ಕಾಬುಲ್ ಬಾಂಬ್ ದಾಳಿ: 25 ಸಾವು, 45 ಮಂದಿಗೆ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ಅವಳಿ ಬಾಬ್ ಸ್ಪೋಟ ಸಂಭವಿಸಿದ್ದು, ಈ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆ.

Last Updated : Apr 30, 2018, 04:50 PM IST
ಕಾಬುಲ್ ಬಾಂಬ್ ದಾಳಿ: 25 ಸಾವು, 45 ಮಂದಿಗೆ ಗಾಯ title=

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ನಲ್ಲಿ ಸೋಮವಾರ ಬೆಳಿಗ್ಗೆ ನಡೆದ ಅವಳಿ ಬಾಬ್ ಸ್ಪೋಟ ಸಂಭವಿಸಿದ್ದು, ಈ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಸ್ಪೋಟ ಸಂಭವಿಸಿದ 20 ನಿಮಿಷಗಳ ನಂತರ ನಡೆದ ಎರಡನೇ ಸ್ಫೋಟದಲ್ಲಿ ಅತಿ ಹೆಚ್ಚು ಜನ ಸಾವನ್ನಪ್ಪಿದ್ದು, ಇವರಲ್ಲಿ 6 ಮಂದಿ ಪತ್ರಕರ್ತರೂ ಸೇರಿದ್ದಾರೆ ಎನ್ನಲಾಗಿದೆ. 

ಅಫ್ಘಾನಿಸ್ತಾನದ ಪ್ರಾಥಮಿಕ ಗುಪ್ತಚರ ಸಂಸ್ಥೆ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್ಡಿಎಸ್) ನ ಪ್ರಧಾನ ಕಚೇರಿ ಸಮೀಪದಲ್ಲಿರುವ ಕಾಬೂಲ್ ಷಶದರಕ್ ಪ್ರದೇಶದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ನಂತರ ತುರ್ತು ಸೇವೆಗಾಗಿ ಆಗಮಿಸಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ಎರಡನೇ ಆತ್ಮಾಹುತಿ ದಾಳಿ ನಡೆದಿದೆ. 

ಇದರಲ್ಲಿ ಎಪಿಎಫ್​ ಸುದ್ದಿ ಸಂಸ್ಥೆಯ ಮುಖ್ಯ ಛಾಯಾಚಿತ್ರಗಾರ ಷಾ ಮರಾಯಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

Trending News