China Rapidly Increasing Its Nuclear Capacity: ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ ಚೀನಾ

China Rapidly Increasing Its Nuclear Capacity: ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಚೀನಾದಿಂದ ಬಂದ ಇತ್ತೀಚಿನ ಒಂದು ವರದಿ ಇಡೀ ಜಗತ್ತನ್ನೇ ಚಿಂತೆಗೀಡು ಮಾಡಿದೆ. ತನ್ನ ಮರಭೂಮಿಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮರೆಮಾಚಲು ಚೀನಾ ಅಡಗು ತಾಣಗಳನ್ನು ನಿರ್ಮಿಸುತ್ತಿದೆ ಎಂದು ತಿಳಿದುಬಂದಿದೆ.

Written by - Nitin Tabib | Last Updated : Jul 5, 2021, 08:04 PM IST
  • ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಚೀನಾದಿಂದ ಬಂದ ಇತ್ತೀಚಿನ ಒಂದು ವರದಿ ಇಡೀ ಜಗತ್ತನ್ನೇ ಚಿಂತೆಗೀಡು ಮಾಡಿದೆ.
  • ತನ್ನ ಮರಭೂಮಿಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮರೆಮಾಚಲು ಚೀನಾ ಅಡಗು ತಾಣಗಳನ್ನು ನಿರ್ಮಿಸುತ್ತಿದೆ.
  • ಅಮೆರಿಕಾದ James Martin Center for Nonproliferation Studies ಈ ಸಂಗತಿ ಬಹಿರಂಗಪಡಿಸಿದೆ.
China Rapidly Increasing Its Nuclear Capacity: ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿದೆ ಚೀನಾ title=
China Rapidly Increasing Its Nuclear Capacity (File Photo)

ಬಿಜಿಂಗ್: China Rapidly Increasing Its Nuclear Capacity - ಚೀನಾ (China) ತನ್ನ ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಭಾರಿ ಹೆಚ್ಚಳ ಮಾಡುತ್ತಿದೆ. ಯುಎಸ್ (USA) ಥಿಂಕ್-ಟ್ಯಾಂಕ್ ವಾಯುವ್ಯ ಚೀನಾದ ಗೋಬಿ ಮರುಭೂಮಿಯಲ್ಲಿ ಇಂತಹ 119 ನೆಲೆಗಳನ್ನು ಪತ್ತೆಹಚ್ಚಿದ್ದು, ಇವುಗಳನ್ನು ಚೀನಾದ ಅತಿ ಉದ್ದದ ಖಂಡಾಂತರ ಕ್ಷಿಪಣಿ ಡಾಂಗ್‌ಫೆಂಗ್ - 41 (DF-41) ಗಾಗಿ ನಿರ್ಮಿಸಿದೆ ಎಂದಿದೆ.

ತನ್ನ ನೀತಿಯನ್ನು ಬದಲಾಯಿಸುತ್ತಿದೆಯೇ ಚೀನಾ?
ಈ ವರದಿ ಪ್ರಕಟಗೊಂಡ ಬಳಿಕ ಅಮೇರಿಕಾ ಸೇರಿದಂತೆ ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಏಕೆಂದರೆ ಇದು ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಕನಿಷ್ಠ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಹೊಂದುವ ಚೀನಾದ ನೀತಿಯಲ್ಲಿ ಐತಿಹಾಸಿಕ ಬದಲಾವಣೆಯ ರೂಪ್ಪದಲ್ಲಿ ವಿಕ್ಷೀಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಮಿಲಿಟರಿ ಉದ್ವಿಗ್ನತೆಯನ್ನು ಎದುರಿಸುತ್ತಿರುವ ಭಾರತದ ಚಿಂತೆಯನ್ನು ಕೂಡ ಹೆಚ್ಚಿಸಿದೆ.

ಗೋಬಿ ಮರಭೂಮಿಯಲ್ಲಿ (Gobi Desert) ನಿರ್ಮಿಸಲಾಗಿದೆ ರಹಸ್ಯ ತಾಣಗಳು
ಚೀನಾದ ವಾಯುವ್ಯ ಭಾಗದಲ್ಲಿರುವ ಗೋಬಿ ಮರಭೂಮಿಯಲ್ಲಿರುವ ಗಾನ್ಸು ಪ್ರದೇಶದ ಯುಮೆನ್ ಪಟ್ಟಣದ ಬಳಿ ಪರಮಾಣು ಮಿಸೈಲ್ (Nuclear Weapons) ಗಳನ್ನು ಸಂಗ್ರಹಿಸಲು ಭೂಗತ ತಾಣಗಳನ್ನು ಗಮನಿಸಲಾಗಿದೆ ಮತ್ತು ಇವುಗಳ ಸಂಖ್ಯೆ ಸುಮಾರು 119 ರಷ್ಟಿದೆ. ಅಮೆರಿಕಾದ ಮಂಟೆರ್ ನಲ್ಲಿರುವ James Martin Center for Nonproliferation Studies, ಸ್ಯಾಟಲೈಟ್ ಮೂಲಕ ಕ್ಲಿಕ್ಕಿಸಲಾಗಿರುವ ಚಿತ್ರಗಳ ವಿಶ್ಲೇಷಣೆ ನಡೆಸಿ, ಈ ಹೊಸ ನ್ಯೂಕ್ಲಿಯರ್ ಸೈಟ್ ಚೀನಾದ ಇತರ 16 ನ್ಯೂಕ್ಲಿಯರ್ ಸೈಟ್ ಗಿಂತ ಭಿನ್ನವಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.

ಈ ಸಿಲೋಗಳ (SILO) ನಿರ್ಮಾಣ ಕಳೆದ ವರ್ಷ ಪ್ರಾರಂಭವಾಗಿದೆ, ಆದರೆ ನಿರ್ಮಾಣದ ಪ್ರಕ್ರಿಯೆಯ ವೇಗ ಮತ್ತು ಅವುಗಳ ಗಾತ್ರವು ಬೆಚ್ಚಿಬೀಳಿಸುವಂತಿದೆ. ಈ ವರ್ಷದ ಫೆಬ್ರವರಿಯಲ್ಲಿ, ನಿರ್ಮಾಣ ಕಾರ್ಯ ವೇಗಪಡೆದುಕೊಂಡು, ಪೂರ್ಣಗೊಂಡಿದೆ. 2019 ರಲ್ಲಿ ಬೀಜಿಂಗ್‌ನಲ್ಲಿ ನಡೆದ ಮಿಲಿಟರಿ ಪೆರೇಡ್‌ನಲ್ಲಿ ಚೀನಾ ಮೊದಲ ಬಾರಿಗೆ ಡಿಎಫ್ 41 ಕ್ಷಿಪಣಿಗಳನ್ನು ಪ್ರದರ್ಶಿಸಿತ್ತು. ಕೇವಲ ಒಂದು ವರ್ಷದ ನಂತರ ಚೀನಾ ಈ SILO ಗಳ ನಿರ್ಮಾಣ ಕಾರ್ಯ ಆರಂಭಿಸಿದೆ.

DF 41 ಮಿಸೈಲ್ ಗಳಿಗಾಗಿ ಈ ಠಿಕಾಣಿಗಳನ್ನು ನಿರ್ಮಿಸಲಾಗಿದೆ. 
DF 41 ಮಿಸೈಲ್ ಅನ್ನು ಮೊಬೈಲ್ ಲಾಂಚರ್ಸ್ ಗಳ ಮೂಲಕ ಲಾಂಚ್ ಮಾಡಲಾಗುತ್ತದೆ. ಆದರೆ, ಚೀನಾ (China) ತನ್ನ ಕೆಲವು ಡಿಎಫ್ 41 ಕ್ಷಿಪಣಿಗಳನ್ನು ಶತ್ರುಗಳ ಮಾರಕ ದಾಳಿಗಳಿಂದ  ರಕ್ಷಿಸಬಲ್ಲ ಸ್ಥಳದಲ್ಲಿ ಇರಿಸಲು ಬಯಸಿದೆ ಎಂಬುದು ಈ  SILO ಗಳಿಂದ ಸ್ಪಷ್ಟವಾಗುತ್ತದೆ. ಈ ಸ್ಥಳದಲ್ಲಿ ದೊಡ್ಡ ಪ್ರಮಾಣದ ಅಗೆಯುವಿಕೆ, ಅರೆ ವೃತ್ತಾಕಾರದ ರಚನೆಗಳ ಸ್ಪಷ್ಟ ಚಿತ್ರಗಳು ಕಂಡುಬಂದಿದ್ದು, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಜೂನ್ 30 ರಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಈ ವರದಿಪ್ರಕಟಗೊಂಡ ಬಳಿಕ, ಯುಎಸ್ ಆಡಳಿತವು ಈ ಹೊಸ ಬಹಿರಂಗಪಡಿಸುವಿಕೆಯನ್ನು ಗಂಭೀರ ಎಂದಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುವ ಯಾವುದೇ ಒಪ್ಪಂದದಲ್ಲಿ ಚೀನಾ ಭಾಗಿಯಾಗಿಲ್ಲ. ಏಕೆಂದರೆ ತನ್ನ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಇತರ ಮಹಾಶಕ್ತಿಗಳಿಗಿಂತ ತೀರಾ ಕಡಿಮೆ ಎಂದು ಚೀನಾ ಹೇಳಿಕೊಂಡಿದೆ.

ಇದನ್ನೂ ಓದಿ-COVID-19: "ಅಮೆರಿಕಾದಲ್ಲಿ ಮೃತಪಟ್ಟ ಶೇ 99 ರಷ್ಟು ಜನ ಲಸಿಕೆ ಹಾಕಿಸಿಕೊಳ್ಳದವರು "

ಚೀನಾ ಬಳಿ 350 ಪರಮಾಣು ಬಾಂಬ್ ಗಳಿವೆ
ವಿಶ್ವದ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ನಿಗಾವಹಿಸುವ ಸಂಸ್ಥೆಯಾಗಿರುವ THE STOCKHOLM INTERNATIONAL PEACE RESEARCH INSTITUTE (SIPRI) ವರದಿಯ ಪ್ರಕಾರ ಚೀನಾ ಬಳಿ 350, ಅಮೇರಿಕಾ ಬಳಿ 5550 ಹಾಗೂ ರಷ್ಯಾ ಬಳಿ 6255 ಪರಮಾಣು ಶಸ್ತ್ರಾಸ್ತ್ರಗಳಿವೆ. ಚೀನಾ ಬಳಿ ಇರುವ DF-41 ಕ್ಷಿಪಣಿ 14,000-15,000 ವರೆಗೆ ಮಾರಕ ಸಾಮರ್ಥ್ಯ ಹೊಂದಿದೆ ಹಾಗೂ ಇದರ ರೇಂಜ್ ನಿಂದ ಅಮೇರಿಕಾ ಕೂಡ ಹೊರತಾಗಿಲ್ಲ.

ಇದನ್ನೂ ಓದಿ-Coronavirus Latest Update - ಇನ್ಮುಂದೆ ಮಾಸ್ಕ್ ಮೂಲಕ Corona Positive ಪತ್ತೆಹಚ್ಚಲಾಗುವುದು

ಭಾರತ-ಚೀನಾ ನಡುವೆ ಘರ್ಷಣೆ
ಚೀನಾ ಕಳೆದ ಒಂದು ವರ್ಷದಿಂದ ಭಾರತದೊಂದಿಗೆ ಗಂಭೀರ ಮಿಲಿಟರಿ ಮುಖಾಮುಖಿ ಸ್ಥಿತಿಯಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ, ತೈವಾನ್‌ನೊಂದಿಗಿನ ಚೀನಾದ ಸಂಬಂಧವು ಇದುವರೆಗಿನ ಅತ್ಯಂತ ಉದ್ವಿಗ್ನ ಸ್ಥಿತಿಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಚೀನಾದ ಹೊಸ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ ಇಡೀ ಜಗತ್ತನ್ನೇ ಚಿಂತೆಗೀಡುಮಾಡುತ್ತಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Vladimir Putin On Third World War: 'ನಿಮ್ಮಿಂದ ವಿಶ್ವದ ಮೂರನೇ ಮಹಾಯುದ್ಧ ಸಂಭವಿಸಿದರೆ...', ತೀಕ್ಷ್ಣ ಪ್ರತಿಕ್ರಿಯೆ ನೀಡಿದ Vladimir Putin

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News