90 ವರ್ಷಗಳ ಬಳಿಕ ಅಮೆರಿಕದಲ್ಲಿ ತಲೆಎತ್ತಿದೆ ನಿರುದ್ಯೋಗ ಸಮಸ್ಯೆ

ನ್ಯೂಯಾರ್ಕ್ನಲ್ಲಿ ಸುಮಾರು 27 ಮಿಲಿಯನ್ ಜನರಲ್ಲಿ ಕರೋನವೈರಸ್ ಪಾಸಿಟಿವ್ ಕಂಡುಬಂದಿದೆ.

Last Updated : Apr 24, 2020, 01:56 PM IST
90 ವರ್ಷಗಳ ಬಳಿಕ ಅಮೆರಿಕದಲ್ಲಿ ತಲೆಎತ್ತಿದೆ ನಿರುದ್ಯೋಗ ಸಮಸ್ಯೆ title=

ನವದೆಹಲಿ: ಇಡೀ ವಿಶ್ವದಲ್ಲೇ ಕರೋನಾವೈರಸ್ (Coronavirus)  ಸೋಂಕು ಅಮೆರಿಕದ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ 1930ರ ಮಹಾ ಆರ್ಥಿಕ ಕುಸಿತದ ನಂತರ ನಿರುದ್ಯೋಗದ ಪ್ರಮಾಣವು ಅತ್ಯಧಿಕವಾಗಿದೆ. ಕರೋನಾ ವೈರಸ್ ಕೋವಿಡ್-19 (Covid-19)  ಸಾಂಕ್ರಾಮಿಕದಿಂದಾಗಿ ಪ್ರತಿ 6 ಅಮೆರಿಕನ್ ಕಾರ್ಮಿಕರಲ್ಲಿ ಒಬ್ಬರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಏತನ್ಮಧ್ಯೆ ನ್ಯೂಯಾರ್ಕ್ನಲ್ಲಿ ಸುಮಾರು 27 ಮಿಲಿಯನ್ ಜನರಲ್ಲಿ ಕರೋನವೈರಸ್ ಪಾಸಿಟಿವ್ ಕಂಡುಬಂದಿದೆ.

ನಿರುದ್ಯೋಗ ಭತ್ಯೆಗೆ 44 ಲಕ್ಷ ಜನರಿಂದ ಅರ್ಜಿ:
ಕಳೆದ ವಾರ 44 ಲಕ್ಷಕ್ಕೂ ಹೆಚ್ಚು ಜನರು ನಿರುದ್ಯೋಗ (Unemployment) ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರ ಹೇಳಿದೆ. ಇದರೊಂದಿಗೆ ಕಳೆದ ಐದು ವಾರಗಳಲ್ಲಿ ಸುಮಾರು 26 ಮಿಲಿಯನ್ ಜನರು ನಿರುದ್ಯೋಗ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಯುಎಸ್ ಪಾರ್ಲಿಮೆಂಟ್ ಸುಮಾರು 500 ಬಿಲಿಯನ್ ಯುಎಸ್ (US) ಡಾಲರ್ ಪ್ಯಾಕೇಜ್ ಅನ್ನು ಅನುಮೋದಿಸಿದೆ.

ನ್ಯೂಯಾರ್ಕ್ ಒಂದರಲ್ಲೇ 27 ಮಿಲಿಯನ್‌ಗಿಂತಲೂ ಹೆಚ್ಚು ಮಂದಿಗೆ ಕರೋನಾ ಪಾಸಿಟಿವ್:
ನ್ಯೂಯಾರ್ಕ್ (NewYork) ರಾಜ್ಯದಲ್ಲಿ ಬಹುಶಃ 27 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಅಮೆರಿಕದ ಆತಂಕವನ್ನು ಹೆಚ್ಚಿಸಿದೆ. ಇದು ಪರೀಕ್ಷೆಗಳಿಂದ ದೃಡೀಕರಿಸಲ್ಪಟ್ಟ ಸಂಖ್ಯೆಯ 10 ಪಟ್ಟು ಹೆಚ್ಚಾಗಿದೆ. ಆದರೆ ಆರೋಗ್ಯ ಆಯುಕ್ತ ಆಕ್ಸಿರಿಸ್ ಬಾರ್ಬೋಟ್ ನ್ಯೂಯಾರ್ಕ್ ನಗರದಲ್ಲಿ ಮಾತ್ರವೇ 86 ಲಕ್ಷ ಜನಸಂಖ್ಯೆಯಲ್ಲಿ, ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಬಹುದು ಎಂದು ಅಂಕಿ-ಅಂಶಗಳು ಅಂದಾಜಿಸಿರುವುದಾಗಿ ತಿಳಿಸಿದ್ದಾರೆ.

ಅಮೆರಿಕರದಲ್ಲಿ ನಡೆಯುತ್ತಿವೆ ರ್ಯಾಲಿಗಳು:
ಅಮೆರಿಕದಲ್ಲಿ ಲಾಕ್‌ಡೌನ್ (Lockdown) ನಿಂದ ಎದುರಾದ ಪರಿಣಾಮ ಇತ್ತೀಚಿಗೆ ಸ್ಪಷ್ಟವಾಗಿ ಗೋಚರಿಸಲು ಪ್ರಾರಂಭಿಸುತ್ತಿವೆ. ನಿರುದ್ಯೋಗದಿಂದ ರೊಚ್ಚಿಗೆದ್ದ ಜನರು ರ್ಯಾಲಿಗಳನ್ನು ನಡೆಸುತ್ತಿದ್ದು ಕೆಲವು ರಾಜ್ಯಗಳು ಆರೋಗ್ಯ ಅಧಿಕಾರಿಗಳ ಎಚ್ಚರಿಕೆಗಳ ಹೊರತಾಗಿಯೂ ಲಾಕ್‌ಡೌನ್ ಅನ್ನು ಸಡಿಲಗೊಳಿಸಲು ಪ್ರಾರಂಭಿಸಿವೆ. ಆದರೆ ಸೋಂಕು ಹೆಚ್ಚಾಗುವ ಸಾಧ್ಯತೆಗಳಿಗೆ ಹೋಲಿಸಿದರೆ ಸರ್ಕಾರಗಳ ಈ ನಿರ್ಧಾರ ಆತುರ ಎಂದು ತೋರುತ್ತದೆ. ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಣ್ಣ ಉದ್ಯಮಗಳಿಗೆ ಮತ್ತು ಲಕ್ಷಾಂತರ ಕಾರ್ಮಿಕರಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.

ಕರೋನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ 1.90 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂಬುದು ಗಮನಾರ್ಹ. ಅದರಲ್ಲಿ ಯುರೋಪಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಅಮೆರಿಕದಲ್ಲಿ ಸುಮಾರು 50,000 ಜನರು ಸಾವನ್ನಪ್ಪಿದ್ದಾರೆ.

Trending News