Jonathan Meijer Sperm Donor: ವೀರ್ಯ ದಾನ ಮಾಡುವುದರ ಕುರಿತು ಹಲವಾರು ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಎಲ್ಲಾ ತಜ್ಞರು ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಹೇಳುತ್ತಲೇ ಇರುತ್ತಾರೆ. ಏತನ್ಮಧ್ಯೆ, ಇತ್ತೀಚೆಗೆ ನೆದರ್ಲ್ಯಾಂಡ್ಸ್ನ ವೀರ್ಯ ದಾನಿಯೊಬ್ಬ ತನ್ನ ಜೀವನದಲ್ಲಿ 550 ಕ್ಕೂ ಹೆಚ್ಚು ಬಾರಿ ವೀರ್ಯವನ್ನು ದಾನ ಮಾಡಿದ ಪ್ರಕರಣವು ಬೆಳಕಿಗೆ ಬಂದಿದೆ. ಇದಕ್ಕಿಂತ ಹೆಚ್ಚು ವೀರ್ಯ ದಾನ ಮಾಡುವಂತಿಲ್ಲ ಎಂದು ಇತ್ತೀಚೆಗೆ ನ್ಯಾಯಾಲಯ ಆತನ ಮೇಲೆ ನಿಷೇಧ ವಿಧಿಸಿದೆ. ನ್ಯಾಯಾಲಯದ ಈ ಆದೇಶದ ನಂತರ, ಈ ವಿಷಯ ಇದೀಗ ವಿಶ್ವಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವೀರ್ಯ ದಾನ ಮಾಡದಂತೆ ನಿಷೇಧ
ವಾಸ್ತವದಲ್ಲಿ, ಈ ಘಟನೆ ನೆದರ್ಲ್ಯಾಂಡ್ಸ್ನಿಂದ ವರದಿಯಾಗಿದೆ. ನೆದರ್ಲ್ಯಾಂಡ್ ನ ಈ ವೀರ್ಯ ದಾನಿಯ ಹೆಸರು ಜೋನಾಥನ್ ಮೇಯರ್. ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ನೆದರ್ಲೆಂಡ್ಸ್ನ ವಿಶೇಷ ನ್ಯಾಯಾಲಯವು 41 ವರ್ಷದ ಜೊನಾಥನ್ ಮೇಯರ್ ಅವನ ಮೇಲೆ ವೀರ್ಯ ದಾನ ಮಾಡದಂತೆ ನಿಷೇಧ ವಿಧಿಸಿದೆ. ಇನ್ನು ಮುಂದೆ ಅವರು ಹೆಚ್ಚಿನ ವೀರ್ಯವನ್ನು ದಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಜೊನಾಥನ್ ಒಬ್ಬ ವೀರ್ಯ ದಾನಿ. ಅವರು ನೆದರ್ಲ್ಯಾಂಡ್ಸ್ನ ಅನೇಕ ಚಿಕಿತ್ಸಾಲಯಗಳಲ್ಲಿ ವೀರ್ಯವನ್ನು ದಾನ ಮಾಡುತ್ತಾನೆ ಮತ್ತು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಈಗ ಇದನ್ನೆಲ್ಲ ಮಾಡದಂತೆ ಆತನ ಮೇಲೆ ನಿರ್ಬಂಧ ಹೇರಲಾಗಿದೆ.
ಸುಳ್ಳು ಒಪ್ಪಂದ
ನೆದರ್ಲ್ಯಾಂಡ್ಸ್ ನಿಯಮಗಳ ಪ್ರಕಾರ ವೀರ್ಯ ದಾನಿಗಳು ಗರಿಷ್ಠ 25 ಮಕ್ಕಳಿಗೆ ಜನ್ಮ ನೀಡಲು 12 ತಾಯಂದಿರಿಗೆ ವೀರ್ಯವನ್ನು ದಾನ ಮಾಡಬಹುದು, ಇದೇ ಕಾರಣದಿಂದ ಆತನ ಮೇಲೆ ಈ ನಿಷೇಧ ವಿಧಿಸಲಾಗಿದೆ. ಆತ ಈ ಮಿತಿಯನ್ನು ಈಗಾಗಲೇ ದಾತಿದ್ದಾನೆ. ಪೋಷಕರಿಗೆ ಸುಳ್ಳು ಹೇಳುವ ಮೂಲಕ ಆತ ಹೆಚ್ಚಿನ ಪ್ರಮಾಣದಲ್ಲಿ ವೀರ್ಯವನ್ನು ದಾನ ಮಾಡುವ ಒಪ್ಪಂದವನ್ನು ಆತ ಮಾಡಿಕೊಳ್ಳುತ್ತಿದ್ದ. ಇದೀಗ ಅದರ ಮೇಲೂ ಕೂಡ ನಿಷೇಧವಿಧಿಸಲಾಗಿದೆ.
ಇದನ್ನೂ ಓದಿ-Viral News: ಹಸ್ತಮೈಥುನ, ಬಿಕಿನಿ ಹುಡುಗಿ ಬಳಿಕ ಇದೀಗ ದೆಹಲಿ ಮೆಟ್ರೊದಲ್ಲಿ ನಡೀತು ಓರಲ್...!
ಈ ವ್ಯಕ್ತಿ 550ಕ್ಕೂ ಹೆಚ್ಚು ಬಾರಿ ವೀರ್ಯ ದಾನ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತಿಳಿಸಲಾಗಿದೆ. ವಿಷಯ ಮುನ್ನೆಲೆಗೆ ಬಂದ ನಂತರ, ಈ ವ್ಯಕ್ತಿ ನಿಜವಾಗಿಯೂ 550 ಮಕ್ಕಳ ತಂದೆಯಾಗಿದ್ದಾನೆಯೇ ಎಂಬ ಚರ್ಚೆಯೂ ಇದೀಗ ಹುಟ್ಟಿಕೊಂಡಿದೆ. ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷವಾಗಿ ಅವರೇ ಆ ಮಕ್ಕಳ ತಂದೆ ಎಂಬುದು ಇದರರ್ಥ! ಅದೇನೇ ಇದ್ದರೂ ಪ್ರಸ್ತುತ ಆತನನ್ನು ಹಾಗೆ ಮಾಡದಂತೆ ನ್ಯಾಯಾಲಯ ತಡೆದಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.