ನ್ಯೂಯಾರ್ಕ್ : ಹೊಸ ವರ್ಷ ಆತಂಕದೊಂದಿಗೆ ಹೆಜ್ಜೆಯಿಡುತ್ತಿದೆಯಾ ಅನ್ನುವ ಆತಂಕ ಕಾಡುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೇ 220 ಮೀಟರ್ ಉದ್ದದ ದೈತ್ಯ ಕ್ಷುದ್ರಗ್ರಹವೊಂದು (Asteroid) ಭೂಮಿಯನ್ನು ಸಮೀಪಿಸುತ್ತಿದೆ ಎಂದು ನಾಸಾ (NASA) ಎಚ್ಚರಿಕೆ ನೀಡಿದೆ. ನಿಮಗೆ ಗೊತ್ತಿರಲಿ, 2020 ರ ಕೊನೆಯ ಭಾಗದಲ್ಲೂ ಭೂಮಿಗೆ ಸಮೀಪದಲ್ಲಿ ಒಂದು ಕ್ಷುದ್ರಗ್ರಹ ಹಾದುಹೋಗಿತ್ತು. ಆ ಕೊನೆಯ ಕ್ಷುದ್ರಗ್ರಹದ ಹೆಸರು 2020 YB4 ಎಂದಿತ್ತು. ಇದರ ವ್ಯಾಸ ಕೇವಲ 36 ಮೀಟರ್ ಆಗಿತ್ತು. ಈ ಕ್ಷುದ್ರಗ್ರಹವು ಬೆಳಿಗ್ಗೆ 6 ಗಂಟೆಯ UTC ಕಾಲಮಾನದಲ್ಲಿ ಭೂಮಿಯಿಂದ 6.1 ದಶಲಕ್ಷ ಕಿಲೋಮೀಟರ್ ದೂರ ಹಾದುಹೋಗಿತ್ತು.
2020 ಕಳೆದು ಈಗ 2021ಕ್ಕೆ ಕಾಲಿರಿಸಿದೆ. ಹೊಸ ವರ್ಷದ ಮೊದಲ ದಿನಗಳಲ್ಲಿ ಕ್ಷುದ್ರಗ್ರಹಗಳಂತಹ (Asteroid) ಮೂರು ಆಕಾಶಕಾಯಗಳು (NEOs) ಭೂಮಿಗೆ ಹತ್ತಿರದಲ್ಲಿ ಹಾದುಹೋಗಲಿವೆ.
ಈ ಮೂರು ಕ್ಷುದ್ರ ಗ್ರಹಗಳಲ್ಲಿ ಒಂದರ ಹೆಸರು 2019 YB4. ಇದರ ವ್ಯಾಸ 15 ಮೀಟರ್. ಇರುವುದರಲ್ಲಿ ಇದೇ ಸಣ್ಣ ಕ್ಷುದ್ರಗ್ರಹ. ಇದು ಭೂಮಿಯಿಂದ 6.4 ದಶಲಕ್ಷ ಕಿಲೋಮೀಟರ್ ದೂರದಿಂದ ಹಾದು ಹೋಗಲಿದೆ. ವಿಜ್ಙಾನಿಗಳ ಪ್ರಕಾರ ಇದು ಸೇಫ್ ಡಿಸ್ಟೆನ್ಸ್. ಇದರ ಬೆನ್ನ ಹಿಂದೆಯೇ ಇನ್ನೊಂದು ಕ್ಷುದ್ರಗ್ರಹ ಶರವೇಗದಲ್ಲಿ ಧಾವಿಸಲಿದೆ.
ALSO READ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ174 ಕೋಟಿ ರೂ.ಗಳ Toilet, NASA ಖರ್ಚು ಕೇಳಿ ದಂಗಾಗುವಿರಿ
ಎರಡನೇ ಕ್ಷುದ್ರಗ್ರಹದ ಹೆಸರು 2020 YA1. ಇದರ ವ್ಯಾಸ (diameter) 15 ಮೀಟರ್. ಇದು ಭೂಮಿಗೆ1.5 ದಶಲಕ್ಷ ಕಿಲೋ ಮೀಟರ್ ದೂರದಿಂದ ಹಾದು ಹೋಗಲಿದೆ. ಮೂರನೇ ಕ್ಷುದ್ರ ಗ್ರಹದ ಹೆಸರು 2020 YP4. ಇದರ ವ್ಯಾಸ 21 ಮೀಟರ್. ಮೊದಲೆರಡು ಆಕಾಶಕಾಯಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದು. ಇದು ಮಾರನೇ ದಿನ ಭೂಮಿಗೆ 2.1 ದಶಲಕ್ಷ ಕಿಲೋಮೀಟರ್ ದೂರದಲ್ಲಿ ಹಾಯ್ದು ಹೋಗಲಿದೆ.
ಜ. 3ರಂದು ಧಾವಿಸಿ ಬರಲಿದೆ ಅತಿದೊಡ್ಡ ಕ್ಷುದ್ರಗ್ರಹ
ಈ ಮೂರು ಆಕಾಶಕಾಯಗಳಲ್ಲದೆ, ಜನವರಿ 3 ರಂದು ಅಪ್ಪಳಿಸಿಕೊಂಡು ಧಾವಿಸಲಿದೆ ಅತಿದೊಡ್ಡ ಕ್ಷುದ್ರಗ್ರಹ. ಇದರ ಹೆಸರು 2003 AF23. ಇದರ ವ್ಯಾಸ 220 ಮೀಟರ್. ನೋಡಲು ಸಣ್ಣ ಬೆಟ್ಟದಂತೆ ಇರುತ್ತದೆ. ಇದು ಭೂಮಿಗೆ ಸಮೀಪದಲ್ಲಿ ಹಾದುಹೋಗಲಿದೆ. ನಾಸಾ (NASA) ಹೇಳುವ ಪ್ರಕಾರ ಇದರ ಸ್ಪೀಡ್ 3.7 ಕಿಲೋಮೀಟರ್ ಪರ್ ಸೆಕೆಂಡ್. ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ ಗಂಟೆಗೆ 13 ಸಾವಿರ ಕಿಲೋ ಮೀಟರ್. ಅಂದರೆ ಊಹಿಸಲೂ ಅಸಾಧ್ಯವಾದ ವೇಗದಲ್ಲಿ ಧಾವಿಸುತ್ತಿದೆ. ಕ್ಷುದ್ರಗ್ರಹ ಮತ್ತು ಭೂಮಿಯ ದೂರದ ದೃಷ್ಟಿಯಿಂದ ಈ ಕ್ಷುದ್ರ ಗ್ರಹಗಳು ಭೂಮಿಗೆ ಸಾಕಷ್ಟು ದೂರದಿಂದಲೇ ಹಾದು ಹೋಗುತ್ತವೆ. ಆದರೆ, ನಾಸಾ ವೀಕ್ಷಣೆಯ ಆಧಾರದ ಮೇಲೆ ಅದನ್ನು ಭೂಮಿಗೆ ಸಮೀಪದಲ್ಲಿ ಹಾದು ಹೋಗುವ ಕ್ಷುದ್ರ ಗ್ರಹ ಎಂದೇ ಭಾವಿಸಲಾಗುತ್ತದೆ.
ALSO READ: ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಕ್ಷುದ್ರ ಗ್ರಹ ಅಂದರೇನು..?
ಕ್ಷುದ್ರ ಗ್ರಹಗಳು ಒಂದು ರೀತಿಯಲ್ಲಿ ಕಲ್ಲಿನ ಬಂಡೆಗಳು ಅಷ್ಟೇ. ಸೌರ ಮಂಡಲದಲ್ಲಿ (Universe)ಗ್ರಹಗಳು ಸೃಷ್ಟಿಯಾಗುವಾಗ ಬಿಟ್ಟು ಹೋಗಿರುವ ಕಲ್ಲಿನ ತುಂಡುಗಳು. ಅವುಗಳು ವಿಸ್ತಾರಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯಲ್ಲಿರುತ್ತವೆ.
ಕ್ಷುದ್ರಗ್ರಹಗಳು ನಿಜವಾಗಿಯೂ ಪ್ರಥ್ವಿಗೆ ಅಪ್ಪಳಿಸುತ್ತವೆಯಾ..?
ಕ್ಷುದ್ರ ಗ್ರಹಗಳು ಪ್ರಥ್ವಿಗೆ ಹತ್ತಿರವಾಗುವುದೇ ಒಂದು ಖಗೋಳ ವಿಸ್ಮಯ. ಒಂದು ವೇಳೆ ಈ ಕ್ಷುದ್ರ ಗ್ರಹಗಳು ಭೂಮಿಗೆ ಹತ್ತಿರವಾಗುವುದಷ್ಟೇ ಅಲ್ಲ, ಭೂಮಿಗೆ ಅಪ್ಪಳಿಸಿದರೆ ಏನಾಗುತ್ತೆ ಗೊತ್ತಾ..? ಏನೂ ಆಗಲ್ಲ. ಯಾಕೆ ಗೊತ್ತಾ. ಕ್ಷುದ್ರಗ್ರಹಗಳು ಭೂಮಿಯ ವಾಯು ಮಂಡಲ ಪ್ರವೇಶಿಸುತ್ತಿದ್ದಂತೆಯೇ, ಅವುಗಳು ಸೃಷ್ಟಿಸಿರುವ ವೇಗಕ್ಕೆ ಸರಿಯಾಗಿ ಉಂಟಾಗುವ ಬೆಂಕಿಯಿಂದ ಸುಟ್ಟು ಬೂದಿಯಾಗುತ್ತವೆ. ಭೂಮಿಯನ್ನು ಮುಟ್ಟುವ ಮೊದಲೇ ಕರಕಲಾಗಿರುತ್ತವೆ. ನಿಮಗೆ ಗೊತ್ತಿರಲಿ..ವಾಯುಮಂಡಲದಲ್ಲಿ ಸುಟ್ಟು ಕರಕಲಾಗದೇ ಹೋದ ಕ್ಷುದ್ರಗ್ರಹಗಳು ಭೂಮಿಯನ್ನು ಅಪ್ಪಳಿಸಿದ ಉದಾಹರಣೆಗಳೂ ಇವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.