ಪ್ರಪಂಚ ಎಷ್ಟೇ ಅಭಿವೃದ್ಧಿ ಹೊಂದಿದರೂ ಕೆಲವು ಪಿಡುಗಗಳು ಮಾತ್ರ ಸಮಾಜದಿಂದ ಇನ್ನೂ ದೂರಾಗದೆ ಉಳಿದಿವೆ. ಅದರಲ್ಲೂ ಬಾಲ್ಯ ವಿವಾಹದಂತಹ ಪದ್ಧತಿಗಳು ಒಂದು ಹೆಣ್ಣು ಮಗುವಿನ ಜೀವನದ ಪ್ರಶ್ನೆಯಾಗಿ ಇಂದಿಗೂ ನಮ್ಮ ಮುಂದಿದೆ. ಏನೇ ಕಾನೂನು ಕಟ್ಟುಪಾಡುಗಳು ಬಂದರೂ ಸಹ ಜಗತ್ತಿನಲ್ಲಿ ಈ ಹೊತ್ತಿನಲ್ಲಿ ಅದೆಷ್ಟು ಮುಗ್ಧ ಬಾಲಕಿಯರು ಈ ಬಾಲ್ಯವಿವಾಹದ ಸುಳಿಗೆ ಸಿಲುಕುತ್ತಿದ್ದಾರೋ ಗೊತ್ತಿಲ್ಲ.
ಇದನ್ನೂ ಓದಿ:
ಸಾಮಾನ್ಯವಾಗಿ ಮದುವೆಯಾದಾಗ ವರ ದಕ್ಷಿಣೆ ಕೊಡುವುದು ಸಾಮಾನ್ಯ. ಆದರೆ ಈ ಪ್ರದೇಶದಲ್ಲಿ ಮಾತ್ರ ವಧು ದಕಿಣೆಯನ್ನು ನೀಡಲಾಗುತ್ತದೆ. ಅದು ಹಸುಗಳನ್ನು ಮದುವೆಯ ಬಳಿಕ ವಧುವಿನ ತವರು ಮನೆಯವರಿಗೆ ನೀಡಲಾಗುತ್ತದೆ. ಈ ಹಸುಗಳ ಆಸೆಗೆ ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹದ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ.
ದಕ್ಷಿಣ ಸುಡಾನ್‌ನಲ್ಲಿ ಕೆಲವು ಯುವತಿಯರನ್ನು ಹಸುಗಳಿಗಾಗಿ ಮದುವೆ ಮಾಡಲಾಗುತ್ತಿದೆಯಂತರೆ. ಅಲ್ಲಿನ ಕಾರ್ಯಕರ್ತೆಯೊಬ್ಬರ ಪ್ರಕಾರ, ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಡಲಾಗುತ್ತಿದೆಯಂತೆ. ಇದಕ್ಕೆ ಬದಲಾಗಿ ಹುಡುಗನ ಮನೆಯವರು ವಧುವಿನ ಕುಟುಂಬಕ್ಕೆ ಹಸುಗಳನ್ನು ನೀಡುತ್ತಾರೆ. ಇದು ಆಕೆಯ ಕುಟುಂಬದವರು ಜೀವನ ಸಾಗಿಸಲು ಸಹಕಾರಿಯಾಗುತ್ತದೆ.
ಹೀಗೆ ಮದುವೆಯ ಹೆಸರಿನಲ್ಲಿ ಹಸುಗಳಿಗಾಗಿ ಹೆಣ್ಣು ಮಕ್ಕಳ ಮಾರಾಟ ನಡೆಯುತ್ತಿದೆ. ತಮ್ಮ ಮನೆಮಗಳನ್ನು ಹಸುಗಳಿಗಾಘಿ ಮದುವೆಯ ಮೂಲಕ ಮಾರಾಟ ಮಾಡಿ ಬಡತನದಲ್ಲಿರುವ ಹೆಣ್ಣು ಮಕ್ಕಳ ಕುಟುಂಬಗಳು ಜೀವನ ನಡೆಸುತ್ತಿವೆಯಂತೆ. ಈ ಬಗ್ಗೆ ಅಲ್ಲಿನ ಕಾರ್ಯಕರ್ತೆಯೊಬ್ಬರು ಪೋಪ್ ಫ್ರಾನ್ಸಿಸ್ ಭೇಟಿ ವೇಳೆ ಪ್ರಸ್ತಾಪಿಸಲು ಮುಂದಾಗಿದ್ದಾರಂತೆ. ಆದರೆ ಅನಾರೋಗ್ಯದ ಕಾರಣ ತಮ್ಮ ಭೇಟಿಯನ್ನು ಪೋಪ್ ಫ್ರಾನ್ಸಿಸ್ ಮುಂದೂಡಿದ್ದಾರೆ.
ಇದನ್ನೂ ಓದಿ:
ದಕ್ಷಿಣ ಸುಡಾನ್‌ನಲ್ಲಿ ಒಬ್ಬ ಹುಡುಗಿಯ ಬೆಲೆಯನ್ನು ಅವಳ ಅಪ್ಪ ಮತ್ತು ಮದುವೆಯಾಗುವ ಹುಡುಗ ಇಬ್ಬರೂ ಸೇರಿ ಮಾತುಕತೆ ನಡೆಸಿ ನಿರ್ಧರಿಸುತ್ತಾರೆ. ವಿವಾಹದ ಬಳಿಕ ಪತಿ, ತಾನು ವರಿಸಿದ ಹುಡುಗಿಯ ಮನೆಯವರಿಗೆ 50 ರಿಂದ 100 ಹಸುಗಳನ್ನು ವಧು ದಕ್ಷಿಣೆ ರೂಪದಲ್ಲಿ ನೀಡುತ್ತಾನೆ. ಅದೊಂದು ವೇಳೆ ಹುಡುಗಿ ನೋಡಲು ಸುಂದರವಾಗಿದ್ದು, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನದಲ್ಲಿದ್ದರೆ 200 ಹಸುಗಳನ್ನು ನೀಡಬೇಕು. ಇತ್ತೀಚೆಗೆ ಬೆಳಕಿಗೆ ಬಂದ ಪ್ರಕರಣವೊಂದರಲ್ಲಿ ಓರ್ವ ಹುಡುಗಿಯ ಮನೆಯವರಿಗೆ 520 ಹಸುಗಳನ್ನು ಮತ್ತು ಕಾರುಗಳನ್ನು ವಧು ದಕಿಣೆಯಾಗಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.