ಕೊಲಂಬಿಯಾದಲ್ಲಿ ವಿಮಾನ ಪತನ: 12 ಪ್ರಯಾಣಿಕರು ಸಾವು

ಪತನಗೊಂಡ ವಿಮಾನವನ್ನು ವಿಲ್ಲವಿಕೆನ್ಸಿಯೋ ನಗರದ ವಿಮಾನ ನಿಲ್ದಾಣದಲ್ಲಿ ನೋಂದಣಿಯಾಗಿರುವ ಡೌಗ್ಲಾಸ್ ಡಿಸಿ -3 ಎಂದು ಗುರುತಿಸಲಾಗಿದೆ.

Last Updated : Mar 10, 2019, 10:59 AM IST
ಕೊಲಂಬಿಯಾದಲ್ಲಿ ವಿಮಾನ ಪತನ: 12 ಪ್ರಯಾಣಿಕರು ಸಾವು title=

ಬೊಗೋಟಾ: ಕೊಲಂಬಿಯಾದಲ್ಲಿ ಶನಿವಾರ ಸಂಭವಿಸಿದ ವಿಮಾನ ಪತನದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೊಲಂಬಿಯಾ ಸಿವಿಲ್ ಎರೋನಾಟಿಕ್ಸ್ ನ ವಿಶೇಷ ಆಡಳಿತ ವಿಭಾಗ ತಿಳಿಸಿದೆ. 

ಪತನಗೊಂಡ ವಿಮಾನವನ್ನು ವಿಲ್ಲವಿಕೆನ್ಸಿಯೋ ನಗರದ ವಿಮಾನ ನಿಲ್ದಾಣದಲ್ಲಿ ನೋಂದಣಿಯಾಗಿರುವ ಡೌಗ್ಲಾಸ್ ಡಿಸಿ -3 ಎಂದು ಗುರುತಿಸಲಾಗಿದೆ ಎಂದು ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಸ್ಯಾನ್ ಜೋಸ್ ಡೆಲ್ ಗುವಿಯೆರೆ ಮತ್ತು ವಿಲ್ಲವಿಕೆನ್ಸಿಯೋ ಮಾರ್ಗವಾಗಿ ಚಲಿಸುತ್ತಿದ್ದ ವಿಮಾನ ಪತನವಾಗಿರುವುದಕ್ಕೆ ವಿಷಾದಿಸುತ್ತೇವೆ" ಎಂದು ಏರೋಸಿವಿಲ್ ಏಜೆನ್ಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ. ಘಟನೆ ಬಗ್ಗೆ ಏರೋಸಿವಿಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
 

Trending News