಲ್ ಟ್ರಯಲ್ ನಲ್ಲಿ ಕೊವೋವ್ಯಾಕ್ಸ್ ಶೇ.90 ರಷ್ಟು ಪರಿಣಾಮಕಾರಿ ಸಾಬೀತಾಗಿದೆ. ಭಾರತದಲ್ಲಿ ಅದರ ಬ್ರಿಜಿಂಗ್ ಟ್ರಯಲ್ ಕೂಡ ಅಂತಿಮ ಹಂತದಲ್ಲಿದೆ. ಇದರರ್ಥ ಶೀಘ್ರದಲ್ಲಿಯೇ ದೇಶಕ್ಕೆ ಮತ್ತೊಂದು ಕೊರೊನಾ ವ್ಯಾಕ್ಸಿನ್ ಸಿಗಲಿದೆ. ಮುಂದಿನ ತಿಂಗಳು ಕೊವೊವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ಕೂಡ ಹೇಳಲಾಗಿದೆ.
ಇದನ್ನೂ ಓದಿ-Coronavirus Third Wave In India: ಭಾರತದಲ್ಲಿ ತಡವಾಗಿ ಬರಲಿದೆ ಮೂರನೇ ಅಲೆ, ನೆಮ್ಮದಿಯ ವರದಿ ನೀಡಿದ ICMR
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.