ಅಮೆರಿಕದಲ್ಲಿ ‘ಜನಾಂಗೀಯ ಪ್ರೇರಿತ’ ಗುಂಡಿನ ದಾಳಿಗೆ 10 ಮಂದಿ ಬಲಿ

ಮೊದಲು ಪಾರ್ಕಿಂಗ್‌ ಸ್ಥಳದಲ್ಲಿದ್ದ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ, ಬಳಿಕ ಸೂಪರ್‌ಮಾರ್ಕೆಟ್‌ ಒಳಗೆ ನುಗ್ಗಿ ದಾಳಿ ನಡೆಸಿದ್ದಾನೆ.

Written by - Puttaraj K Alur | Last Updated : May 15, 2022, 09:37 AM IST
  • ಅಮೆರಿಕದ ನ್ಯೂಯಾರ್ಕ್‍ನಲ್ಲಿ ಶಸ್ತ್ರಸಜ್ಜಿತ ಯುವಕನಿಂದ ಮನಬಂದಂತೆ ಗುಂಡಿನ ದಾಳಿ
  • ‘ಜನಾಂಗೀಯ ಪ್ರೇರಿತ’ ಗುಂಡಿನ ದಾಳಿಗೆ ಕನಿಷ್ಠ 10 ಮಂದಿ ಸ್ಥಳದಲ್ಲೇ ಸಾವು
  • ಸುರಕ್ಷಾ ಕವಚ ಹಾಗೂ ಹೆಲ್ಮೆಟ್‌ ಧರಿಸಿ ಹೀನ ಕೃತ್ಯವೆಸಗಿದ ಆರೋಪಿಯ ಬಂಧನ
ಅಮೆರಿಕದಲ್ಲಿ ‘ಜನಾಂಗೀಯ ಪ್ರೇರಿತ’ ಗುಂಡಿನ ದಾಳಿಗೆ 10 ಮಂದಿ ಬಲಿ title=
ಯುವಕನಿಂದ ಮನಬಂದಂತೆ ಗುಂಡಿನ ದಾಳಿ

 New York Firing: ಅಮೆರಿಕದ ನ್ಯೂಯಾರ್ಕ್‍ನಲ್ಲಿ ದಾಳಿಕೋರನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಶಸ್ತ್ರಸಜ್ಜಿತ ಯುವಕನೊಬ್ಬ ಬಫಲೋ ನಗರದ ಸೂಪರ್‌ಮಾರ್ಕೆಟ್‌ನಲ್ಲಿ ‘ಜನಾಂಗೀಯ ಪ್ರೇರಿತ’ ಗುಂಡಿನ ದಾಳಿ ನಡೆಸಿದ್ದಾನೆ. ಒಟ್ಟು 13 ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ಪೈಕಿ 11 ಮಂದಿ(ಕಪ್ಪು) ಆಫ್ರಿಕನ್ ಅಮೆರಿಕನ್ನರಿದ್ದರು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರನನ್ನು ಬಫಲೋದಿಂದ ಆಗ್ನೇಯಕ್ಕೆ 320 ಕಿ.ಮೀ ದೂರದಲ್ಲಿರುವ ನ್ಯೂಯಾರ್ಕ್‌ನ ಕಾಂಕ್ಲಿನ್‌ನ ನಿವಾಸಿ ಪ್ಯಾಟನ್ ಜೆಂಡ್ರಾನ್ ಎಂದು ಗುರುತಿಸಲಾಗಿದೆ. ಸುರಕ್ಷಾ ಕವಚ ಹಾಗೂ ಹೆಲ್ಮೆಟ್‌ ಧರಿಸಿ ಹೀನ ಕೃತ್ಯವೆಸಗಿದ ಆತನನ್ನು ಬಂಧಿಸಲಾಗಿದೆ ಎಂದು ಬಫಲೋ ಪೊಲೀಸ್‌ ಕಮಿಷನರ್‌ ಜೋಸೆಫ್‌ ಗ್ರಾಮಗ್ಲಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ವೇದಿಕೆಯಲ್ಲಿಯೇ ಸ್ಪರ್ಧಿಯ ಗಿಟಾರ್‌ ಒಡೆದುಹಾಕಿದ ಜಡ್ಜ್‌!

ತನ್ನ ದಾಳಿಯ ಕೃತ್ಯವನ್ನು ದುಷ್ಕರ್ಮಿ ಕ್ಯಾಮರಾದಲ್ಲಿ ಲೈವ್‌ ಸ್ಟ್ರೀಮ್‌ ಮಾಡಿದ್ದಾನೆ. ಮೊದಲು ಪಾರ್ಕಿಂಗ್‌ ಸ್ಥಳದಲ್ಲಿದ್ದ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ, ಬಳಿಕ ಸೂಪರ್‌ಮಾರ್ಕೆಟ್‌ ಒಳಗೆ ನುಗ್ಗಿ ದಾಳಿ ನಡೆಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದ ಬಳಿಕ, ದಾಳಿಕೋರ ತನ್ನ ಕುತ್ತಿಗೆ ಬಳಿಗೆ ಗನ್‌ ಹಿಡಿದುಕೊಂಡು ಶರಣಾಗಿದ್ದಾನೆ. ಘಟನೆಯಲ್ಲಿಮೃತಪಟ್ಟವರ ಪೈಕಿ ಒಬ್ಬರು ನಿವೃತ್ತ ಪೊಲೀಸ್‌ ಅಧಿಕಾರಿಯಾಗಿದ್ದು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಸಾವನ್ನಪ್ಪುವ ಮುನ್ನ ದಾಳಿಕೋರನ ಮೇಲೆ ಹಲವು ಸುತ್ತಿನ ಪ್ರತಿದಾಳಿ ನಡೆಸಿದ್ದರು ಎಂದು ಗ್ರಾಮಗ್ಲಿಯಾ ಮಾಹಿತಿ ನೀಡಿದ್ದಾರೆ.

‘ದ್ವೇಷ ಅಪರಾಧ’ ಮತ್ತು ‘ಜನಾಂಗೀಯ ಪ್ರೇರಿತ ಉಗ್ರ ಕೃತ್ಯ’ವೆಂದು ಪರಿಗಣಿಸಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಬಫಲೋದಲ್ಲಿರುವ ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ಕಚೇರಿ ಉಸ್ತುವಾರಿ ಅಧಿಕಾರಿ ಸ್ಟೀಫನ್‌ ಬೆಲೊಂಗಿಯಾ ಹೇಳಿದ್ದಾರೆ. ಆರೋಪಿಯು ಮುಗ್ಧ ಸಮುದಾಯದ ವಿರುದ್ಧ ದ್ವೇಷದ ಅಪರಾಧ ಎಸಗಿದ ಬಿಳಿಯ ಪ್ರಾಬಲ್ಯವಾದಿ. ಹೀನ ಕೃತ್ಯಕ್ಕಾಗಿ ಆತ ತನ್ನ ಉಳಿದ ಜೀವನವನ್ನು ಕಂಬಿಗಳ ಹಿಂದೆ ಕಳೆಯಲಿದ್ದಾನೆ ಎಂದು ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ.

ಇದನ್ನೂ ಓದಿ: Viral Video: ಸ್ಕೂಟರ್ ಮೇಲೆ ಕುಳಿತ್ತಿದ್ದ ವ್ಯಕ್ತಿಗೆ ಏಕಾಏಕಿ ಅಟ್ಕಾಯಿಸಿಕೊಂಡ ಆತ್ಮ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News