Viral Video: ಪ್ರತಿದಿನವೂ ಬ್ಯಾಟ್​ನಿಂದ ಪತ್ನಿಯ ಹಲ್ಲೆ, ಕೋರ್ಟ್ ಮೆಟ್ಟಿಲೇರಿದ ಹೆಡ್​ಮಾಸ್ಟರ್!

ಆಸ್ತಿಗಾಗಿ ತನ್ನ ಹೆಂಡತಿ ತನ್ನನ್ನು ಪ್ರತಿನಿತ್ಯವೂ ಹಿಂಸಿಸುತ್ತಿದ್ದಾಳೆ. ಆಕೆಯಿಂದ ನನಗೆ ಭದ್ರತೆ ನೀಡಬೇಕೆಂದು ಹೆಡ್‍ಮಾಸ್ಟರ್ ಒಬ್ಬರು ಫ್ಯಾಮಿಲಿ ಕೋರ್ಟ್‍ಗೆ ಸಿಸಿಟಿವಿ ದೃಶ್ಯಾವಳಿ ಸಮೇತ ದೂರು ನೀಡಿದ್ದಾರೆ.

Written by - Puttaraj K Alur | Last Updated : May 25, 2022, 06:52 PM IST
  • ಪತ್ನಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ
  • ಸಿಸಿಟಿವಿ ದೃಶ್ಯಾವಳಿ ಸಮೇತ ಕೌಟುಂಬಿಕ ನ್ಯಾಯಾಲಯಕ್ಕೆ ಹೆಡ್‍ಮಾಸ್ಟರ್ ದೂರು
  • ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ಹೆಂಡತಿಯಿಂದ ಗಂಡನಿಗೆ ಬ್ಯಾಟ್‍ನಿಂದ ಹಲ್ಲೆ
Viral Video: ಪ್ರತಿದಿನವೂ ಬ್ಯಾಟ್​ನಿಂದ ಪತ್ನಿಯ ಹಲ್ಲೆ, ಕೋರ್ಟ್ ಮೆಟ್ಟಿಲೇರಿದ ಹೆಡ್​ಮಾಸ್ಟರ್! title=
ಹೆಂಡತಿಯಿಂದ ಗಂಡನಿಗೆ ಬ್ಯಾಟ್‍ನಿಂದ ಹಲ್ಲೆ

ಜೈಪುರ: ಕೌಟುಂಬಿಕ ಹಿಂಸಾಚಾರದ ವಿಚಿತ್ರ ಪ್ರಕರಣದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಾಲಾ ಪ್ರಾಂಶುಪಾಲರೊಬ್ಬರು ತಮ್ಮ ಪತ್ನಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪ್ರತಿನಿತ್ಯವೂ ಹೆಂಡತಿ ನನ್ನನ್ನು ಹೊಡೆಯುತ್ತಾಳೆ. ಆಕೆಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ನಾನು ಬೇಸತ್ತು ಹೋಗಿದ್ದೇನೆ. ಹೀಗಾಗಿ ನನಗೆ ಭದ್ರತೆ ನೀಡಬೇಕೆಂದು ಕೋರಿ ಸಿಸಿಟಿವಿ ದೃಶ್ಯಾವಳಿಯ ಸಮೇತ ಸರ್ಕಾರಿ ಶಾಲೆಯ ಹೆಡ್‍ಮಾಸ್ಟರ್ ಅಜಿತ್ ಸಿಂಗ್ ಎಂಬುವರು ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.  

ಇದನ್ನೂ ಓದಿ: Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!

ಸೋನೆಪತ್​ನ ಸುಮನ್​ ಎಂಬುವರ ಜೊತೆಗೆ 9 ವರ್ಷಗಳ ಹಿಂದೆ ಹೆಡ್​ಮಾಸ್ಟರ್​ ಅಜಿತ್​ ಸಿಂಗ್​ ಮದುವೆಯಾಗಿದೆ. ಈ ದಂಪತಿಗೆ 9 ವರ್ಷದ ಒಂದು ಗಂಡು ಮಗುವಿದದೆ. ಆರಂಭದಲ್ಲಿ ಚೆನ್ನಾಗಿದ್ದ ಪತ್ನಿ ಕಳೆದ 1 ವರ್ಷದಿಂದ ಪ್ರತಿದಿನವೂ ಹೊಡೆದು ಹಿಂಸಿಸುತ್ತಿದ್ದಾಳೆ. ಹೆಂಡತಿಯ ಕಿರುಕುಳದಿಂದ ನನಗೆ ಸಾಕಾಗಿ ಹೋಗಿದೆ. ಸಮಾಜಕ್ಕೆ ಅಂಜಿ ನಾನು ಇದುವರೆಗೆ ಸುಮ್ಮನಿದ್ದೆ. ‘ಗಂಡ-ಹೆಂಡತಿ ಜಗಳಲದ್ಲಿ ಕೂಸು ಬಡವಾಯ್ತು’ ಅನ್ನೋ ರೀತಿ ನನ್ನ ಮಗನ ಜೀವನ ಹಾಳಾಗಬಾರದು ಎಂದು ನಾನು ಯಾರಿಗೂ ಹೇಳಿರಲಿಲ್ಲ. ಆದರೆ ಹೆಂಡತಿಯ ಕಾಟ ಹೆಚ್ಚಾಗುತ್ತಿದ್ದಂತೆಯೇ ನನಗೆ ಜೀವನ ನಡೆಸಲು ಕಷ್ಟವಾಗಿದೆ. ಕಳೆದೊಂದು ತಿಂಗಳಿನಿಂದ ನಾನು ಮನೆಗೇ ಹೋಗಿಲ್ಲ. ಅಜ್ಞಾತವಾಗಿಯೇ ಜೀವನ ಸಾಗಿಸುತ್ತಿದ್ದೇನೆಂದು ಅಜಿತ್​ ಸಿಂಗ್​ ಅಳಲು ತೋಡಿಕೊಂಡಿದ್ದಾರೆ.

ತನ್ನ ಹೆಂಡತಿ ಬ್ಯಾಟ್‍ನಿಂದ ಹಲ್ಲೆ ನಡೆಸುತ್ತಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಅಜಿತ್ ಸಿಂಗ್ ಕೋರ್ಟ್‍ಗೆ ನೀಡಿದ್ದಾರೆ. ಕೈಯಲ್ಲಿ ಬ್ಯಾಟ್ ಹಿಡದುಕೊಂಡ ಮಹಿಳೆ ಅಟ್ಟಾಡಿಸಿಕೊಂಡು ಬಂದು ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹೊಡೆಯಬೇಡವೆಂದು ಪರಿಪರಿಯಾಗಿ ಬೇಡಿಕೊಂಡರೂ ಸಹ ಬಿಡದ ಆ ಮಹಿಳೆ ಮನಬಂದಂತೆ ಗಂಡನನ್ನು ಥಳಿಸಿದ್ದಾಳೆ.

ಇದನ್ನೂ ಓದಿ: ʼWife For Saleʼ ಎಂದು ಜಾಹೀರಾತು ನೀಡಿದ ಪತಿ: ಟೂರ್‌ಗೆ ಹೋಗಿದ್ದ ಪತ್ನಿಗೆ ಶಾಕ್‌!

ಗಂಡನ ಹೆಸರಿನಲ್ಲಿರು ವ ಫ್ಲ್ಯಾಟ್​ಗಾಗಿ ಹೆಂಡತಿ ಈ ರೀತಿ ದೈಹಿಕ ಮತ್ತು ಮಾನಸಿಕ ಹಿಂದೆ ನೀಡುತ್ತಿದ್ದಾಳೆಂಬುದು ತಿಳಿದುಬಂದಿದೆ. ನನ್ನ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಡು ಎಂದು ಹೆಂಡತಿ ದಿನವೂ ಜಗಳವಾಡುತ್ತಾಳೆ. ಅಮೆರಿಕದಲ್ಲಿರುವ ಆತನ ಅಣ್ಣನ ಬೆಂಬಲದಿಂದ ನನ್ನ ಮೇಲೆ ದಿನವೂ ಹಲ್ಲೆ ನಡೆಸುತ್ತಾಳೆ ಎಂದು ಪತಿ ಅಜಿತ್ ಸಿಂಗ್ ಹೇಳಿಕೊಂಡಿದ್ದಾರೆ. ಸದ್ಯ ದೂರು ನೀಡಿರುವ ಶಿಕ್ಷಕರಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News