/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Couple caught performing sex acts on crowded Train: ಆಸ್ಟ್ರೇಲಿಯಾದಲ್ಲಿ ಅತ್ಯಂತ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಪ್ರೇಮಿಗಳ ದಿನದಂದು ರೈಲಿನಲ್ಲಿಯೇ ಎಲ್ಲಾ ಮಿತಿಗಳನ್ನು ದಾಟಿದ ಜೋಡಿಯೊಂದು ಎಲ್ಲರ ಮುಂದೆ ಶಾರೀರಿಕ ಸಂಬಂಧ ಬೆಳೆಸಿದೆ. ಈ ಪ್ರಕರಣ ಸಿಡ್ನಿಯಲ್ಲಿ ನಡೆದಿದ್ದು, ಇದನ್ನು ನೋಡಿದ ಜನರು ಗಾಬರಿಗೊಂಡಿದ್ದಾರೆ. ಸಿಡ್ನಿಯ ನಾರ್ಮನ್‌ಹರ್ಸ್ಟ್ ಮತ್ತು ಗಾರ್ಡನ್ ನಡುವೆ ಸಾಗುವ T9 ನಾರ್ದರ್ನ್ ಲೈನ್‌ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Trending News: 5 ಸಾವಿರ ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು.. ಇಲ್ಲಿ ಸಿಕ್ಕಿದೆ ಖಚಿತ 'ಸಾಕ್ಷಿ'

News.com.au ವರದಿಯ ಪ್ರಕಾರ, “ಈ ಜೋಡಿ ರೈಲಿನಲ್ಲಿ ಮನೆಗೆ ಹೋಗುತ್ತಿದ್ದರು. ಆ ಜೋಡಿಯ ನಾಚಿಕೆಗೇಡಿನ ಕೃತ್ಯದಿಂದ ಉಳಿದ ಪ್ರಯಾಣಿಕರೆಲ್ಲರೂ ಅಸಹ್ಯಪಡುತ್ತಿದ್ದರು. ನನಗೆ ತುಂಬಾ ಮುಜುಗರವಾಗಿತ್ತು. ಆದ್ದರಿಂದ ನಾನು ಆ ಕಂಪಾರ್ಟ್‌ಮೆಂಟ್‌ನಿಂದ ದೂರ ಹೋದೆ. ಅಲ್ಲಿನ ಈ ಘಟನೆಯ ದೃಶ್ಯಾವಳಿ ಕೂಡ ಹೊರಬಿದ್ದಿದ್ದು, ಈ ಅವಮಾನಕರ ಕೃತ್ಯವನ್ನು ನಿಲ್ಲಿಸಿ ಬಟ್ಟೆ ಧರಿಸುವಂತೆ ಧ್ವನಿವರ್ಧಕದಲ್ಲಿ ಹೇಳಲಾಗುತ್ತಿತ್ತು” ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳು ಆ ಜೋಡಿಗಳು ಏನು ಮಾಡುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಈ ಬಳಿಕ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಆ ಜೋಡಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. “ಇಂದು ಪ್ರೇಮಿಗಳ ದಿನ ಎಂದು ನನಗೆ ತಿಳಿದಿದೆ. ಆದರೆ ನಿಮ್ಮ ಸುತ್ತಮುತ್ತಲಿನ ಪ್ರಯಾಣಿಕರನ್ನು ಗೌರವಿಸಿ. ನಿಮ್ಮ ವರ್ತನೆ ಅಸಭ್ಯವಾಗಿದೆ” ಎಂದು ಹೇಳಿದ್ದಾರೆ.

NSW ಸಾರಿಗೆ ವಕ್ತಾರರು ಈ ಬಗ್ಗೆ ಮಾತನಾಡಿದ್ದು, “ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಸುರಕ್ಷತೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವು ಜನರ ಕ್ರಮಗಳು ಉಳಿದ ಪ್ರಯಾಣಿಕರಿಗೆ ತೊಂದರೆಗಳನ್ನು ಉಂಟುಮಾಡುತ್ತದೆ. ನಾವು 11000 ಕ್ಯಾಮೆರಾಗಳನ್ನು ಭದ್ರತೆಗಾಗಿ ಅಳವಡಿಸಿದ್ದೇವೆ. ಇನ್ನು ಈ ಸಂಬಂಧ ಎಚ್ಚರಿಕೆಯನ್ನು ನೀಡಿದ್ದೇವೆ. ಸದ್ಯ ಪೊಲೀಸ್ ಸಾರಿಗೆ ಕಮಾಂಡ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದ್ದರಿಂದ ರೈಲಿನಲ್ಲಿ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ಅವರನ್ನು ಹಿಡಿಯಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: YouTube ಹೊಸ ಸಿಇಒ ಭಾರತೀಯ ಮೂಲದ ನೀಲ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು ?

ಇನ್ನು ಸಿಡ್ನಿ ರೈಲಿನಲ್ಲಿ ಜೋಡಿಗಳು ಈ ರೀತಿ ನಾಚಿಕೆಗೇಡಿನ ಕೃತ್ಯಗಳನ್ನು ಎಸಗುವುದು ಮೊದಲನೆಯದಲ್ಲ. ಕಳೆದ ವರ್ಷ ವ್ಯಕ್ತಿಯೊಬ್ಬ ರೈಲಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು ಸಹ ಪತ್ತೆಯಾಗಿತ್ತು. ಇದರ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಆ ಸಂದರ್ಭದಲ್ಲಿ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ 6 ತಿಂಗಳ ಸೆರೆವಾಸ ಮತ್ತು $ 1100 ದಂಡವನ್ನು ಪಾವತಿಸುವಂತೆ ಸೂಚನೆ ನೀಡಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Couple caught performing sex acts on crowded Train in Sydney
News Source: 
Home Title: 

ಕಿಕ್ಕಿರಿದ ರೈಲಿನಲ್ಲಿ ಬೆತ್ತಲೆಯಾಗಿ ಸೆಕ್ಸ್ ಮಾಡಿದ ಜೋಡಿ:‘ಕಾಮ ಪುರಾಣ’ದ ವಿಡಿಯೋ ವೈರಲ್

ಕಿಕ್ಕಿರಿದ ರೈಲಿನಲ್ಲಿ ಬೆತ್ತಲೆಯಾಗಿ ಸೆಕ್ಸ್ ಮಾಡಿದ ಜೋಡಿ: ಪ್ರೇಮಿಗಳ ‘ಕಾಮ ಪುರಾಣ’ದ ವಿಡಿಯೋ ವೈರಲ್
Caption: 
sex on train
Yes
Is Blog?: 
No
Tags: 
Facebook Instant Article: 
Yes
Highlights: 
  • ಆಸ್ಟ್ರೇಲಿಯಾದಲ್ಲಿ ಅತ್ಯಂತ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ
  • ರೈಲಿನಲ್ಲಿಯೇ ಎಲ್ಲಾ ಮಿತಿಗಳನ್ನು ದಾಟಿದ ಜೋಡಿಯೊಂದು ಎಲ್ಲರ ಮುಂದೆ ಶಾರೀರಿಕ ಸಂಬಂಧ ಬೆಳೆಸಿದೆ.
  • ಈ ಪ್ರಕರಣ ಸಿಡ್ನಿಯಲ್ಲಿ ನಡೆದಿದ್ದು, ಇದನ್ನು ನೋಡಿದ ಜನರು ಗಾಬರಿಗೊಂಡಿದ್ದಾರೆ
Mobile Title: 
ಕಿಕ್ಕಿರಿದ ರೈಲಿನಲ್ಲಿ ಬೆತ್ತಲೆಯಾಗಿ ಸೆಕ್ಸ್ ಮಾಡಿದ ಜೋಡಿ:‘ಕಾಮ ಪುರಾಣ’ದ ವಿಡಿಯೋ ವೈರಲ್
Bhavishya Shetty
Publish Later: 
No
Publish At: 
Sunday, February 19, 2023 - 18:38
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
3
Is Breaking News: 
No