ನವದೆಹಲಿ: ಮಾನವಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕ ಡೇವಿಡ್ ಗ್ರೇಬರ್ ತಮ್ಮ 59 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಈಗ ಅವರ ಸಾವಿನ ಸುದ್ದಿಯನ್ನು ಅವರ ಪಾರ್ಟ್ನರ್ ಮತ್ತು ಕಲಾವಿದೆ ನಿಕಾ ಡುಬ್ರೊವ್ಸ್ಕಿ ಟ್ವಿಟ್ಟರ್ ನಲ್ಲಿ ದೃಢಪಡಿಸಿದ್ದಾರೆ.
ಅವರು ವಾಲ್ ಸ್ಟ್ರೀಟ್ ಆಕ್ರಮಣ ಆಂದೋಲನವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.Debt: The First 5000 Years, The Utopia of Rules and Bullshit Jobs: A Theory ಎನ್ನುವ ಅವರ ಕೃತಿ ಸಾಕಷ್ಟು ಹೆಸರನ್ನು ಗಳಿಸಿದೆ.ಇದಲ್ಲದೆ ಡೇವಿಡ್ ವೆಂಗ್ರೋ ಜೊತೆಗೆ ರಚಿಸಿದ್ದ ಅವರ ಅಂತಿಮ ಕೃತಿ, The Dawn of Everything: a New History of Humanity 2021ರಲ್ಲಿ ಬಿಡುಗಡೆಯಾಗಲಿದೆ.
Yesterday the best person in a world, my husband and my friend .@davidgraeber died in a hospital in Venice.
— Nika Dubrovsky (@nikadubrovsky) September 3, 2020
“Debt is the most efficient means ever created to take relations that are fundamentally based on violence and violent inequality and make them seem right and proper.” David Graeber, who passed away today. Here he is a few months ago on DiEM-TV https://t.co/rG78uNnA6i
— Yanis Varoufakis (@yanisvaroufakis) September 3, 2020
'ಡೇವಿಡ್ ಪ್ರಭಾವಶಾಲಿ ಮಾನವಶಾಸ್ತ್ರಜ್ಞ, ರಾಜಕೀಯ ಕಾರ್ಯಕರ್ತ ಮತ್ತು ಸಾರ್ವಜನಿಕ ಬುದ್ಧಿಜೀವಿ. ಅವರ ನಿಧನದ ನಂತರ ನಮ್ಮ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಮುದಾಯವು ಎಂದಿನಂತೆ ಇರುವುದಿಲ್ಲ, ಆದರೆ ಅವರ ಅದ್ಭುತ ಕಾರ್ಯವನ್ನು ಮುಂದಿನ ಪೀಳಿಗೆಗಳು ಓದುತ್ತಾರೆ ಎಂದು ನಮಗೆ ತಿಳಿದಿದೆ 'ಎಂದು ಎಲ್ಎಸ್ಇಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಲಾರಾಬಿಯರ್ ಸಂತಾಪ ವ್ಯಕ್ತಪಡಿಸಿದ್ದಾರೆ
ಬಂಡವಾಳಶಾಹಿ ಮತ್ತು ಅಧಿಕಾರಶಾಹಿಯ ಬಗ್ಗೆ ಅವರ ನಿರಂತರ ವಿಮರ್ಶೆ ಮತ್ತು ಟೀಕೆ ಟಿಪ್ಪಣಿಗಳು ಅವರ ಪುಸ್ತಕಗಳಲ್ಲಿ ದಾಖಲಿಸಲ್ಪಟ್ಟಿದೆ.ನಾವು 99 ಶೇಕಡಾ (We are the 99 per cent) ಎನ್ನುವ ಅವರ ಘೋಷಣೆ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ.ವಾಲ್ ಸ್ಟ್ರೀಟ್ ಆಕ್ರಮಣ ಚಳವಳಿಯ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್ಎಸ್ಇ) ಯಲ್ಲಿ ಮಾನವಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಸಿಸುತ್ತಿದ್ದರು.
ಯುವಕನಾಗಿ ಮಾಯನ್ ಚಿತ್ರಲಿಪಿಗಳನ್ನು ಭಾಷಾಂತರಿಸುವ ಹವ್ಯಾಸವನ್ನು ಬೆಳಸಿಕೊಂಡ ಗ್ರೇಬರ್ ನಂತರ ಮಾನವಶಾಸ್ತ್ರದ ಮೇಲೆ ಆಸಕ್ತಿ ಬೆಳಸಿಕೊಂಡರು. ಆಂಡೊವರ್ನಲ್ಲಿರುವ ಫಿಲಿಪ್ಸ್ ಅಕಾಡೆಮಿಗೆ ಹಾಜರಾಗಲು ವಿದ್ಯಾರ್ಥಿ ವೇತನವನ್ನು ಪಡೆದು ಅಲ್ಲಿಂದ ಅವರು ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಗೆ ತೆರಳಿದರು, ನಂತರ ಚಿಕಾಗೊ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಮುಗಿಸಿದರು,ಕೊನೆಗೆ ಅವರು ಯೇಲ್ ವಿಶ್ವವಿದ್ಯಾಲಯಕ್ಕೆ ಸೇರಿದರು.