Boris Johnson ಭಾರತ ಪ್ರವಾಸ ರದ್ದು, ಕರೆ ಮಾಡಿ PM Modi ಹೇಳಿದ್ದು ಈ ಕಾರಣ

Boris Johnson India Tour Cancelled: ಗಣರಾಜ್ಯೋತ್ಸವದ ಅಂಗವಾಗಿ ಮುಖ್ಯ ಅಥಿತಿಯಾಗಿ ಆಗಮಿಸಬೇಕಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಭಾರತ ಪ್ರವಾಸ ರದ್ದುಗೊಂಡಿದೆ. ಕೊವಿಡ್-19 ರೂಪಾಂತರಿ ವೈರಸ್ ಬ್ರಿಟನ್ ನಲ್ಲಿ ಹರಡಿದ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ.

Written by - Nitin Tabib | Last Updated : Jan 5, 2021, 07:34 PM IST
  • ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಾನ್ಸನ್ ಅವರಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.
  • ಗಣರಾಜ್ಯೋತ್ಸವದ ದಿನದಂದು ಮುಖ್ಯ ಅತಿಥಿಯಾಗಿ ಜಾನ್ಸನ್ ಭಾರತಕ್ಕೆ ಆಗಮಿಸಬೇಕಿತ್ತು.
  • ವರ್ಷ 1993 ರಲ್ಲಿ ಕೊನೆಯ ಬಾರಿಗೆ ಯಾವುದೇ ಓರ್ವ ಬ್ರಿಟಿಷ್ ಪ್ರಧಾನಿ ಭಾರತಕ್ಕೆ ಅತಿಥಿಯಾಗಿ ಆಗಮಿಸಿದ್ದರು.
Boris Johnson ಭಾರತ ಪ್ರವಾಸ ರದ್ದು, ಕರೆ ಮಾಡಿ PM Modi ಹೇಳಿದ್ದು ಈ ಕಾರಣ title=
Boris Johnson (File Image)

ನವದೆಹಲಿ: Boris Johnson India Tour Cancelled-ಭಾರತದ ಗಣರಾಜ್ಯೋತ್ಸವ ದಿನದಂದು ಮುಖ್ಯ ಅತಿಥಿಯಾಗಿ ದೆಹಲಿಗೆ ಆಗಮಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತನ್ನ ಪ್ರವಾಸ ರದ್ದುಗೊಳಿಸಿದ್ದಾರೆ.  ಬ್ರಿಟನ್ ನಲ್ಲಿ ಎರಡನೇ ಬಾರಿಗೆ ಹರಡುತ್ತಿರುವ ಕೊರೊನಾ ವೈರಸ್ ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಈ ಕುರಿತು ವಿಷಾಧ ವ್ಯಕ್ತಪಡಿಸಿದ್ದಾರೆ.

ಜಾನ್ಸನ್ ಅವರಿಗೆ ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ
ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮಾತನಾಡಿರುವ ಅವರು ಕೊರೊನಾ ಸೊಂಕಿಂನ ಹೊಸ ಸ್ಟ್ರೆನ್ ಕಾರಣ ತಾವು ಬ್ರಿಟನ್ ನಲ್ಲಿ ಮತ್ತೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಹೇಳಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಾವು ದೇಶದಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅನಿವಾರ್ಯವಾಗಿ ತಾವು ಭಾರತ ಪ್ರವಾಸ ರದ್ದುಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ ಕೂಡಲೇ ತಾವು ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನು ಓದಿ-ರೂಪಾಂತರಿ ಕೊರೊನಾ ನಡುವೆಯೂ ಭಾರತಕ್ಕೆ ಬರ್ತಾರಾ ಬ್ರಿಟನ್ ಪ್ರಧಾನಿ...?

ಗಣರಾಜ್ಯೋತ್ಸವ ದಿನದಂದು ಮುಖ್ಯ ಅತಿಥಿ ರೂಪದಲ್ಲಿ ಜಾನ್ಸನ್ (Boris Johnson) ಆಗಮಿಸಬೇಕಾಗಿತ್ತು
ಇದಕ್ಕೂ ಮೊದಲು ಈ ಕುರಿತು ಬ್ರಿಟನ್ ಬೋರಿಸ್ ಜಾನ್ಸನ್ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಣರಾಜ್ಯೋತ್ಸವ ದಿನದಂದು ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಲು ಆಹ್ವಾನ ನೀಡಿದ್ದರು. ಅದನ್ನು ಅವರು ಖುಷಿಯಾಗಿ ಒಪ್ಪಿಕೊಂಡಿದ್ದ ಅವರು ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಜೊತೆಗೆ ಈ ಬಾರಿ ಬ್ರಿಟನ್ ನಲ್ಲಿ ನಡೆಸಲು ಉದ್ದೇಶಿಸಿರುವ G-7 ಶೃಂಗಸಭೆಗೆ ಆಗಮಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಮಂತ್ರಣ ನೀಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಒಪ್ಪಿಕೊಂಡಿದರು.

ಇದನ್ನು ಓದಿ- ಗಣರಾಜ್ಯೋತ್ಸವದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅನುಮಾನ

ಇದಕ್ಕೂ ಮೊದಲು 1993 ರಲ್ಲಿ ಆಗಿನ ಬ್ರಿಟನ್ ಪ್ರಧಾನ ಮಂತ್ರಿಯಾಗಿದ್ದ ಜಾನ್ ಮೇಜರ್ ಗಣರಾಜ್ಯೋತ್ಸವಾದ ಅಂಗವಾಗಿ ಭಾರತಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಅದಾದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಇರುಸು ಮುರುಸು ಉಂಟಾಗಿದ್ದ ಕಾರಣ ಮುಂದಿನ 27 ವರ್ಷಗಳವರೆಗೆ ಬ್ರಿಟನ್ ನ ಯಾವುದೇ ಪ್ರಧಾನಿ ಗಣರಾಜ್ಯೋತ್ಸವದ ಅಂಗವಾಗಿ ಭಾರತಕ್ಕೆ ಆಗಮಿಸಿರಲ್ಲಿಲ್ಲ.

ಇದನ್ನು ಓದಿ- Corona New Strain: ಮತ್ತೆ ಲಾಕ್‌ಡೌನ್ ಮೊರೆಹೋದ ದೇಶಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News