Child Army: Vladimir Putin ಬಳಿ ಇದೆ ಈ ಅಪಾಯಕಾರಿ ಚೈಲ್ಡ್ ಆರ್ಮಿ, 10 ಲಕ್ಷಕ್ಕೂ ಅಧಿಕ ಫೈಟರ್ ಗಳಿಗೆ ಸಿಕ್ಕಿದೆ ಈ ವಿಶೇಷ ತರಬೇತಿ

Russia Child Army: ರಷ್ಯಾ (Russia) ಸೇನೆ ಉಕ್ರೇನ್ (Ukraine) ಮೇಲೆ ಬಾಂಬ್ ದಾಳಿ (Russia-Ukraine War) ನಡೆಸಿದ್ದರಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಆದರೆ ಯಾರಿಗೂ ಕೂಡ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ರಷ್ಯಾ ಬಳಿ 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು  ಹೊಂದಿರುವ ಒಂದು 'ಮಕ್ಕಳ ಸೈನ್ಯ'ವಿದೆ (Russian Child Army). ಇದರಲ್ಲಿ 8 ವರ್ಷದೊಳಗಿನ ಮಕ್ಕಳು ಎಕೆ 47 ನಿಂದ ಯಾರನ್ನಾದರೂ ಕೂಡ ಹೊಡೆಯಬಲ್ಲ ಅಪಾಯಕಾರಿ ತರಬೇತಿಯನ್ನು ಹೊಂದಿದ್ದಾರೆ.

Written by - Nitin Tabib | Last Updated : Mar 5, 2022, 07:45 PM IST
  • 8 ವರ್ಷ ವಯಸ್ಸಿನ ಮಕ್ಕಳ ಅಪಾಯಕಾರಿ ಸೇನೆ
  • 2015ರಲ್ಲಿ ರಷ್ಯಾ ಸಿದ್ಧಪಡಿಸಿದೆ ಈ ಯಂಗ್ ಆರ್ಮಿ
  • 10 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳು ಇದರಲ್ಲಿದ್ದಾರೆ
Child Army: Vladimir Putin ಬಳಿ ಇದೆ ಈ ಅಪಾಯಕಾರಿ ಚೈಲ್ಡ್ ಆರ್ಮಿ, 10 ಲಕ್ಷಕ್ಕೂ ಅಧಿಕ ಫೈಟರ್ ಗಳಿಗೆ ಸಿಕ್ಕಿದೆ ಈ ವಿಶೇಷ ತರಬೇತಿ title=
Russia Child Army (File Photo)

Russia Child Army: ನ್ಯಾಟೋಗೆ (NATO) ಸೇರಲು ಪಣತೊಟ್ಟ ಉಕ್ರೇನ್  ವಿರುದ್ಧ ರಷ್ಯಾ ಸೈನ್ಯವು (Russia-Ukraine Crisis) ಕಳೆದ 10 ದಿನಗಳಿಂದ ಅದರ ಮೇಲೆ ದಾಳಿ ನಡೆಸುತ್ತಿದೆ ಮತ್ತು ಅದರ ಅನೇಕ ನಗರಗಳನ್ನು ವಶಕ್ಕೆ ಪಡೆದುಕೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉಕ್ರೇನ್ ತನ್ನ ಷರತ್ತುಗಳನ್ನು ಒಪ್ಪಿಕೊಳ್ಳುವವರೆಗೂ ದಾಳಿಗಳು ಮುಂದುವರೆಯುಲಿವೆ ಎಂದು ಹೇಳಿದ್ದಾರೆ.

8 ವರ್ಷ ವಯಸ್ಸಿನ ಮಕ್ಕಳ ಅಪಾಯಕಾರಿ ಸೇನೆ
ಇದು ರಷ್ಯಾದ ಸೇನಾ ಶಕ್ತಿಯ ಕೇವಲ ಟ್ರೇಲರ್ ಮಾತ್ರ ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ರಷ್ಯಾ ತನ್ನ ಬಳಿ ಇನ್ನೂ ಅಪಾಯಕಾರಿ ಸೈನ್ಯವನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಯಂಗ್ ಆರ್ಮಿ ಹೆಸರಿನ ಈ ಸೇನೆಯಲ್ಲಿ 8 ವರ್ಷದಿಂದ 18 ವರ್ಷದವರೆಗಿನ ಮಕ್ಕಳು ಸೇನೆಗೆ ಸೇರಿಕೊಂಡಿದ್ದಾರೆ. ಈ ಮಕ್ಕಳು ಗಾತ್ರ ಮತ್ತು ವಯಸ್ಸಿನಲ್ಲಿ ಚಿಕ್ಕವರಾಗಿರಬಹುದು ಆದರೆ ಅಪಾಯಕಾರಿ ಎಕೆ 47 ರೈಫಲ್‌ಗಳು, ಮೆಷಿನ್ ಗನ್‌ಗಳು, ಹ್ಯಾಂಡ್ ಗ್ರೆನೇಡ್‌ಗಳನ್ನು ಬಳಸುವ ತರಬೇತಿಯನ್ನು ಹೊಂದಿದ್ದಾರೆ ಮತ್ತು ಕಣ್ಣು ಮಿಟುಕಿಸುವುದರಲ್ಲಿ ಯಾವುದೇ ಕೆಲಸವನ್ನು ಸಲೀಸಾಗಿ ಮಾಡಬಲ್ಲರು ಎನ್ನಲಾಗಿದೆ.

2015ರಲ್ಲಿ ರಷ್ಯಾ ಸಿದ್ಧಪಡಿಸಿದೆ ಈ ಯಂಗ್ ಆರ್ಮಿ
'ದಿ ಸನ್' ನಲ್ಲಿ ಪ್ರಕಟಗೊಂಡ ಒಂದು ವರದಿ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು 2015 ರಲ್ಲಿಯೇ ಈ 'ಯಂಗ್ ಆರ್ಮಿ' ಸ್ಥಾಪಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಈ ಸೈನ್ಯಕ್ಕೆ  ಆಲ್-ರಷ್ಯಾ ಯಂಗ್ ಆರ್ಮಿ ನ್ಯಾಷನಲ್ ಮಿಲಿಟರಿ ಪೇಟ್ರಿಯಾಟಿಕ್ ಸೋಶಿಯಲ್ ಮೂವ್ಮೆಂಟ್ ಅಸೋಸಿಯೇಷನ್ (All-Russia Young Army National Military Patriotic Social Movement Association) ​​ಎಂದು ಹೆಸರಿಟ್ಟಿದ್ದಾರೆ.

10 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳು ಇದರಲ್ಲಿದ್ದಾರೆ
ಈ ‘ಯಂಗ್ ಆರ್ಮಿ’ಗೆ ಮುಖ್ಯವಾಗಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳೇ ಸೇರಿಕೊಳ್ಳುತ್ತಾರೆ. ಈ 'ಯಂಗ್ ಆರ್ಮಿ'ಯಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಮಕ್ಕಳು ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ರಷ್ಯಾದಲ್ಲಿ 'ಯುನಾರ್ಮಿಯಾ' (YunArmia) ಎಂದು ಕರೆಯಲಾಗುತ್ತದೆ. ದೇಶಪ್ರೇಮ ತುಂಬಿರುವ ಈ ಸೇನೆಯಲ್ಲಿ ಹುಡುಗ - ಹುಡುಗಿಯರಿಗೆ ಸಮಾನವಾಗಿ ಸೈನಿಕ ತರಬೇತಿ ನೀಡಲಾಗುತ್ತದೆ. ರಷ್ಯಾ ವಿರೋಧಿ ದೇಶಗಳು ಈ  ಸೇನೆಯನ್ನು ಹಿಟ್ಲರ್ ಯೂತ್ ಎಂದು ಟೀಕಿಸುತ್ತವೆ.

ಅಪಾಯಕಾರಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತದೆ
ರಷ್ಯಾದಲ್ಲಿ 'ಯಂಗ್ ಆರ್ಮಿ' ಬಗ್ಗೆ ಅಲ್ಲಿನ ಜನರಿಗೆ ಸಕಾರಾತ್ಮಕ ಭಾವನೆ ಇದೆ. ಅವರು ಮಕ್ಕಳಲ್ಲಿ ಶಿಸ್ತನ್ನು ಬೆಳೆಸಲು ಮತ್ತು ಬರಬಹುದಾದ ಯಾವುದೇ ರೀತಿಯ ಬಿಕ್ಕಟ್ಟನ್ನು ಎದುರಿಸಲು ತಮ್ಮನ್ನು ತಾವು ಸಿದ್ಧಗೊಳಿಸಲು ಉತ್ತಮ ಸಾಧನವೆಂದು ಪರಿಗಣಿಸುತ್ತಾರೆ. ಈ ಯುವ ಸೇನೆಯಲ್ಲಿ ಮಕ್ಕಳಿಗೆ ಮಿಲಿಟರಿ ಡ್ರಿಲ್ ಹೇಳಿಕೊಡಲಾಗುತ್ತದೆ. ಅವರಿಗೆ ಶಸ್ತ್ರಾಸ್ತ್ರ ಬಳಕೆ ಮಾಡುವುದನ್ನು, ಅವುಗಳನ್ನು ನಿರ್ವಹಿಸುವುದು, ಕುಸ್ತಿ ಅಭ್ಯಾಸ ಮತ್ತು ಪ್ಯಾರಾಚೂಟ್‌ನೊಂದಿಗೆ ಜಿಗಿಯುವ ತರಬೇತಿಯನ್ನು ನೀಡಲಾಗುತ್ತದೆ.

Sergei Shoigu ಸಲಹೆಯ ಮೇರೆಗೆ ಇದನ್ನು ಆರಂಭಿಸಲಾಗಿದೆ
ಸೆರ್ಗೆಯ್ ಶೋಯಿಗು ರಷ್ಯಾದಲ್ಲಿ ಈ 'ಯಂಗ್ ಆರ್ಮಿ' ಅನ್ನು ಪ್ರಾರಂಭಿಸುವ ಹಿಂದಿನ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಅವರು ರಷ್ಯಾದ ರಕ್ಷಣಾ ಸಚಿವರಾಗಿದ್ದಾರೆ ಮತ್ತು ವ್ಲಾಡಿಮಿರ್ ಪುಟಿನ್ ಅವರ ವಿಶ್ವಾಸಾರ್ಹ ಮಿತ್ರ ಎಂದು ಪರಿಗಣಿಸಲಾಗಿದೆ. "ನಮ್ಮ ದೇಶದ ವಿರುದ್ಧದ ಹೋರಾಟದಲ್ಲಿ ಉಕ್ರೇನಿಯನ್ ಜನರನ್ನು ಬಳಸಲು ಪ್ರಯತ್ನಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ಬೆದರಿಕೆಯಿಂದ ರಷ್ಯಾದ ಒಕ್ಕೂಟವನ್ನು ರಕ್ಷಿಸುವುದು ನಮಗೆ ಮುಖ್ಯ ಉದ್ದೇಶವಾಗಿದೆ" ಎಂದು ಅವರು ಈ ವಾರ ಹೇಳಿದ್ದರು. ನಾವು ಉಕ್ರೇನ್ ಅನ್ನು ಸಶಸ್ತ್ರೀಕರಣ ಮತ್ತು ಡಿ-ನಾಜಿಫೈ ಮಾಡಲು ಪ್ರತಿಜ್ಞೆ ಮಾಡಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರು.

ಇದನ್ನೂ ಓದಿ-Scorpion Snake Soup: ಹಾವು ಮತ್ತು ಚೇಳುಗಳಿಂದ ತಯಾರಾಗುತ್ತೆ ಈ ಸೂಪ್, ಇಷ್ಟಪಟ್ಟು ಸೇವಿಸುತ್ತಾರಂತೆ ಜನ

ವಿದೇಶಿ ಭಾಷೆಗಳ ಶಿಕ್ಷಣ ಕೂಡ ನೀಡಲಾಗುತ್ತದೆ
ಈ ಬಾಲಸೇನೆಯಲ್ಲಿ ಹುಡುಗಿಯರು ವಾರದಲ್ಲಿ 6 ದಿನಗಳ ಕಾಲ ಶಾಲೆಗಳಲ್ಲಿ ಮಿಲಿಟರಿ ತರಬೇತಿ ಪಡೆಯುತ್ತಾರೆ. ಈ ಅವಧಿಯಲ್ಲಿ, ಅವರಿಗೆ ಹೊಲಿಗೆ, ಅಡುಗೆ, ಚಿತ್ರಕಲೆ, ಹಾಡುಗಾರಿಕೆ, ಫೆನ್ಸಿಂಗ್, ನೃತ್ಯ, ಪ್ರಥಮ ಚಿಕಿತ್ಸೆ, ಆತ್ಮರಕ್ಷಣೆ ಮತ್ತು ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ, ಅವರು ಅನೇಕ ವಿದೇಶಿ ಭಾಷೆಗಳನ್ನು ಓದುವುದು, ಮಾತನಾಡುವುದು ಮತ್ತು ಬರೆಯುವಲ್ಲಿ ಪ್ರವೀಣರಾಗಿದ್ದಾರೆ.

ಇದನ್ನೂ ಓದಿ-Council of Baltic Sea States ನಿಂದ ರಷ್ಯಾ, ಬೆಲಾರಸ್ ಅಮಾನತು

ಇದೇ ವೇಳೆ, ಹುಡುಗರಿಗೆ ನೀಡುವ ತರಬೇತಿಯಲ್ಲಿ, ಅವರ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಮತ್ತು ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸುವುದರ ಮೇಲೆ ಸಂಪೂರ್ಣ ಗಮನವನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಹುಡುಗರು ಮತ್ತು ಹುಡುಗಿಯರನ್ನು ಹಾಲ್ ಆಫ್ ಫೇಮ್ ಎಂಬ ವಿಶೇಷ ಗುಂಪಿನಲ್ಲಿ ಸೇರಿಸಲಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರ ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸುತ್ತದೆ.

ಇದನ್ನೂ ಓದಿ-ಒಂದಲ್ಲ, ಎರಡಲ್ಲ... ಒಂದೇ ದಿನ ಮೂರು ಮದುವೆಯಾಗಿದ್ದಾನೆ ಈ ಭೂಪ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News