Afghanistan Crisis Video - ಅಫ್ಘಾನಿಸ್ತಾನದಲ್ಲಿ (Afghanistan) ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ತಾಲಿಬಾನ್ (Taliban) ಉಗ್ರರು ಆಫ್ಘಾನಿಸ್ತಾನದ ಬಹುತೇಕ ಎಲ್ಲಾ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ (Kabul) ಅನ್ನು ಪ್ರವೇಶಿಸಿದ್ದಾರೆ. ಕಾಬೂಲ್‌ನಲ್ಲಿ ತಾಲಿಬಾನ್ ಉಗ್ರರ (Taliban Militants) ಪ್ರವೇಶದ ನಂತರ, ಜನರು ಯಾವುದೇ ರೀತಿಯಲ್ಲಿ ಅಫ್ಘಾನಿಸ್ತಾನದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ತಮ್ಮ ಕೆಲವು ನಾಗರಿಕರನ್ನು ಏರ್ ಲಿಫ್ಟ್ ಮಾಡಿವೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kabul International Airport) ಆಘಾತಕಾರಿ ವಿಡಿಯೋ ಹೊರಬಿದ್ದಿದೆ. ಈ ವೀಡಿಯೋ ಅಫ್ಘಾನಿಸ್ತಾನದಲ್ಲಿ ವಿಶೇಷವಾಗಿ ಕಾಬೂಲ್‌ನಲ್ಲಿನ ಪರಿಸ್ಥಿತಿಯನ್ನು ಬಿತ್ತರಿಸುತ್ತಿದೆ . ಎಲ್ಲಾ ಜನರು ಅಲ್ಲಿಂದ ಹೊರಬರಲು ಹತಾಶರಾದ ನಂತರ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಟೊಲೋ ನ್ಯೂಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೊ ಕಾಬೂಲ್ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಯುಎಸ್ ಸೇನೆಯ ವಿಮಾನಕ್ಕೆ ಜನರು ಹೇಗೆ ನೇತಾಡುತ್ತಿದ್ದಾರೆ ಎಂಬುದನ್ನು ನೀವು ಈ ವೀಡಿಯೊದಲ್ಲಿ ನೋಡಬಹುದು. ವಿಮಾನವು ಟೇಕ್ ಆಫ್ ಆಗಲು ರನ್ ವೇನಲ್ಲಿ ಮುಂದಕ್ಕೆ ಚಲಿಸಿದ ತಕ್ಷಣ ಜನರು ವಿಮಾನದ ಜೊತೆಗೆ ಓಡಲಾರಂಭಿಸಿದ್ದಾರೆ, ಅವಕಾಶ ಸಿಕ್ಕವರು ವಿಮಾನಕ್ಕೆ ಜೋತು ಬಿದ್ದಿದ್ದಾರೆ ಉಳಿದವರೆಲ್ಲರೂ ಓಡುತ್ತಿದ್ದಾರೆ.
ಇದನ್ನೂ ಓದಿ-Viral Video: ಅಫ್ಘಾನ್ ತೊರೆಯಲು ಕಾಬೂಲ್ ಏರ್‌ಪೋರ್ಟ್‌ನತ್ತ ಜನಜಾತ್ರೆ, ವಿಮಾನವೇರಲು ನೂಕುನುಗ್ಗಲು!
Video: People run on tarmac of Kabul international airport as a US military aircraft attempts to take off. pic.twitter.com/9qA36HS0WQ
— TOLOnews (@TOLOnews) August 16, 2021
ಸುಮಾರು 17 ಸೆಕೆಂಡ್ ಅವಧಿಯ ಈ ವಿಡಿಯೋ ನೋಡಿ ನೀವು ಬೆಚ್ಚಿಬೀಳುವಿರಿ. ಈ ವಿಡಿಯೋ ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು ಬಿತ್ತರಿಸುತ್ತಿದೆ. ಜನರು ಯಾವ ರೀತಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ವಿಕ್ಷೀಸಬಹುದು. ಈ ವಿಡಿಯೋದಲ್ಲಿ ಜನರು ಯಾವ ರೀತಿ ವಿಮಾನದ ಜೊತೆಗೆ ಸಾಗುತ್ತಿದ್ದಾರೆ ಹಾಗೂ ಟೈರ್ ಮೇಲೂ ಕೂಡ ಸವಾರಿ ನಡೆಸುತ್ತಿದ್ದಾರೆ. ಹಲವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿಮಾನದ ಹಿಂಭಾಗಕ್ಕೆ ಜೋತುಬೀಳುತ್ತಿದ್ದಾರೆ.
ಇದನ್ನೂ ಓದಿ-Afghanistan Crisis: ಕಾಬೂಲ್ ಏರ್ಪೋರ್ಟ್ ನಲ್ಲಿ ಫೈರಿಂಗ್, 5 ನಾಗರಿಕರ ಸಾವು
ಏರ್ಸ್ಪೇಸ್ ಬಂದ್ ಮಾಡಿದ ಅಫ್ಘಾನಿಸ್ತಾನ
ಸೋಮವಾರ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ದೇಶವನ್ನು ತೊರೆಯಲು ಭಾರೀ ಜನಸಂದನಿಯೇ ಧಾವಿಸಿದೆ. ಈ ಸಮಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಏತನ್ಮಧ್ಯೆ, ಗುಂಡಿನ ಸದ್ದು ಕೂಡ ಕೇಳಿಬಂದಿದ್ದು, ಇದರಲ್ಲಿ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಗಳ ನಂತರ ಕಾಬೂಲ್ ನಿಂದ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಣದಿಂದಾಗಿ, ಭಾರತದಿಂದ ಮತ್ತು ಕಾಬೂಲ್‌ಗೆ ವಿಮಾನಗಳನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅಫ್ಘಾನಿಸ್ತಾನವನ್ನು ತೊರೆಯುವ ನಿರೀಕ್ಷೆಯಲ್ಲಿದ್ದ ಸಾವಿರಾರು ಭಾರತೀಯರು ಹಿನ್ನಡೆ ಅನುಭವಿಸಿದ್ದಾರೆ. ಗುಂಡಿನ ದಾಳಿಯ ನಂತರ ಅಫ್ಘಾನಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದೆ . ಜನರು ವಿಮಾನ ನಿಲ್ದಾಣಕ್ಕೆ ಬರಬಾರದು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಮನವಿ ಮಾಡಲಾಗುತ್ತಿದೆ.
ಇದನ್ನೂ ಓದಿ-ತಾಲಿಬಾನ್ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ