Adenovirus: ಮಕ್ಕಳಲ್ಲಿ ಹರಡುವ ಈ ಅಪಾಯಕಾರಿ ವೈರಸ್ ಬಗ್ಗೆ ಇರಲಿ ಎಚ್ಚರ

Adenovirus Hepatitis Symptoms:  ಪ್ರಪಂಚದಾದ್ಯಂತ ಹತ್ತಾರು ಮಕ್ಕಳು ಇತ್ತೀಚಿನ ದಿನಗಳಲ್ಲಿ ನಿಗೂಢ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಈ ಕಾಯಿಲೆಯಿಂದ ರಕ್ಷಿಸಲು ನೀವು ಬಯಸಿದರೆ, ಅದರ ಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.  

Written by - Yashaswini V | Last Updated : Apr 27, 2022, 08:01 AM IST
  • ಈ ನಿಗೂಢ ರೋಗದ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು ಇದು ಹೆಪಟೈಟಿಸ್‌ಗೆ ಸಂಭವನೀಯ ಕಾರಣ ಅಡೆನೊವೈರಸ್ ಎಂದು ಊಹಿಸಿದ್ದಾರೆ.
  • ಆದಾಗ್ಯೂ, ಇದು ಸಾಮಾನ್ಯ ವೈರಸ್ ನಂತೆಯೇ ಜ್ವರ ಮತ್ತು ಗ್ಯಾಸ್ಟ್ರೋ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
  • ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಆರೋಗ್ಯವನ್ನು ಸುಧಾರಿಸಬಹುದು.
Adenovirus: ಮಕ್ಕಳಲ್ಲಿ ಹರಡುವ ಈ ಅಪಾಯಕಾರಿ ವೈರಸ್ ಬಗ್ಗೆ ಇರಲಿ ಎಚ್ಚರ title=
Hepatitis Symptoms

ಅಡೆನೊವೈರಸ್ ಹೆಪಟೈಟಿಸ್ ಲಕ್ಷಣಗಳು:  ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತದ ಹತ್ತಾರು ಮಕ್ಕಳು  ನಿಗೂಢ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಇದುವರೆಗೂ ಈ ನಿಗೂಢ ಸಮಸ್ಯೆಯು ನೂರಾರು ಮಕ್ಕಳನ್ನು ಬಾಧಿಸುತ್ತಿದೆ. ಇದು ಅವರ ಯಕೃತ್ತಿನ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಈ ನಿಗೂಢ ಸಮಸ್ಯೆಯು ವೈದ್ಯಕೀಯ ಜಗತ್ತಿಗೇ ಒಂದು ಸವಾಲಾಗಿದ್ದು ಉನ್ನತ ತಜ್ಞರು ಇದರ ಕಾರಣವನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯಲ್ಲಿ ತೊಡಗಿದ್ದಾರೆ.

ಇದುವರೆಗೆ 169 ಮಕ್ಕಳು ಬಾಧಿತರಾಗಿದ್ದಾರೆ:
ವರದಿಯ ಪ್ರಕಾರ, ಕಳೆದ ಅಕ್ಟೋಬರ್‌ನಿಂದ 12 ದೇಶಗಳಲ್ಲಿ ಒಟ್ಟು 169 ಮಕ್ಕಳು ಹೆಪಟೈಟಿಸ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಮಾರ್ಚ್‌ನಿಂದ ಬ್ರಿಟನ್ ಒಂದರಲ್ಲೇ ಈ ವೈರಸ್‌ನ 114 ಪ್ರಕರಣಗಳು ವರದಿಯಾಗಿವೆ. 

ಇತ್ತೀಚಿಗೆ ಕಾಣಿಸಿಕೊಂಡಿರುವ ಈ ನಿಗೂಢ ಕಾಯಿಲೆಯಿಂದ ಮಗುವೊಂದು ಮೃತಪಟ್ಟಿರುವುದಾಗಿ ‘ದಿ ಸನ್’ ನ್ಯೂಸ್ ವರದಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ತಜ್ಞರು ಈ ನಿಗೂಢ ಕಾಯಿಲೆಗೆ ಸಂಬಂಧಿಸಿದ ಕೆಲವು ರೋಗಲಕ್ಷಣಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ನಿಮ್ಮ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಂಡು ಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. ಸಕಾಲದಲ್ಲಿ ಚಿಕಿತ್ಸೆ ಲಭ್ಯವಾದರೆ ಮಗುವಿಗೆ ಹೆಚ್ಚು ಹಾನಿಯಾಗುವುದನ್ನು ತಪ್ಪಿಸಬಹುದು ಎಂದು ವೈದ್ಯರು ಪೋಷಕರಲ್ಲಿ ಮನವಿ ಮಾಡಿದ್ದಾರೆ. 

ಇದನ್ನೂ ಓದಿ- ಬಿಪಿಯನ್ನು ನಿಯಂತ್ರಿಸಲು ಬಾಳೆಹಣ್ಣು ಸಹಾಯ ಮಾಡುತ್ತದೆಯೇ?

ಈ ನಿಗೂಢ ರೋಗದ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು ಇದು ಹೆಪಟೈಟಿಸ್‌ಗೆ ಸಂಭವನೀಯ ಕಾರಣ ಅಡೆನೊವೈರಸ್ ಎಂದು ಊಹಿಸಿದ್ದಾರೆ. ಆದಾಗ್ಯೂ, ಇದು ಸಾಮಾನ್ಯ ವೈರಸ್ ನಂತೆಯೇ ಜ್ವರ ಮತ್ತು ಗ್ಯಾಸ್ಟ್ರೋ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಚಿಕಿತ್ಸೆಯ ನಂತರ ಈ ವೈರಸ್ ಅನ್ನು ಪರಿಹರಿಸಬಹುದು ಎನ್ನಲಾಗಿದೆ. 

ಮಕ್ಕಳಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ: 
ಹದಿಹರೆಯದವರಲ್ಲಿ ಹೆಪಟೈಟಿಸ್ ಅಪರೂಪವಾಗಿ ಕಂಡುಬರುತ್ತದೆ. ಇದರ ಮುಖ್ಯ ಲಕ್ಷಣಗಳು ಅತಿಸಾರ, ವಾಂತಿ ಮತ್ತು ಹೊಟ್ಟೆ ನೋವಿನ ಲಕ್ಷಣಗಳು. ಆದಾಗ್ಯೂ, ಯುಕೆ 
ಹೆಲ್ತ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ಅಡೆನೊವೈರಸ್ ಟೈಪ್ 41 ಎಫ್ ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಪಟೈಟಿಸ್‌ಗೆ ಕಾರಣವಾಗಬಹುದು ಎನ್ನಲಾಗಿದೆ. ಇದಲ್ಲದೆ,  ಕಾಯಿಲೆಗೆ ತುತ್ತಾದರೆ ಅಂತಹವರಲ್ಲಿ ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

1-4 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ವೈರಸ್ ಹೆಚ್ಚು ಹರಡುತ್ತಿದೆ:
ಅಡೆನೊವೈರಸ್ನ ಆರಂಭಿಕ ಪ್ರಕಾರವು 41ಎಫ್ ಗೆ ಹೋಲುತ್ತದೆ ಎಂದು ವರದಿ ಹೇಳುತ್ತದೆ. ಅದರ ಡೇಟಾವನ್ನು ರಕ್ತದ ಮಾದರಿಗಳಿಂದ ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಇತರ ರೀತಿಯ ವೈರಸ್‌ಗಳನ್ನು ರಕ್ತೇತರ ಮಾದರಿಗಳಿಂದ ಸಂಗ್ರಹಿಸಲಾಗಿದೆ. ಈ ಸ್ಥಿತಿಯ ಬಗ್ಗೆ ಪ್ರಸ್ತುತ ಆಘಾತಕಾರಿ ಸಂಗತಿಯೆಂದರೆ, 1-4 ವರ್ಷ ವಯಸ್ಸಿನ ಮಕ್ಕಳಲ್ಲಿ ಅಡೆನೊವೈರಸ್ ವೇಗವಾಗಿ ಹರಡುತ್ತಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ- ಲೀವರ್ ಹಾಳಾದರೆ ಈ ಐದು ಲಕ್ಷಣಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ

ಅಡೆನೊವೈರಸ್ ರೋಗಕ್ಕೆ ಕಾರಣ:
ಯುಕೆ ಆರೋಗ್ಯ ಸೇವಾ ಪ್ರಾಧಿಕಾರದ ನಿರ್ದೇಶಕಿ ಡಾ.ಮೀರಾ ಚಂದ್ ಅವರ ಪ್ರಕಾರ, 
ಮಕ್ಕಳಲ್ಲಿ ಹಠಾತ್-ಆಕ್ರಮಣ ಹೆಪಟೈಟಿಸ್ ಹೆಚ್ಚಳವು ಅಡೆನೊವೈರಸ್ ಸೋಂಕಿನೊಂದಿಗೆ ಸಂಬಂಧಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.  ಆದಾಗ್ಯೂ, ಯುಕೆ ಆರೋಗ್ಯ ಸೇವಾ ಪ್ರಾಧಿಕಾರವು  ಇತರ ಸಂಭವನೀಯ ಕಾರಣಗಳನ್ನು ಸಹ ಪರಿಶೀಲಿಸುತ್ತಿದೆ ಎನ್ನಲಾಗಿದೆ.

ಅದೇನೇ ಇದ್ದರೂ, ಮೊದಲೇ ಕರೋನಾವೈರಸ್ ನಿಂದಾಗಿ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಬಿಸಿಲಿನ ಬೇಗೆ ಹಾಗೂ ಸಾಮಾನ್ಯ ಸೋಂಕುಗಳಿಂದ ಮಕ್ಕಳನ್ನು ರಕ್ಷಿಸುವುದು ಬಹಳ ಮುಖ್ಯ. ಇದರೊಂದಿಗೆ ಪೋಷಕರು ಹೆಪಟೈಟಿಸ್ (ಕಾಮಾಲೆ ಸೇರಿದಂತೆ) ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು. ಅವರು ತಮ್ಮ ಮಕ್ಕಳಲ್ಲಿ ಅಂತಹ ರೋಗಲಕ್ಷಣಗಳನ್ನು ಕಂಡರೆ, ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡುವ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹೆಪಟೈಟಿಸ್ ರೋಗಲಕ್ಷಣಗಳು:
- ಕಣ್ಣುಗಳು ಅಥವಾ ಚರ್ಮದಲ್ಲಿ ಬಿಳಿಯ ಹಳದಿ ಬಣ್ಣ (ಕಾಮಾಲೆ)
- ಗಾಢ ಮೂತ್ರ 
- ಹಳದಿ, ಕಂದು ಬಣ್ಣದ ಮಲ 
- ಚರ್ಮದ ತುರಿಕೆ 
- ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು
- ಜ್ವರ ಕಡಿಮೆಯಾಗದೇ ಇರುವುದು 
- ಎಲ್ಲಾ ಸಮಯದಲ್ಲೂ ದಣಿದ ಮತ್ತು ಅನಾರೋಗ್ಯದ ಭಾವನೆ 
- ಹಸಿವಿನ ನಷ್ಟ
- ಹೊಟ್ಟೆ ನೋವು 

ಈ ಅಪಾಯಕಾರಿ ವೈರಸ್ ತಡೆಗಟ್ಟುವ ಮಾರ್ಗ:
ಈ ಅಪಾಯಕಾರಿ ವೈರಸ್ ತಡೆಗಟ್ಟಲು ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ಇದರಿಂದ ಅಡೆನೊವೈರಸ್ ಸೇರಿದಂತೆ ಹಲವು ರೋಗಗಳಿಂದ ದೂರವಿರಬಹುದು
- ಆಗಾಗ್ಗೆ ಕೈ ತೊಳೆಯುತ್ತಿರಿ.
- ಕೈ ತೊಳೆಯದೆ ಏನನ್ನೂ ಸೇವಿಸಬೇಡಿ.
-  ಮಗುವು ವಾಂತಿ ಅಥವಾ ಅತಿಸಾರವನ್ನು ಅನುಭವಿಸಿದರೆ, ಜೀರ್ಣಾಂಗವ್ಯೂಹದ ಸೋಂಕನ್ನು ತಪ್ಪಿಸಲು ಅವರು ಮನೆಯಲ್ಲಿಯೇ ಇರಬೇಕು.
- ಈ ರೋಗಲಕ್ಷಣಗಳು ಕಡಿಮೆ ಆಗುವವರೆಗೂ ಅವರನ್ನು ಮನೆಯಿಂದ ಹೊರಗೆ ಬಿಡದಿರುವುದು ಒಳ್ಳೆಯದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News