Cancer: Alcohol ಹಾಗೂ Cancer ಗೆ ಸಂಬಂಧಿಸಿದ ಬೆಚ್ಚಿಬೀಳಿಸುವ ವರದಿ ಬಹಿರಂಗ

Relation  Between Alcohol And Cancer - ಲ್ಯಾನ್ಸೆಂಟ್ ಆಂಕೊಲಾಜಿಯ(Lancet Oncology) ಆವೃತ್ತಿಯಲ್ಲಿ ಆಲ್ಕೊಹಾಲ್ ಸೇವನೆಯ ಕುರಿತು ಒಂದು ವರದಿ ಪ್ರಕಟಗೊಂಡಿದ್ದು, ಈ ವರದಿಯ ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ.

Written by - Nitin Tabib | Last Updated : Aug 4, 2021, 06:55 PM IST
  • ಕ್ಯಾನ್ಸರ್ ನ ಶೇ.4ರಷ್ಟು ಪ್ರಕರಣಗಳು ಕೇವಲ ಅಲ್ಕೋಹಾಲ್ ಕಾರಣ ಸಂಭವಿಸಿವೆ.
  • ಮದ್ಯಸೇವನೆಗೆ ಸಂಬಂಧಿಸಿದ ಕ್ಯಾನ್ಸರ್ನ ಶೇ.75ರಷ್ಟು ಪ್ರಕರಣಗಳು ಕೇವಲ ಪುರುಷರಲ್ಲಿ ಗಮನಿಸಲಾಗಿದೆ.
  • ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚು ಕಾಮನ್ ಆಗಿದೆ.
Cancer: Alcohol ಹಾಗೂ Cancer ಗೆ ಸಂಬಂಧಿಸಿದ ಬೆಚ್ಚಿಬೀಳಿಸುವ ವರದಿ ಬಹಿರಂಗ title=
Lancet Oncology Research Report (File Photo)

ನವದೆಹಲಿ: Lancet Oncology Research Report - ಸಾರಾಯಿ ಹಾಗೂ ಕ್ಯಾನ್ಸರ್ (Cancer) ನಡುವಿನ ಸಂಬಂಧ ವಿವರಿಸುವ ವರದಿಯೊಂದು ಇದೀಗ ಬಹಿರಂಗಗೊಂಡಿದೆ. ಇತ್ತೀಚೆಗಷ್ಟೇ ಈ ಕುರಿತು ಮತ್ತೊಂದು ಸಂಶೋಧನೆ ನಡೆಸಲಾಗಿದ್ದು, ಈ ಸಂಶೋಧನೆಯ ಫಲಿತಾಂಶಗಳು ಬೆಚ್ಚಿಬೀಳಿಸುವಂತಿವೆ. 

ಏಳೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು
ಅಧ್ಯಯನದ ಪ್ರಕಾರ, 2020 ರಲ್ಲಿ ಏಳೂವರೆ ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ಲ್ಯಾನ್ಸೆಂಟ್ ಆಂಕೊಲಾಜಿಯ ಆವೃತ್ತಿಯಲ್ಲಿ ಜುಲೈ 13 ರಂದು ಪ್ರಕಟವಾದ ಅಧ್ಯಯನವೊಂದರಲ್ಲಿ, 2020 ರಲ್ಲಿ, ಶೇ. 4 ರಷ್ಟು ಕ್ಯಾನ್ಸರ್ ಪ್ರಕರಣಗಳು ಕೇವಲ ಅಲ್ಕೋಹಾಲ್ (Alcohol) ಕಾರಣ ವರದಿಯಾಗಿವೆ ಎನ್ನಲಾಗಿದೆ.

ಇದನ್ನೂ ಓದಿ-OMG: 250 ವರ್ಷ ಹಳೆಯ ವಿಸ್ಕಿ ಬಾಟಲ್ 1 ಕೋಟಿ ರೂ.ಗೆ ಮಾರಾಟ..!

CBS ನ್ಯೂಸ್ (CBS News) ವರದಿಯೊಂದರ ಪ್ರಕಾರ ಒಂದೇ ದಿನದಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚು ಡ್ರಿಂಕ್ ಸೇವನೆ (Alcohol Consumption) ಮಾಡಿದವರಲ್ಲಿ ಕ್ಯಾನ್ಸರ್ ನ ಹೆಚ್ಚಿನ ಪ್ರಕರಣಗಳಿವೆ ಎಂದು ಹೇಳಲಾಗಿದೆ.

ಬಾಯಿ ಹಾಗೂ ಹೊಟ್ಟೆಯ ಲೈನಿಂಗ್ ಮೇಲೆ ಪ್ರಭಾವ
ಈ ಕುರಿತು ಹೇಳಿಕೆ ನೀಡಿರುವ ನಾರ್ತ್ ವೆಸ್ಟರ್ನ್ ನ ಥೋರೆಸಿಕ್ ಸರ್ಜನ್ ಆಗಿರುವ ಡಾ. ಡೇವಿಡ್ ಒಡೆಲ್, ಅಲ್ಕೋಹಾಲ್ ಒಂದು ಉತ್ತೇಜನ ಪದಾರ್ಥವಾಗಿದೆ. ಇದು ನಮ್ಮ ಬಾಯಿಯ ಲೈನಿಂಗ್, ಗಂಟಲು ಹಾಗೂ ಹೊಟ್ಟೆಗೆ ಹಾನಿ ತಲುಪಿಸುತ್ತದೆ. ನಮ್ಮ ಶರೀರ ತನ್ನ ಗಾಯಗಳನ್ನು ತನ್ನಷ್ಟಕ್ಕೆ ತಾನೇ ಸರಿಪಡಿಸುವ ಶಕ್ತಿ ಹೊಂದಿದೆ. ಆದರೆ, ಹಲವು ಬಾರಿ ಇದು ಅಸಮಾನ್ಯ ಪದ್ಧತಿಯಲ್ಲಿ ನಡೆಯುತ್ತದೆ ಮತ್ತು ಇದರಿಂದ ಕ್ಯಾನ್ಸರ್ ಆರಂಭವಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. 

ಇದನ್ನೂ ಓದಿ-Covid-19 Vaccine:ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ

ಶೇ.75ರಷ್ಟು ಪ್ರಕರಣಗಳು ಪುರುಷರಲ್ಲಿ ಪತ್ತೆ
ಮದ್ಯಸೇವನೆಗೆ (Alcohol) ಸಂಬಂಧಿಸಿದ ಕ್ಯಾನ್ಸರ್ನ ಶೇ.75ರಷ್ಟು ಪ್ರಕರಣಗಳು ಕೇವಲ ಪುರುಷರಲ್ಲಿ ಗಮನಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಆಲ್ಕೋಹಾಲ್-ಸಂಬಂಧಿತ ಕ್ಯಾನ್ಸರ್ ಯಕೃತ್ತು ಮತ್ತು ಗಂಟಲಿಗೆ ಕಾರಣವಾಗುವ ನಾಳದೊಂದಿಗೆ ಸಂಬಂಧಿಸಿದೆ, ಆದರೆ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಇದನ್ನೂ ಓದಿ-Covid Vaccine ಪಡೆಯುವವರು ಎಷ್ಟು ದಿನ ಆಲ್ಕೋಹಾಲ್ ಕುಡಿಯಬಾರದು? ತಜ್ಞರು ಏನ್ ಹೇಳ್ತಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News