BREAKING NEWS: ಪಾಕಿಸ್ತಾನದ ಗ್ವಾದರ್ ಪಟ್ಟಣದಲ್ಲಿ ಭಾರಿ ವಿಸ್ಫೋಟ, 6 ಚೈನಾ ಇಂಜಿನೀಯರ್ ಗಳ ಸಾವು!

Pakistan Blast  Latest Updates: ಪಾಕಿಸ್ತಾನದಲ್ಲಿ (Pakistan) ಭಾರೀ ಸ್ಫೋಟ (Bomb Blast) ಸಂಭವಿಸಿದೆ. ಗ್ವಾದರ್ ನಗರದಲ್ಲಿ (Gwadar City) ಸಂಭವಿಸಿರುವ ಈ ಸ್ಫೋಟದಲ್ಲಿ 6 ಚೀನಾದ ಎಂಜಿನಿಯರ್‌ಗಳು (China Engineers) ಸಾವನ್ನಪ್ಪಿದ್ದಾರೆ. 

Written by - Nitin Tabib | Last Updated : Aug 20, 2021, 10:13 PM IST
  • ಪಾಕಿಸ್ತಾನದ ಗ್ಯಾದರ್ ಎಕ್ಸ್ಪ್ರೆಸ್ ವೇ ಬಳಿ ಇರುವ ಬಲೋಚ್ ವಾರ್ಡ್ ನಲ್ಲಿ ಭಾರಿ ಸ್ಫೋಟ.
  • 6 ಚೀನಾ ಇಂಜಿನೀರ್ ಗಳ ಸಾವು. ಯಾವ ರೀತಿಯ ಸ್ಫೋಟ ಇದು ಎಂಬುದು ಇನ್ನೂ ತಿಳಿದುಬಂದಿಲ್ಲ.
  • ಪ್ರಾಥಮಿಕ ವರದಿಯ ಪ್ರಕಾರ ಈ ಬ್ಲಾಸ್ಟ್ ನಲ್ಲಿ ಹಲವರು ಹತಾಹತರಾಗಿರುವ ಆತಂಕ ವ್ಯಕ್ತ ಪಡಿಸಲಾಗುತ್ತಿದೆ.
BREAKING NEWS: ಪಾಕಿಸ್ತಾನದ ಗ್ವಾದರ್ ಪಟ್ಟಣದಲ್ಲಿ ಭಾರಿ ವಿಸ್ಫೋಟ, 6 ಚೈನಾ ಇಂಜಿನೀಯರ್ ಗಳ ಸಾವು! title=
Pakistan Blast Latest Updates (File Photo)

ಲಾಹೋರ್:  Pakistan Blast - ಪಾಕಿಸ್ತಾನದಲ್ಲಿ (Pakistan) ಭಾರೀ ಸ್ಫೋಟ (Bomb Blast) ಸಂಭವಿಸಿದೆ. ಗ್ವಾದರ್ ನಗರದಲ್ಲಿ (Pakistan Blast) ಸಂಭವಿಸಿರುವ ಈ ಸ್ಫೋಟದಲ್ಲಿ 6 ಚೀನಾದ ಎಂಜಿನಿಯರ್‌ಗಳು (China Engineers) ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ದಾಳಿಯನ್ನು ಬಲೂಚ್ ಫೈಟರ್ಸ್ (Baloch Fighters) ನಡೆಸಿದ್ದಾರೆ ಎನ್ನಲಾಗುತ್ತಿದೆ.

ಗ್ವಾದರ್ ಎಕ್ಸ್ ಪ್ರೆಸ್ ವೇ ಬಳಿ ಇರುವ ಬಲೋಚ್ ವಾರ್ಡ್ ನಲ್ಲಿ ಈ ಬ್ಲಾಸ್ಟ್ ಸಂಭವಿಸಿದ್ದು, ಹಲವು ಜನರು ಹತಾಹತರಾಗಿರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಯಾವ ರೀತಿಯ ಬ್ಲಾಸ್ಟ್ ಇದಾಗಿದೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಈ ಕುರಿತು ವರದಿ ಮಾಡಿರುವ DAWN ಸುದ್ದಿ ಸಂಸ್ಥೆ, ಈ ಬ್ಲಾಸ್ಟ್ ನಲ್ಲಿ 2 ಮಕ್ಕಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಗ್ವಾದರ್ ಪೊಲೀಸ್ ಕಂಟ್ರೋಲ್ ರೂಮ್ ಮಾಹಿತಿ ನೀಡಿದೆ ಎಂದು ಹೇಳಿದೆ. ಗಾಯಗೊಂಡ ಮಕ್ಕಳನ್ನು GDA ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿ ಹೇಳಿದೆ.

ಸದ್ಯ ಪಾಕ್ ಸೇನೆಯ ಭದ್ರತಾ ಸಿಬ್ಬಂದಿಗಳು ಹಾಗೂ ಫ್ರಂಟೀಯರ್ ಜವಾನರು ಬ್ಲಾಸ್ಟ್ ನಡೆದ ಸ್ಥಳವನ್ನು ಸುತ್ತುವರೆದಿದ್ದು, ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಬಲೂಚಿಸ್ತಾನ ಅಸೆಂಬ್ಲಿ ಮತ್ತು ಹೈಕೋರ್ಟ್ ಬಳಿಯ ಕ್ವೆಟ್ಟಾದ Hali Road ವೃತ್ತದಲ್ಲಿ ಮೋಟಾರ್‌ಸೈಕಲ್ ಬಾಂಬ್ ಸ್ಫೋಟ ಸಂಭವಿಸಿದ ಎರಡು ವಾರಗಳೊಳಗೆ ಈ ಘಟನೆ ಸಂಭವಿಸಿದ್ದು ಇಲ್ಲಿ ಉಲ್ಲೇಖನೀಯ. ಈ ಸೈಕಲ್ ಬಾಂಬ್ ಸ್ಫೋಟದಲ್ಲಿ  ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು ಮತ್ತು 12 ಪೊಲೀಸರು ಸೇರಿದಂತೆ 21 ಮಂದಿ ಗಾಯಗೊಂಡಿದ್ದರು.

9 ಚೈನಾ ಇಂಜಿನಿಯರ್ ಗಳ ಸಾವು
ಇತ್ತೀಚೆಗಷ್ಟೇ ಪಾಕಿಸ್ತಾನದ (Pakistan) ವಾಯುವ್ಯ ಪ್ರಾಂತ್ಯದಲ್ಲಿ ಬಸ್‌ನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 9 ಚೀನೀ ಎಂಜಿನಿಯರ್‌ಗಳು ಸಾವನ್ನಪ್ಪಿದ್ದರು. ಈ ಭಯೋತ್ಪಾದಕ ದಾಳಿಯಿಂದಾಗಿ ಚೀನಾದ ನಾಗರಿಕರಲ್ಲಿ (Chinese Nationals) ಭಯದ ವಾತಾವರಣ ನಿರ್ಮಾಣಗೊಂಡಿದೆ. CPEC Project ಮೇಲೆ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನೀ ಎಂಜಿನಿಯರ್‌ಗಳು ಎಕೆ - 47 ಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ-Female TikTok Star: ಗಾಳಿಯಲ್ಲಿ ತೂರಾಡಿದರು.. ಬಟ್ಟೆ ಹರಿದುಹಾಕಿದರು.. ಮೊಬೈಲ್ ಕದ್ದರು..!

ಇಮ್ರಾನ್ ಮೇಲೆ ಭರವಸೆ ಇಲ್ಲ
ಪಾಕಿಸ್ತಾನದಲ್ಲಿ ತನ್ನ ನಾಗರಿಕರ ಸಾವಿನಿಂದ ಚೀನಾ  ವಿಚಲಿತಗೊಂಡಿದೆ. ತನಿಖೆಗೆ ಚೀನಾ ತನ್ನ ತಂಡವನ್ನು ಸಹ ಕಳುಹಿಸಿದೆ. ಇದೇ ವೇಳೆ  ತನ್ನ 'ಮಾಸ್ಟರ್' ಅನ್ನು ಮೆಚ್ಚಿಸಲು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಎಲ್ಲಾ ಚೀನೀ ನಾಗರಿಕರ ಸುರಕ್ಷತೆಯ ಭರವಸೆ ನೀಡಿದ್ದರು, ಆದರೆ ಇದರಿಂದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಕೆಲಸದಲ್ಲಿ ನಿರತರಾಗಿರುವ ಚೀನೀ ಕಾರ್ಮಿಕರ ಭಯ ಹೋಗುತ್ತಿಲ್ಲ.  ಅವರು ಆತ್ಮರಕ್ಷಣೆಗಾಗಿ  ಟೂಲ್ಕಿಟ್ ಅನ್ನು ಬಿಟ್ಟು ಎಕೆ - 47 ನಂತಹ ಆಯುಧಗಳನ್ನು ಎತ್ತಿಕೊಂಡಿದ್ದಾರೆ. ಆದರೆ, ಇಂದು ನಡೆದ ಬ್ಲಾಸ್ಟ್ ಅವರು ಇನ್ನೂ ಸುರಕ್ಷಿತವಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.

ಇದನ್ನೂ ಓದಿ-ಕಾಬೂಲ್ ವಶಕ್ಕೆ ಪಡೆದ ನಂತರ ಕಾಶ್ಮೀರ ಕುರಿತಂತೆ ಹೇಳಿಕೆ ನೀಡಿದ ತಾಲಿಬಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News