ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಹಳ ಮುಖ್ಯವಾದ ಸುದ್ದಿ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಬ್ರಿಟಿಷ್ ಏರ್ವೇಸ್ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ತನ್ನ ಪೈಲಟ್ಗಳು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ರಿಟಿಷ್ ಏರ್ವೇಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರ ಅನಾನುಕೂಲತೆ ಮತ್ತು ಎಲ್ಲಾ ದೂರುಗಳ ಬಗ್ಗೆ ಬ್ರಿಟಿಷ್ ಏರ್ವೇಸ್ ಹೇಳಿಕೆ ನೀಡಿದೆ. ಬ್ರಿಟಿಷ್ ಏರ್ಲೈನ್ ಪೈಲಟ್ಸ್ ಅಸೋಸಿಯೇಷನ್ (BALPA) ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವುದರಿಂದ, ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ಕಲ್ಪನೆಯನ್ನು ಪಡೆಯಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಕಳೆದ ಹಲವಾರು ತಿಂಗಳುಗಳಿಂದ, ಅವರ ವೇತನ ಬೇಡಿಕೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಮಾತುಕತೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಮತ್ತು ಪರಿಸ್ಥಿತಿ ಇಲ್ಲಿಗೆ ತಲುಪಿದೆ ಎಂದು ಬ್ರಿಟಿಷ್ ಏರ್ವೇಸ್ ವಿಷಾದ ವ್ಯಕ್ತಪಡಿಸಿದೆ.
ಪೈಲಟ್ಗಳೊಂದಿಗೆ ಜೊತೆ ಮಾತುಕತೆ ನಡೆಸಿದ ನಂತರ ನಾವು ತೀರ್ಮಾನಕ್ಕೆ ಬರಲು ಆಶಿಸುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಬ್ರಿಟಿಷ್ ಏರ್ವೇಸ್ನ ಟ್ವಿಟರ್ ಹ್ಯಾಂಡಲ್ ಪ್ರಕಾರ, ಪೈಲಟ್ಗಳು ಸೆಪ್ಟೆಂಬರ್ 9 ಮತ್ತು 10 ರಂದು ಮುಷ್ಕರ ನಡೆಸಬಹುದು. ಇದರಿಂದಾಗಿ ಸೋಮವಾರ ಮತ್ತು ಮಂಗಳವಾರ ನಿಗದಿಯಾಗಿದ್ದ 1,500 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಷ್ಕರದಿಂದಾಗಿ ಸುಮಾರು 280,000 ಪ್ರಯಾಣಿಕರ ಪ್ರಯಾಣದ ಮೇಲೆ ಪರಿಣಾಮ ಬೀರಿದೆ ಎಂದು ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ತಿಳಿಸಿದೆ.