Jaishankar: 'ಚೀನಾ ನಮ್ಮ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ, ಆದರೆ....', ಎಂದ ವಿದೇಶಾಂಗ ಸಚಿವ ಜೈಶಂಕರ್

Indo-China Relations: ಭಾರತ-ಚೀನಾ ಸಂಬಂಧಗಳ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು ಪ್ರತಿಕ್ರಿಯಿಸಿದ್ದಾರೆ. ಉಭಯ ದೇಶಗಳ ನಡುವೆ ಸರಿಯಾದ ಕಾರ್ಯ ಸಂಬಂಧವನ್ನು ಹೇಗೆ ನಿರ್ವಹಿಸಬಹುದು ಅವರು ಮಾತನಾಡಿದ್ದಾರೆ.  

Written by - Nitin Tabib | Last Updated : Jun 30, 2023, 09:55 PM IST
  • ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಸ್ತುತ ಹದಗೆಟ್ಟಿರುವುದು ಭಾರತದಿಂದಲ್ಲ, ಆದರೆ ಚೀನಾದಿಂದ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
  • ಎರಡು ಏಷ್ಯನ್ ದೈತ್ಯ ರಾಷ್ಟ್ರಗಳ ನಡುವೆ ಕಾರ್ಯ ಸಂಬಂಧ ಇರಬಹುದೇ? ಎಂದು ಪ್ರಶ್ನಿಸಿದಾಗ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್,
  • " ಚಪ್ಪಾಳೆ ತಟ್ಟಲು ಎರಡೂ ಕೈಗಳು ಬೇಕಾಗುತ್ತವೆ ಮತ್ತು ಚೀನಾ ಕೂಡ ಕಾರ್ಯ ಸಂಬಂಧದಲ್ಲಿ ನಂಬಿಕೆಯನ್ನು ಹೊಂದಿರಬೇಕು" ಎಂದು ಹೇಳಿದ್ದಾರೆ.
Jaishankar: 'ಚೀನಾ ನಮ್ಮ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ, ಆದರೆ....', ಎಂದ ವಿದೇಶಾಂಗ ಸಚಿವ ಜೈಶಂಕರ್ title=

S Jaishankar On China: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನೆರೆಯ ರಾಷ್ಟ್ರ ಚೀನಾವನ್ನು ಮತ್ತೊಮ್ಮೆ ಗುರಿಯಾಗಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಕಾರ್ಯಕ್ರಮದಲ್ಲಿ ಚೀನಾವು ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಆದರೆ ಅದರ ಪ್ರತಿ ಪ್ರಯತ್ನಕ್ಕೂ ತಕ್ಕ ಉತ್ತರವನ್ನು ನೀಡಲಾಗಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, “ನಾವು ನಮ್ಮ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬೇಕು. ಪಾಶ್ಚಿಮಾತ್ಯ ಶಕ್ತಿಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದವು (ಯುಎಸ್ ಮಾಜಿ ಅಧ್ಯಕ್ಷ). ಕ್ಲಿಂಟನ್ ಯುಗದಲ್ಲಿ, ಈ ಪ್ರಯತ್ನವನ್ನು ಸಾರ್ವಜನಿಕವಾಗಿ ಮಾಡಲಾಗುತ್ತಿದ್ದು. ಒಬಾಮಾ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದರು. ನಮ್ಮ ಸಾರ್ವಭೌಮತ್ವವನ್ನು ಚೀನಾ ಉಲ್ಲಂಘಿಸಿದೆ. ಆದರೆ, ಪ್ರತಿ ಪ್ರಯತ್ನಕ್ಕೂ ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ

ಚೀನಾದೊಂದಿಗಿನ ಕಾರ್ಯ ಸಂಬಂಧದ ಬಗ್ಗೆ ಹೇಳಿದ್ದೇನು?
ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಸ್ತುತ ಹದಗೆಟ್ಟಿರುವುದು ಭಾರತದಿಂದಲ್ಲ, ಆದರೆ ಚೀನಾದಿಂದ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಎರಡು ಏಷ್ಯನ್ ದೈತ್ಯ ರಾಷ್ಟ್ರಗಳ ನಡುವೆ ಕಾರ್ಯ ಸಂಬಂಧ ಇರಬಹುದೇ? ಎಂದು ಪ್ರಶ್ನಿಸಿದಾಗ, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, " ಚಪ್ಪಾಳೆ ತಟ್ಟಲು ಎರಡೂ ಕೈಗಳು ಬೇಕಾಗುತ್ತವೆ ಮತ್ತು ಚೀನಾ ಕೂಡ ಕಾರ್ಯ ಸಂಬಂಧದಲ್ಲಿ ನಂಬಿಕೆಯನ್ನು ಹೊಂದಿರಬೇಕು" ಎಂದು ಹೇಳಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಟಿಸಿರುವ ವರದಿಯ ಪ್ರಕಾರ,  "ಒಂದು ಯೋಗ್ಯವಾದ ಕಾರ್ಯ ಸಂಬಂಧವನ್ನು ಕಾಪಾಡಿಕೊಳ್ಳಬೇಕಾದರೆ ಚೀನಾವು ನೈಜ ನಿಯಂತ್ರಣ ರೇಖೆಯಲ್ಲಿ 1993 ಮತ್ತು 1996 ರ ಒಪ್ಪಂದಗಳನ್ನು ಅನುಸರಿಸಬೇಕಾಗುತ್ತದೆ." ಎಂದು ಜೈಶಂಕರ್ ಹೇಳಿದ್ದಾರೆ

ಗಡಿಯಾಚೆಗಿನ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ
"ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಹೆಚ್ಚಿಸಿದ್ದೇವೆ ಮತ್ತು ಇದು ಮುಖ್ಯವಾಗಿದೆ, ನಮ್ಮ ಪಾಶ್ಚಿಮಾತ್ಯ ಕೌಂಟರ್ಪಾರ್ಟ್ಸ್ ಅರ್ಥಮಾಡಿಕೊಂಡಿದ್ದಾರೆ." ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ, "ಗಡಿಯಾಚೆಗಿನ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಉರಿ ಮತ್ತು ಬಾಲಾಕೋಟ್‌ನ ಕ್ರಮಗಳು ನಮ್ಮ ಆಲೋಚನೆಯಲ್ಲಿ ಬದಲಾವಣೆಯನ್ನು ತೋರಿಸುತ್ತವೆ.

ಇದನ್ನೂ ಓದಿ-Lahore ನಲ್ಲಿ ಕುಳಿತು ಭಾರತದ ವಿರುದ್ಧ ಪಿತೂರಿ, ಪಾಕ್-ಐಎಸ್ಐ ಸಂಚು ಬಹಿರಂಗ

ಎರಡು ದಿನಗಳ ಹಿಂದೆ ಚೀನಾ ಬಗ್ಗೆ ವಿದೇಶಾಂಗ ಸಚಿವರು ಹೇಳಿದ್ದೇನು?
ಜೂನ್ 28 ರಂದು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ಬಗ್ಗೆ ಇದೇ ರೀತಿಯ ಮಾತನ್ನು ಹೇಳಿದ್ದರು. ಚೀನಾ ಭಾರತದ ನೆರೆಯ ರಾಷ್ಟ್ರ ಮತ್ತು ದೊಡ್ಡ ದೇಶ ಎಂದು ನಾವು ನಂಬುತ್ತೇವೆ, ಆದರೆ ಯಾವುದೇ ಸಂಬಂಧವನ್ನು ಎರಡೂ ಕಡೆಯವರು ನಿರ್ವಹಿಸಬೇಕು  ಮತ್ತು ಪರಸ್ಪರರ ಹಿತಾಸಕ್ತಿಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದರು .

ಇದನ್ನೂ ಓದಿ-Boarder Dispute: ಭಾರತದೊಂದಿಗಿನ ಗಡಿ ವಿವಾದದಲ್ಲಿ ಹಸ್ತಕ್ಷೇಪ ಬೇಡ, ಆಸ್ಟ್ರೇಲಿಯಕ್ಕೆ ಡ್ರ್ಯಾಗನ್ ಖಡಕ್ ತಾಕೀತು!

ಒಪ್ಪಂದಗಳನ್ನು ಅನುಸರಿಸಬೇಕು ಮತ್ತು ನಮ್ಮ ನಡುವೆ ಮಾಡಿಕೊಂಡ ಒಪ್ಪಂದದಿಂದ ಹಿಂದೆ ಸರಿಯುವುದು ಇಂದಿನ ಕಷ್ಟದ ಸಮಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದರು, ಪರಿಸ್ಥಿತಿ ನಿರ್ಧರಿಸುತ್ತದೆ ಮತ್ತು ಗಡಿಯಲ್ಲಿನ ಪರಿಸ್ಥಿತಿ ಇಂದಿಗೂ ಅಸಾಮಾನ್ಯವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News