ಕಠ್ಮಂಡುವಿನಲ್ಲಿ ನೆಲಕ್ಕೆ ಅಪ್ಪಳಿಸಿದ ಬಾಂಗ್ಲಾದೇಶದ ನಾಗರೀಕ ವಿಮಾನ, 50 ಸಾವು

ಬಾಂಗ್ಲಾದೇಶದ ಪ್ರಯಾಣಿಕ ವಿಮಾನವು ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು, ಕನಿಷ್ಠ 50 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 

Last Updated : Mar 12, 2018, 06:56 PM IST
ಕಠ್ಮಂಡುವಿನಲ್ಲಿ ನೆಲಕ್ಕೆ ಅಪ್ಪಳಿಸಿದ ಬಾಂಗ್ಲಾದೇಶದ ನಾಗರೀಕ ವಿಮಾನ, 50 ಸಾವು title=

ನವದೆಹಲಿ: ಬಾಂಗ್ಲಾದೇಶದ ಪ್ರಯಾಣಿಕ ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುನಲ್ಲಿರುವ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.  ವಿಮಾನದಲ್ಲಿ 78 ಪ್ರಯಾಣಿಕರಿದ್ದರು ಎಂದು ವರದಿಯಾಗಿದ್ದು, ಕನಿಷ 50 ಮಂದಿ ಸಾವನ್ನಪ್ಪಿರುವುದಾಗಿ ಸುಡಿ ಸಂಸ್ಥೆಯೊಂದು ತಿಳಿಸಿದೆ.

ಇದಕ್ಕೂ ಮುನ್ನ 38 ಮಂದಿ ಸಾವನ್ನಪ್ಪಿದ್ದು, 23 ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿತ್ತು. ಗಾಯಗೊಂಡವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಸಂಪೂರ್ಣವಾಗಿ ನಾಶಗೊಂಡಿದೆ. 

ಲ್ಯಾಂಡಿಂಗ್ ಸಮಯದಲ್ಲಿ ಕ್ರಾಶ್
ನೇಪಾಳದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಪ್ಲೇನ್ S2-AGU, ಬೊಂಬಾರ್ಡಿಯರ್ ಡ್ಯಾಶ್ 8 Q400. ಆದಾಗ್ಯೂ, ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಮಾಹಿತಿ ಪ್ರಕಾರ, ವಿಮಾನವು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪ್ಪಳಿಸಿತು. ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ ಫ್ಲೈಟರ್ 24 ಪ್ರಕಾರ, ಅಪಘಾತವು ಸುಮಾರು 2:20 ಗಂಟೆಗೆ ಸಂಭವಿಸಿದೆ.

 

ಅನೇಕ ಪ್ರಯಾಣಿಕರು ಕಲ್ಲುಮಣ್ಣುಗಳಲ್ಲಿ ಸಿಕ್ಕಿಹಾಕಿಕೊಂಡರು
ವಿಮಾನ ಅಪಘಾತದ ನಂತರ ನೇಪಾಳದ ಸ್ಥಳೀಯ ಮಾಧ್ಯಮಗಳ ಪ್ರಕಾರ ಸುಮಾರು 50 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇತರರನ್ನು ರಕ್ಷಿಸಲಾಗಿದೆ. ವಿಮಾನದ ಅವಶೇಷಗಳು ಸಂಪೂರ್ಣವಾಗಿ ಚದುರಿಹೋಗಿದೆ. ಅನೇಕ ಪ್ರಯಾಣಿಕರು ಈಗಲೂ ಕಲ್ಲುಮಣ್ಣುಗಳಲ್ಲಿ ಸಿಲುಕಿದ್ದಾರೆ. 

ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ವಿಮಾನದಿಂದ ಹೊಗೆ ಕಂಡುಬಂದಿದೆ. ವಿಮಾನ ಅಪಘಾತಕ್ಕೊಳಗಾದಾಗ, 71 ಜನರು ವಿಮಾನದಲ್ಲಿದ್ದರು. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕೆಲಸ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದುವರೆಗೂ 28 ಜನರನ್ನು ವಿಮಾನದಿಂದ ಹೊರಗೆಳದಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

Trending News