ತಮ್ಮ ಮೊಮ್ಮಕ್ಕಳಿಗಾಗಿ ಉಕ್ರೇನಿಯನ್ ಸೈನ್ಯ ಸೇರಲು ಮುಂದಾದ 80 ವರ್ಷದ ಅಜ್ಜ

ಕೈಯಲ್ಲಿ ಬ್ಯಾಗ್‌ನೊಂದಿಗೆ ಉಕ್ರೇನಿಯನ್ (Ukraine) ಸೈನಿಕನ ಬಳಿಗೆ ಬಂದ ವ್ಯಕ್ತಿ ತಮ್ಮ ಮೊಮ್ಮಕ್ಕಳಿಗಾಗಿ ನಾನು ಹೋರಾಡುತ್ತೇನೆ ಎಂದಾಗ ಸೈನಿಕರು ಅರೆಕ್ಷಣ ಶಾಕ್ ಆಗಿದ್ದಾರೆ. 

Written by - Chetana Devarmani | Last Updated : Feb 27, 2022, 04:39 PM IST
  • ಕೈಯಲ್ಲಿ ಬ್ಯಾಗ್‌ನೊಂದಿಗೆ ಉಕ್ರೇನಿಯನ್ ಸೈನಿಕರ ಬಳಿ ಬಂದ ವ್ಯಕ್ತಿ
  • ಮೊಮ್ಮಕ್ಕಳಿಗಾಗಿ ನಾನು ಹೋರಾಡುತ್ತೇನೆ ಎಂದ 80 ವರ್ಷದ ಅಜ್ಜ
ತಮ್ಮ ಮೊಮ್ಮಕ್ಕಳಿಗಾಗಿ ಉಕ್ರೇನಿಯನ್ ಸೈನ್ಯ ಸೇರಲು ಮುಂದಾದ 80 ವರ್ಷದ ಅಜ್ಜ  title=
ಉಕ್ರೇನಿಯನ್ ಸೈನಿಕರ ಬಳಿ ಬಂದ ವ್ಯಕ್ತಿ

ಕೀವ್ (ಉಕ್ರೇನ್): ಕೈಯಲ್ಲಿ ಬ್ಯಾಗ್‌ನೊಂದಿಗೆ ಉಕ್ರೇನಿಯನ್ (Ukraine) ಸೈನಿಕನ ಬಳಿಗೆ ಬಂದ ವ್ಯಕ್ತಿ ತಮ್ಮ ಮೊಮ್ಮಕ್ಕಳಿಗಾಗಿ ನಾನು ಹೋರಾಡುತ್ತೇನೆ ಎಂದಾಗ ಸೈನಿಕರು ಅರೆಕ್ಷಣ ಶಾಕ್ ಆಗಿದ್ದಾರೆ. 

ಇದನ್ನೂ ಓದಿ: Ukraine-Russia War Updates: ರಷ್ಯಾಗೆ ತಿರುಗೇಟು ನೀಡಲು Ukraine ನೆರವಿಗೆ ಧಾವಿಸಿದ ಜರ್ಮನಿ

ರಷ್ಯಾದ ಆಕ್ರಮಣದ (Russia) ನಡುವೆ ಸೇನೆಗೆ ಸೇರ್ಪಡೆಗೊಳ್ಳಲು ಪ್ರಯತ್ನಿಸುತ್ತಿದ್ದ 80 ವರ್ಷದ ಉಕ್ರೇನಿಯನ್ ವ್ಯಕ್ತಿಯೊಬ್ಬರ ಫೋಟೋ ವೈರಲ್ ಆಗಿದೆ. 

 

 

ಕೈಯಲ್ಲಿ ಬ್ಯಾಗ್‌ನೊಂದಿಗೆ ಉಕ್ರೇನಿಯನ್ ಸೈನಿಕನ ಬಳಿಗೆ ಬಂದ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Photo Viral) ಆಗಿದೆ.

"ಉಕ್ರೇನಿಯನ್ ಸೈನ್ಯಕ್ಕೆ ಸೇರಲು ಕಾಣಿಸಿಕೊಂಡ 80 ವರ್ಷ ವಯಸ್ಸಿನ ವ್ಯಕ್ತಿ, ಎರಡು ಟಿ-ಶರ್ಟ್‌ಗಳು, ಒಂದು ಜೊತೆ ಹೆಚ್ಚುವರಿ ಪ್ಯಾಂಟ್‌ಗಳು, ಟೂತ್ ಬ್ರಷ್ ಮತ್ತು ಊಟಕ್ಕೆ ಕೆಲವು ಸ್ಯಾಂಡ್‌ವಿಚ್‌ಗಳೊಂದಿಗೆ ಸಣ್ಣ ಬ್ಯಾಗ್ ಅನ್ನು ಹೊತ್ತು ಬಂದಿದ್ದಾರೆ. ತಮ್ಮ ಮೊಮ್ಮಕ್ಕಳಿಗಾಗಿ ಸೈನ್ಯಕ್ಕೆ (Ukrainian Army) ಸೇರಲಿದ್ದೇನೆ ಎಂದಿದ್ದಾರೆ" ಎಂದು ತಿಳಿದುಬಂದಿದೆ.

ಇದನ್ನೂ ಓದಿ:Russia Ukraine Crisis: ಯುರೋಪಿಯನ್ ಒಕ್ಕೂಟದಿಂದ ದೊಡ್ಡ ಕ್ರಮ, ಪುಟಿನ್‌ಗೆ ದೊಡ್ಡ ಹೊಡೆತ!

ವ್ಯಾಪಕವಾಗಿ ವೈರಲ್ ಆದ ಫೋಟೋವನ್ನು ಕಟೆರಿನಾ ಯುಶ್ಚೆಂಕೊ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News