ಅಚ್ಚರಿಯಾದರೂ ಸತ್ಯ! ಹೊಟ್ಟೆಯಲ್ಲಿ ಮಗುವಿರುವಾಗಲೇ ಮತ್ತೇ ಗರ್ಭಿಣಿಯಾದ ಮಹಿಳೆ

ಪವಾಡ ಸದೃಶ್ಯ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದೆ. ಇಲ್ಲೋರ್ವ ಮಹಿಳೆ ಹೊಟ್ಟೆಯಲ್ಲಿ ಮಗುವಿರುವಾಗಲೇ ಮತ್ತೇ ಗರ್ಭಿಣಿಯಾಗಿದ್ದಾರೆ.

Written by - Chetana Devarmani | Last Updated : Jun 1, 2022, 01:49 PM IST
  • ಹೊಟ್ಟೆಯಲ್ಲಿ ಮಗುವಿರುವಾಗಲೇ ಮತ್ತೇ ಗರ್ಭಿಣಿಯಾದ ಮಹಿಳೆ
  • ಅಸ್ತಿತ್ವದಲ್ಲಿರುವ ಗರ್ಭಾವಸ್ಥೆಯಲ್ಲಿ ಮತ್ತೊಂದು ಗರ್ಭಧಾರಣೆ
  • ಅದನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ
ಅಚ್ಚರಿಯಾದರೂ ಸತ್ಯ! ಹೊಟ್ಟೆಯಲ್ಲಿ ಮಗುವಿರುವಾಗಲೇ ಮತ್ತೇ ಗರ್ಭಿಣಿಯಾದ ಮಹಿಳೆ  title=
ಗರ್ಭಿಣಿ

ನ್ಯೂಯಾರ್ಕ್‌ (ಯುಎಸ್):‌ ಪವಾಡ ಸದೃಶ್ಯ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದೆ. ಇಲ್ಲೋರ್ವ ಮಹಿಳೆ ಹೊಟ್ಟೆಯಲ್ಲಿ ಮಗುವಿರುವಾಗಲೇ ಮತ್ತೇ ಗರ್ಭಿಣಿಯಾಗಿದ್ದಾರೆ. ಮೆಟ್ರೋ ವರದಿಯ ಪ್ರಕಾರ, 30 ವರ್ಷ ವಯಸ್ಸಿನ ಮಹಿಳೆ ಕಾರಾ ವಿನ್ಹೋಲ್ಡ್ ಗರ್ಭಿಣಿಯಾಗಿದ್ದಳು. ವಿನ್ಹೋಲ್ಡ್ ಈ ಹಿಂದೆ ಮೂರು ಬಾರಿ ಗರ್ಭಪಾತಕ್ಕ ಒಳಗಾಗಿದ್ದರು. ಆದರೆ ಈ ಬಾರಿ ಅವರು ಗರ್ಭಿಣಿಯಾಗಿರುವಾಗಲೇ ಮತ್ತೊಮ್ಮೆ ಗರ್ಭ ಧರಿಸಿರುವುದು ಅಚ್ಚರಿಗೆ ಕಾರಣವಾಗಿದೆ. 

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿಸಿ ಬರುವಾಗ ಭೀಕರ ಅಪಘಾತ: ಸ್ಥಳದಲ್ಲೇ 7 ಮಂದಿ ದುರ್ಮರಣ

ಕಳೆದ ವರ್ಷ ಫೆಬ್ರವರಿಯಲ್ಲಿ ವಿನ್ಹೋಲ್ಡ್ ಗರ್ಭಿಣಿಯಾದಳು. ಆದರೆ ವಿಚಿತ್ರವೆಂದರೆ ಆ ಬಳಿಕ ಒಂದು ತಿಂಗಳ ನಂತರ ಮತ್ತೆ ಗರ್ಭಿಣಿಯಾಗಿದ್ದು. ಈ ವಿಶಿಷ್ಟ ವೈದ್ಯಕೀಯ ಸ್ಥಿತಿಯನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ.

ಸೂಪರ್ಫೆಟೇಶನ್ ಎಂದರೇನು?

ಅಸ್ತಿತ್ವದಲ್ಲಿರುವ ಗರ್ಭಾವಸ್ಥೆಯಲ್ಲಿ ಮತ್ತೊಂದು ಗರ್ಭಾವಸ್ಥೆಯು ಸಂಭವಿಸಿದಾಗ, ಅದನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ. ಹೆಲ್ತ್‌ಲೈನ್‌ನ ಪ್ರಕಾರ ಇದು ಕೇವಲ ಕೆಲ ದಿನಗಳು ಅಥವಾ ವಾರಗಳಲ್ಲಿ ಸಂಭವಿಸಬಹುದು. 

ಅಂತಿಮವಾಗಿ, ಅವರು ಆರು ನಿಮಿಷಗಳ ಅಂತರದಲ್ಲಿ ಜನಿಸಿದ ಎರಡು ಗಂಡು ಮಕ್ಕಳಿಗೆ ವಿನ್ಹೋಲ್ಡ್ ಜನ್ಮ ನೀಡಿದ್ದಾರೆ. ಎರಡು ಬಾರಿ ಅಂಡೋತ್ಪತ್ತಿ ಆದಾಗ, ಎರಡು ಮೊಟ್ಟೆಗಳು ಒಟ್ಟಿಗೆ ಬಿಡುಗಡೆಯಾದಾಗ, ಅವು ವಿಭಿನ್ನ ಸಮಯಗಳಲ್ಲಿ ಫಲವತ್ತಾದರೆ ಈ ರೀತಿಯಾಗುತ್ತದೆ.  

ಇದನ್ನೂ ಓದಿ: IT Raid : ರಾಜ್ಯದ ಉದ್ಯಮಿಗಳಿಗೆ ಐಟಿ ಶಾಕ್! 600 ಅಧಿಕಾರಿಗಳ, 50ಕ್ಕೂ ಹೆಚ್ಚು ಕಡೆ ದಾಳಿ!

ವಿನ್ಹೋಲ್ಡ್ ಮತ್ತು ಅವರ ಪತಿ 2018 ರಲ್ಲಿ ತಮ್ಮ ಮೊದಲ ಮಗುವನ್ನು ಹೊಂದಿದ್ದರು. ದಂಪತಿಗಳು ಕುಟುಂಬವನ್ನು ವಿಸ್ತರಿಸಲು ನಿರ್ಧರಿಸಿದಾಗ, ಅವರು ಮೂರು ಗರ್ಭಪಾತಗಳನ್ನು ಅನುಭವಿಸಿದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News