Omicronನ ಈ ಎಲ್ಲಾ ರೂಪಾಂತರಗಳಿಂದ ಇರಲಿ ಎಚ್ಚರ, ಅಧ್ಯಯನದಲ್ಲಿ ಬಯಲಾಯಿತು ಆಘಾತಕಾರಿ ಅಂಶ

ಕರೋನದ ಹೊಸ ರೂಪಾಂತರವಾದ ಓಮಿಕ್ರಾನ್  ಹೆಚ್ಚು ಹಾನಿಯನ್ನುಂಟುಮಾಡಲು ಸಾಧ್ಯವಾಗಲಿಲ್ಲ. ಆದರೆ ಅದರ ಉಪ-ರೂಪವಾದ BA.2 ಬಗ್ಗೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

Written by - Ranjitha R K | Last Updated : Feb 2, 2022, 08:34 AM IST
  • BA.2 ಸಬ್ ವೇರಿಯಂಟ್, ಬಗ್ಗೆ ಆಘಾತಕಾರಿ ಅಂಶ ಬಹಿರಂಗ
  • ಓಮಿಕ್ರಾನ್ ಗಿಂತ ಹೆಚ್ಚು ವೇಗವಾಗಿ ಹರಡುತ್ತದೆ BA.2
  • ಡೆನ್ಮಾರ್ಕ್‌ನಲ್ಲಿ ನಡೆದ ಅಧ್ಯಯನದಲ್ಲಿ ಬಹುರಂಗ
Omicronನ ಈ ಎಲ್ಲಾ ರೂಪಾಂತರಗಳಿಂದ ಇರಲಿ ಎಚ್ಚರ, ಅಧ್ಯಯನದಲ್ಲಿ ಬಯಲಾಯಿತು ಆಘಾತಕಾರಿ ಅಂಶ  title=
BA.2 ಸಬ್ ವೇರಿಯಂಟ್, ಬಗ್ಗೆ ಆಘಾತಕಾರಿ ಅಂಶ ಬಹಿರಂಗ (file photo)

ನವದೆಹಲಿ : ಕಳೆದ 2 ವರ್ಷಗಳಿಂದ ಇಡೀ ಜಗತ್ತು ಕೊರೊನಾ ವೈರಸ್ (Coronavirus) ಸೋಂಕಿನ ವಿರುದ್ಧ ಹೋರಾಡುತ್ತಿದೆ. ಇನ್ನೇನು ಎಲ್ಲವೂ ಸರಿಯಾಯಿತು ಅಂದುಕೊಳ್ಳುವಷ್ಟರಲ್ಲಿ ವೈರಸ್‌ನ ಹೊಸ ರೂಪಾಂತರವು (Coronavirus news varient) ಆವಾಂತರ ಸೃಷ್ಟಿ ಮಾಡುತ್ತಿದೆ. ಕರೋನದ ಹೊಸ ರೂಪಾಂತರವಾದ ಓಮಿಕ್ರಾನ್ (Omicron) ಹೆಚ್ಚು ಹಾನಿಯನ್ನುಂಟುಮಾಡಲು ಸಾಧ್ಯವಾಗಲಿಲ್ಲ. ಆದರೆ ಅದರ ಉಪ-ರೂಪವಾದ BA.2 ಬಗ್ಗೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಡೆನ್ಮಾರ್ಕ್‌ನಲ್ಲಿ ನಡೆಸಲಾದ ಅಧ್ಯಯನವು BA.2  Omicron ಗಿಂತ ಹೆಚ್ಚು ಸಾಂಕ್ರಮಿಕ ಎಂದು ಹೇಳಿದೆ. 

 33 ಪ್ರತಿಶತ ವೇಗವಾಗಿ ಹರಡುತ್ತಿದೆ BA.2 :
ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯ ಮತ್ತು ಡ್ಯಾನಿಶ್ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ವಿಜ್ಞಾನಿಗಳ ನೇತೃತ್ವದ ತಂಡವು ಈ ಅಧ್ಯಯನವನ್ನು ನಡೆಸಿತು.  BA.1 ಗಿಂತ BA.2 33 ಪ್ರತಿಶತ ವೇಗವಾಗಿ ಹರಡುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ : ಅಚ್ಚರಿಯಾದರೂ ಸತ್ಯ! ಭ್ರೂಣವು ಗರ್ಭಾಶಯದ ಹೊರಗೆ ಬೆಳೆಯುತ್ತೆ, ರೋಬೋಟ್ ಸೂಲಗಿತ್ತಿಯ ಪಾತ್ರ ವಹಿಸುತ್ತೆ!

ವ್ಯಾಕ್ಸಿನೇಷನ್ ಪರಿಣಾಮವನ್ನು ಕಡಿಮೆ ಮಾಡುತ್ತದೆ :
ನೈಸರ್ಗಿಕವಾಗಿ ಸಂಭವಿಸುವ BA.1 ಗಿಂತ Omicron BA.2 ಗಮನಾರ್ಹವಾಗಿ ಹೆಚ್ಚು ಸಾಂಕ್ರಮಿಕವಾಗಿದೆ ಎಂದು ಅಧ್ಯಯನವು ತೀರ್ಮಾನಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ರೋಗಪ್ರತಿರೋಧಕ ಗುಣವನ್ನು ಹೊಂದಿದ್ದು, ಸೋಂಕಿನ ವಿರುದ್ಧ ವ್ಯಾಕ್ಸಿನೇಷನ್ (Vaccination) ಪ್ರಭಾವವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಲಸಿಕೆಯು BA.2 ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. . ಈ ಹೊಸ ಸಬ್  ವೇರಿಯಂಟ್  ಸೋಂಕು, ಲಸಿಕೆಯ ಬೂಸ್ಟರ್ ಡೋಸ್ ತೆಗೆದುಕೊಂಡವರಿಗೂ ತಗುಲಬಹುದು ಎನ್ನಲಾಗಿದೆ. 

ಕರೋನ ವಿರುದ್ದ ಹೋರಾಡಲು ಲಸಿಕೆ ಸಹಕಾರಿ : 
ಕರೋನವೈರಸ್ (Coronavirus) ವಿರುದ್ಧ ಹೋರಾಡುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸಿದೆ.  ಹೊಸ  ಸಬ್ ವೇರಿಯಂಟ್,  ವ್ಯಾಕ್ಸಿನೇಷನ್ ಪಡೆಯದ ಜನರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.  ಡೆನ್ಮಾರ್ಕ್ ಹೊರತುಪಡಿಸಿ, ಅಮೆರಿಕ, ಬ್ರಿಟನ್, ಸ್ವೀಡನ್ ಮತ್ತು ನಾರ್ವೆಯಲ್ಲೂ ಬಿಎ.2 ಪ್ರಕರಣಗಳು ಕಂಡುಬಂದಿವೆ. 

ಇದನ್ನೂ ಓದಿ : ಅಫ್ಘಾನಿಸ್ತಾನಕ್ಕೆ 3 ಟನ್‌ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಪೂರೈಸಿದ ಭಾರತ

ಅಮೆರಿಕದಲ್ಲಿ 194 ಪ್ರಕರಣಗಳು ವರದಿ : 
COVID ರೂಪಾಂತರಗಳ ಜಾಗತಿಕ ಡೇಟಾಬೇಸ್ ಪ್ರಕಾರ, BA.2 ಸಬ್ ವೇರಿಯಂಟ್, US ನಲ್ಲಿ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪತ್ತೆಯಾಗಿದೆ. ಈ ರಾಜ್ಯಗಳಲ್ಲಿ ಇದುವರೆಗೆ ಒಟ್ಟು 194 ಪ್ರಕರಣಗಳು ವರದಿಯಾಗಿವೆ. ಆದರೆ ಡೆನ್ಮಾರ್ಕ್‌ನಲ್ಲಿ BA.2 ಮೂಲ ವೈರಸ್ ಸೋಂಕಿಗೆ ಒಳಗಾದ ಸುಮಾರು 82 ಪ್ರತಿಶತದಷ್ಟು ಜನರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News