Viral News: ಹ್ಯಾಪಿ ಎಂಡಿಂಗ್ ಮಸಾಜ್ ಪಾರ್ಲರ್‌ನಲ್ಲಿ ಮುದುಕನ ಲೈಫ್ ಎಂಡ್..!

ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಮಸಾಜ್ ಪಾರ್ಲರ್‌ನ ಮೇಜಿನ ಮೇಲೆ ಬೆತ್ತಲೆ ರೂಪದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಟ್ಟೆಬಿಚ್ಚಿ ಮೇಜಿನ ಮೇಲೆ ಮಲಗಿದ್ದ ವ್ಯಕ್ತಿಗೆ ಯುವತಿಯೊಬ್ಬರು ಮಸಾಜ್ ಮಾಡುತ್ತಿದ್ದ ವೇಳೆ ಈ ಸಾವು ಸಂಭವಿಸಿದೆ.

Last Updated : Jan 30, 2022, 01:57 PM IST
  • ಹ್ಯಾಪಿ ಎಂಡಿಂಗ್ ಮಸಾಜ್ ಪಾರ್ಲರ್‌ನಲ್ಲಿ ವೃದ್ಧನ ಬ್ಯಾಡ್ ಎಂಡಿಂಗ್
  • ಮಸಾಜ್ ಮಾಡಿಕೊಳ್ಳಲು ಬಂದು ಪ್ರಾಣಬಿಟ್ಟ ಬ್ರಿಟನ್‌ನ ವೃದ್ಧ ವ್ಯಕ್ತಿ
  • ಮಸಾಜ್ ಆರಂಭಿಸುತ್ತಿದ್ದಂತೆಯೇ ಉಸಿರಾಡಲು ಕಷ್ಟಪಟ್ಟ ವ್ಯಕ್ತಿ ಸಾವು
Viral News: ಹ್ಯಾಪಿ ಎಂಡಿಂಗ್ ಮಸಾಜ್ ಪಾರ್ಲರ್‌ನಲ್ಲಿ ಮುದುಕನ ಲೈಫ್ ಎಂಡ್..!  title=
ಮಸಾಜ್ ಪಾರ್ಲರ್‌ನಲ್ಲಿ ಮುದಕನ ಸಾವು!

ನವದೆಹಲಿ: ಥಾಯ್ಲೆಂಡ್‌ನ ಮಸಾಜ್ ಪಾರ್ಲರ್‌ನಲ್ಲಿ ವೃದ್ಧರೊಬ್ಬರು ಬೆತ್ತಲೆ ಸ್ಥಿತಿಯಲ್ಲಿ ಮೇಜಿನ ಮೇಲೆ ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ ಆ ಮಸಾಜ್ ಪಾರ್ಲರ್‌ನ ಹೆಸರು ಹ್ಯಾಪಿ ಎಂಡಿಂಗ್(Happy Ending Massage Parlour).

ಹ್ಯಾಪಿ ಎಂಡಿಂಗ್ ಮಸಾಜ್ ಪಾರ್ಲರ್‌ನಲ್ಲಿ ಮುದಕನ ಸಾವು!

ವರದಿಗಳ ಪ್ರಕಾರ ಪಿಂಚಣಿದಾರನೊಬ್ಬ(Pensioner)ಥೈಲ್ಯಾಂಡ್‌(Thailand)ನ ಪಟ್ಟಾಯದ ‘ಸಿನ್ ಸಿಟಿ’ ಪ್ರದೇಶದಲ್ಲಿ ಲವ್ಲಿ ಮಸಾಜ್ ‘ಹ್ಯಾಪಿ ಎಂಡಿಂಗ್’ ಮಸಾಜ್ ಪಾರ್ಲರ್‌ನ ಮೇಜಿನ ಮೇಲೆಯೇ ಸಾವನ್ನಪ್ಪಿದ್ದಾರೆ. ಸಿನ್ ಸಿಟಿ ಪ್ರದೇಶವು ವಯಸ್ಕರ ರಾತ್ರಿಜೀವನಕ್ಕೆ ಹೆಸರುವಾಸಿಯಾಗಿದೆ ಮತ್ತು ಮಸಾಜ್ ಪಾರ್ಲರ್‌ಗಳು ದಿನದ 24 ಗಂಟೆಗಳೂ ತೆರೆದಿರುತ್ತವೆ.

ಇದನ್ನೂ ಓದಿ: PUBG Game: ಪಬ್​ಜಿ ಪ್ರಭಾವದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಿದ ಬಾಲಕ..!

ಬಟ್ಟೆ ಬಿಚ್ಚಿ ಮಲಗಿದ್ದ ವ್ಯಕ್ತಿ ಹಠಾತ್ ಸಾವು

ಬ್ರಿಟನ್‌ನ ವೃದ್ಧ ವ್ಯಕ್ತಿಯೊಬ್ಬರು(British Pensioner) ಬಾಡಿಗೆ ಹೋಂಡಾ ಮೋಟಾರ್‌ಸೈಕಲ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಸಿನ್ ಸಿಟಿ ಪ್ರದೇಶದಲ್ಲಿರುವ ಮಸಾಜ್ ಪಾರ್ಲರ್‌ಗೆ ಬಂದಿದ್ದರು. ಅಲ್ಲೇ ಒಳಗೆ ಹೋಗಿ ಬಟ್ಟೆಗಳನ್ನೆಲ್ಲ ಕಳಚಿ ಟೇಬಲ್ ಬಳಿ ಹೋಗಿ ಮಲಗಿಕೊಂಡಿದ್ದರು. ಆದರೆ ಅವರು ಹಠಾತ್ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಮಸಾಜ್ ಸಮಯದಲ್ಲಿ ಉಸಿರಾಟದ ತೊಂದರೆ

ವೃದ್ಧ ವ್ಯಕ್ತಿಗೆ ಮಸಾಜ್(Massage)ಮಾಡಲು ಬಂದ ಮಹಿಳೆಯೊಬ್ಬರು ಎಣ್ಣೆಹಚ್ಚಿ ಮಸಾಜ್ ಮಾಡಲು ಶುರು ಮಾಡಿದ್ದರು. ಆಗ ಆ ವ್ಯಕ್ತಿಯ ಉಸಿರು ಇದ್ದಕ್ಕಿದ್ದಂತೆಯೇ ಏರುಪೇರಾಗಲು ಶುರುವಾಗಿತ್ತು. ಇದರಿಂದ ಗಾಬರಿಗೊಂಡ ಆ ಮಹಿಳೆಯು ಸಹಾಯಕ್ಕಾಗಿ ಕೂಗಿಕೊಂಡರು. ಕೂಡಲೇ ಆಗಮಿಸಿದ ವೈದ್ಯಕೀಯ ಸಿಬ್ಬಂದಿ ಸಿಪಿಆರ್ ಟೆಸ್ಟ್ ಮಾಡಲು ಪ್ರಾರಂಭಿಸಿದರು. ಆದರೆ ಆ ವ್ಯಕ್ತಿ ಮಲಗಿದ್ದಲ್ಲಿಯೇ ಕೊನೆಯುಸಿಳೆದಿದ್ದಾನೆ. ಆತನನ್ನು ಉಳಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಆತನ ಮೃತದೇಹಕ್ಕೆ ಟವಲ್ ಹೊದಿಸಲಾಯಿತು.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ 3 ಟನ್‌ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಪೂರೈಸಿದ ಭಾರತ      

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು

ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಸಂಜೆ 4 ಗಂಟೆಗೆ ಬ್ಯಾಂಗ್ ಲಾಮುಂಗ್ ಜಿಲ್ಲೆಯ ಮಸಾಜ್ ಪಾರ್ಲರ್‌(Massage Parlor)ಗೆ ಆಗಮಿಸಿ ಸ್ಥಳ ಪರಿಶೀಲಿಸಿದರು.   

ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು

ವೃದ್ಧ ವ್ಯಕ್ತಿಗೆ ಮಸಾಜ್ ಮಾಡುತ್ತಿದ್ದ ಮಹಿಳೆ ಮಾತನಾಡಿ, ‘ಇದೇ ಮೊದಲ ಬಾರಿಗೆ ಆ ವ್ಯಕ್ತಿ ಮಸಾಜ್‌ಗೆಂದು ನಮ್ಮ ಬಳಿಗೆ ಬಂದಿದ್ದ. ನಾವು ಪ್ರತಿದಿನ ಯಾವ ರೀತಿ ಮಸಾಜ್ ಮಾಡುತ್ತೇವೆಯೋ ಅದೇ ರೀತಿ ಆ ವ್ಯಕ್ತಿಗೂ ಮಾಡಿದ್ದೇವೆ. ಮಸಾಜ್ ಮಾಡಲು ಶುರು ಮಾಡುತ್ತಿದ್ದಂತೆಯೇ ಆ ವ್ಯಕ್ತಿಗೆ ಇದ್ದಕ್ಕಿದ್ದಂತೆ ಉಸಿರಾಡಲು ಕಷ್ಟವಾಯಿತು. ಕೂಡಲೇ ನಾನು ಸಹಾಯಕ್ಕಾಗಿ ಇತರ ಸಿಬ್ಬಂದಿಯನ್ನು ಕೂಗಿ ಕರೆದೆ. ನಾವೆಲ್ಲರೂ ಸೇರಿ ಉಸಿರಾಡಲು ಕಷ್ಟಪಡುತ್ತಿದ್ದ ವೃದ್ಧರ ಹೃದಯವನ್ನು ಪಂಪ್ ಮಾಡಲು ಪ್ರಯತ್ನಿಸಿದೇವು. ಆದರೆ ಅವರ ಜೀವ ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ’ವೆಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೃದ್ಧರ ಸಾವಿಗೆ ನಿಖರ ಕಾರಣವೆನೆಂದು ಸ್ಪಷ್ಟವಾಗಿಲ್ಲ. ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News