ರೈಲು ಅಥವಾ ಕ್ಯಾಬ್ ನಲಿ ಮಗುವಿಗೆ ಜನ್ಮ ನೀಡುವ ಕಥೆಯನ್ನು ನಾವು ಕೇಳಿದ್ದೇವೆ. ಆದರೆ ಪಿಜ್ಜಾ ಶಾಪ್ ನಲ್ಲಿ ಡೆಲಿವರಿಯಾಗಿರುವ ಬಗ್ಗೆ ಎಂದಾದರೂ ಕೇಳಿರುವಿರೇ? ಆದರೆ ಉತ್ತರ ಎಡಿಲೆಡ್ ನ ಪೆನ್ಫೀಲ್ಡ್ನಲ್ಲಿ ಅಂತಹ ಒಂದು ಘಟನೆ ನಡೆದಿದೆ. ಇಲ್ಲಿ ಪಿಜ್ಜಾ ತಿನ್ನಲು ಹೋದ ಗರ್ಭಿಣಿಯೊಬ್ಬರಿಗೆ ಹೆರಿಗೆ ಆಗಿರುವ ಘಟನೆ ನಡೆದಿದೆ. ವಾಸ್ತವವಾಗಿ ಪಿಜ್ಜಾ ಅಂಗಡಿಯ ನೌಕರರು ಜನರಿಗೆ ತಿನಿಸುಗಳನ್ನು ವಿತರಿಸುತ್ತಿದ್ದರು. ಏತನ್ಮಧ್ಯೆ, ಗರ್ಭಿಣಿ ಮಹಿಳೆಯು ಪಿಜ್ಜಾ ಆರ್ಡರ್ ಮಾಡಿದರು. ನಂತರ ಇದ್ದಕ್ಕಿದ್ದಂತೆ ಅವರಿಗೆ ಲೇಬರ್ ಪೈನ್ ಆರಂಭವಾಯಿತು. ತದನಂತರ ಆ ಶಾಪ್ ನ ವಾತಾವರಣವೇ ಬದಲಾಯಿತು.
ಪೆನ್ಫೀಲ್ಡ್ನಲ್ಲಿರುವ ಕೋಕೋಸ್ ಪಿಜ್ಜಾ ಶಾಪ್ ಗೆ ತೆರಳಿದ ಮಹಿಳೆಗೆ 17 ತಾರೀಖಿನಂದು ಹೆರಿಗೆ ದಿನಾಂಕ ನೀಡಿದ್ದರು. ಹಾಗಾಗಿ ಹೆರಿಗೆಯ ಆಲೋಚನೆಯೇ ಇಲ್ಲದ ಆಕೆ ಪಿಜ್ಜಾ ತಿನ್ನಲು ತೆರಳಿದ್ದರು. ಸಂಜೆ 7.45 ರ ವೇಳೆಗೆ ಅಂಗಡಿಯನ್ನು ತಲುಪಿದ ಮಹಿಳೆಗೆ ಸ್ವಲ್ಪ ಸಮಯದಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡಿತು. ನಂತರ ಆಕೆ ಕೆಳಗೆ ಕುಸಿದರು. ಇದನ್ನು ಕಂಡ ಅಂಗಡಿಯ ಮಾಲೀಕ ಪಾಲ್ ಯಾರ್ಕ್ ತನ್ನ ಸಿಬ್ಬಂದಿಗೆ ಆಕೆಗೆ ಸಹಾಯ ಮಾಡುವಂತೆ ಸೂಚಿಸಿದರು.
ಏತನ್ಮಧ್ಯೆ, ಸಿಬ್ಬಂದಿಗಳಲ್ಲಿ ಕೆಲಸ ಮಾಡುವ ಮಹಿಳೆ (ಒಬ್ಬ ತಾಯಿ) ಸೂಲಗಿತ್ತಿ ಪಾತ್ರದಲ್ಲಿ ಬಂದು ಆಕೆಗೆ ಸಹಾಯ ಮಾಡಿದರು. ಮತ್ತೊಂದೆಡೆ, ನಾನು ಫೋನ್ನಲ್ಲಿ ಆಂಬ್ಯುಲೆನ್ಸ್ ಗೆ ತಿಳಿಸಿದೆ. ಅಷ್ಟರಲ್ಲಿ ಆ ಮಹಿಳೆಗೆ ಮಗು ಜನಿಸಿತು. ಒಂದು ಗಂಟೆಯಲ್ಲಿ ಈ ಪೂರ್ಣ ಘಟನೆ ನಡೆಯಿತು ಎಂದು ಯಾರ್ಕ್ ತಿಳಿಸಿದ್ದಾರೆ.
ಇದರ ನಂತರ ಪಿಜ್ಜಾ ಶಾಪ್ ನ ಫೇಸ್ ಬುಕ್ ಪೇಜ್ ನಲ್ಲಿ ನವಜಾತ ಶಿಶುವಿನ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.