Coronavirus Latest News - ಕೊರೊನಾವೈರಸ್ ಪ್ರಕೋಪ ದೇಶದಲ್ಲಿ ಹೆಚ್ಚಾಗದಂತೆ ತಡೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆ (ಕೋವಿಡ್ -19), ಸಾಮಾಜಿಕ ದೂರ, ಬೆಸ-ಸಮ ನಿಯಮ ಮತ್ತು ಇದೀಗ ಮಾಸ್ಕ್ ಪರೀಕ್ಷೆಗಳಂತಹಪ್ರಯತ್ನಗಳು ಮುಂದುವರೆದಿವೆ. ಕರೋನದ ಮೂರನೇ ಅಲೆಯ (Coronavirus Third Wave)ಅಪಾಯವನ್ನು ವರ್ತಿಸಲಾಗುತ್ತಿರುವುದರ ನಡುವೆಯೇ, ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ವೈಸ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲಿ ಇನ್‌ಸ್ಪೈರ್ಡ್ ಎಂಜಿನಿಯರಿಂಗ್‌ನ ಎಂಜಿನಿಯರ್‌ಗಳ ತಂಡ ಪ್ರೋಟೋಟೈಪ್ ಮಾಸ್ಕ್ ವೊಂದನ್ನು ತಯಾರಿಸಿದ್ದು, ಈ ಫೇಸ್ ಮಾಸ್ಕ್ ನಿಮ್ಮ ಉಸಿರಾಟದಲ್ಲಿ COVID-19 ಸೋಂಕನ್ನು ಪತ್ತೆಹಚ್ಚಲು ಸಹಾಯ ಮಾಡಲಿದೆ. ಈ ಪರೀಕ್ಷೆಗೆ ಸುಮಾರು 90 ನಿಮಿಷಗಳ ಕಾಲ ಸಮಯಾವಕಾಶ ಬೇಕಾಗಲಿದೆ.
Engineers have designed a face mask that can diagnose the wearer with Covid-19 within about 90 minutes. The masks are embedded with tiny, disposable sensors that could also be incorporated into clothing or adapted to detect other viruses. https://t.co/KQnRh6in5h pic.twitter.com/UuAahUeTr4
— Massachusetts Institute of Technology (MIT) (@MIT) June 29, 2021
Covid-19 News Today - ಈ ಫೇಸ್ ಬಾಸ್ಕ್ ಅನ್ನು ಬಯೋ ಸೆನ್ಸರ್ ಸ್ಟ್ಯಾಂಡರ್ಡ್ KN-95 (Bio Senser Standard KN-95) ಆಧಾರದ ಮೇಲೆ ತಯಾರಿಸಲಾಗಿದೆ. ಈ ಮಾಸ್ಕ್ ಸಹಾಯದಿಂದ ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾನೆಯೋ ಅಥವಾ ಇಲ್ಲವೋ ಎಂಬುದು ಪತ್ತೆಹಚ್ಚಲು ಸಾಧ್ಯವಾಗಲಿದೆ. ಕೇವಲ ಒಂದು ಬಟನ್ ಒತ್ತುವ ಮೂಲಕ ನೀವು ಮಾಸ್ಕ್ ನಲ್ಲಿರುವ ಸೆನ್ಸರ್ ಅನ್ನು ಸಕ್ರೀಯಗೊಳಿಸಬಹುದು ಎಂದು ಶಾಸ್ತ್ರಜ್ಞರು ಹೇಳಿದ್ದಾರೆ. ಇದರಲ್ಲಿರುವ ರೀಡರ್ ಸ್ಟ್ರಿಪ್ ಕೇವಲ 90 ನಿಮಿಷಗಳ ಒಳಗೆ ಫಲಿತಾಂಶ (Covid-19 Testing Mask) ನೀಡಲಿದೆ. ಇನ್ನೊಂದೆಡೆ ಈ ಮಾಸ್ಕ್ ನಲ್ಲಿ ಸಣ್ಣ ಸಣ್ಣ ಡಿಸ್ಪೊಸೆಬಲ್ ಸೆನ್ಸರ್ ಅಳವಡಿಸಲಾಗಿದ್ದು, ಇವುಗಳನ್ನು ಬೇರೆ ಫೇಸ್ ಮಾಸ್ಕ್ಗಳಿಗೂ ಅಳವಡಿಸಬಹುದು.
ಇದನ್ನೂ ಓದಿ-Flying Car: ಕೇವಲ 2 ನಿಮಿಷಗಳಲ್ಲಿ ವಿಮಾನವಾಗಿ ಬದಲಾಗುತ್ತೆ ಈ ಕಾರು
ಈ ಮಾಸ್ಕ್ ಗಳ ಕುರಿತು ಹೇಳಿಕೆ ನೀಡಿರುವ Vice Institute ನಲ್ಲಿನ ಓರ್ವ Research Scientist ಹಾಗೂ ಅಧ್ಯಯನದ ಸಹ ಲೇಖಕ ಪೀಟರ್ ಗುಯೆನ್, "ತಮ್ಮ ತಂಡ ಇಡೀ ಲ್ಯಾಬ್ ಅನ್ನು ಒಂದೇ ಮಾಸ್ಕ್ ನಲ್ಲಿ ಫಿಟ್ ಮಾಡಲು ಬಯುತ್ತಿದೆ. ಇದರಲ್ಲಿ ಅಳವಡಿಸಲಾಗಿರುವ ಸಿಂಥೆಟಿಕ್ ಬಯಾಲಾಜಿ ಆಧಾರಿತ ಸೆನ್ಸರ್ ಅನ್ನು ಯಾವುದೇ ಫೇಸ್ ಮಾಸ್ಕ್ ನೊಂದಿಗೆ ಬಳಸಬಹುದು. ಈ ಫೇಸ್ ಮಾಸ್ಕ್ ಬಳಸುವುದರಿಂದ ದುಬಾರಿ ಟೆಸ್ಟ್ ಗೆ ಹಣ ಪಾವತಿ ಮಾಡುವುದರಿಂದ ನೀವು ಪಾರಾಗಬಹುದು. ಫೇಸ್ ಮಾಸ್ಕ್ ಹೊರತುಪಡಿಸಿ ನಮ್ಮ ಪ್ರೊಗ್ರಾಮ್ ಯೋಗ್ಯ ಬಯೋಸೆನ್ಸರ್, ವೈರಸ್, ಬ್ಯಾಕ್ಟೀರಿಯಾ, ಟಾಕ್ಸಿನ್ ಹಾಗೂ ಕೆಮಿಕಲ್ ಏಜೆಂಟ್ ಸೇರಿದಂತೆ ಅಪಾಯಕಾರಿ ಪದಾರ್ಥಗಳನ್ನು ಪತ್ತೆಹಚ್ಚಲು ಇತರ ಬಟ್ಟೆಗಳ ಮೇಲೂ ಕೂಡ ಇದನ್ನು ಫಿಟ್ ಮಾಡಬಹುದಾಗಿದೆ" ಎಂದಿದ್ದಾರೆ.
ಇದನ್ನೂ ಓದಿ-Covishield, Covaxin ಲಸಿಕೆ ಪಡೆದವರಿಗೆ ಯುರೋಪ್ ಪ್ರವಾಸಕ್ಕೆ ಅನುಮತಿ ಕೋರಿದ ಭಾರತ
Coronavirus Testing Mask - ಈ ಮಾಸ್ಕ್ ಅನ್ನು ಹಲವರು ಬಳಕೆ ಮಾಡಬಹುದು. ಕೆಲಸದ ನಿಮಿತ್ತ ಕೆಮಿಕಲ್ ಫ್ಯಾಕ್ಟರಿ ಅಥವಾ ಯಾವುದೇ ಗ್ಯಾಸ್ ಪ್ಲಾಂಟ್ ಅಥವಾ ಅಪಾಯಕಾರಿ ಲ್ಯಾಬ್ ನಲ್ಲಿ ಕೆಲಸಮಾಡುವವರಿಗೆ ಈ ಮಾಸ್ಕ್ ಲಾಭಕಾರಿ ಸಾಬೀತಾಗಲಿದೆ. ಅತಿ ದೊಡ್ಡ ಪ್ರಮಾಣದಲ್ಲಿ ಇಂತಹ ಮಾಸ್ಕ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಮತ್ತು ಮಹಾಮಾರಿಯ ಸಂದರ್ಭಗಳಲ್ಲಿ ಬಳಕೆ ಮಾಡಲು ತಂಡ ಉತ್ಪಾದಕರ ಹುಡುಕಾಟದಲ್ಲಿ ತೊಡಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.