ಆರಿಸ್: ದಕ್ಷಿಣ ಪ್ರಾಂತ್ಯದ ತುರ್ಕಿಸ್ತಾನ್ನ ಮಿಲಿಟರಿ ಡಿಪೋವೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು 165 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಆರಿಸ್ ನ ದಕ್ಷಿಣ ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, 41,000 ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಫೋಟಕ್ಕೂ ಮುನ್ನ ಮಿಲಿಟರಿ ಘಟಕದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, "ಪ್ರಸ್ತುತ, ಚಿಪ್ಪುಗಳ ಸ್ಫೋಟದಿಂದಾಗಿ ಮಿಲಿಟರಿ ಘಟಕದಲ್ಲಿ (ದಿ) ಬೆಂಕಿಯನ್ನು ನಂದಿಸಲು ಅಸಾಧ್ಯವಾಗಿದ್ದು, 23 ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸುಮಾರು 2, 815 ಜನರನ್ನು ಸ್ಥಳಾಂತರಿಸಲಾಗಿದೆ. 41,000 ಕ್ಕೂ ಹೆಚ್ಚು ಜನರು ಪಟ್ಟಣವನ್ನು ತೊರೆದಿದ್ದಾರೆ" ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸದ್ಯ ತುರ್ಕಿಸ್ತಾನ್ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, 1200 ಕ್ಕೂ ಹೆಚ್ಚು ಸೈನಿಕರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.