Monkey Video : ಕೋತಿ ಕೈಗೆ ಶುಂಠಿ ಕೊಟ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ!

Monkey Video : ಕೋತಿ ಕೈಗೆ ಏನೇ ಕೊಟ್ಟರು ಅದು ಮೊದಲು ಪರೀಕ್ಷಿಸುತ್ತದೆ. ಆದರೆ ಮಂಗವೊಂದು ಶುಂಠಿಯ ಸವಿಯನ್ನು ಸವಿಯುವ ದೃಶ್ಯವನ್ನು ಯಾರೂ ನೋಡಿರಲಿಲ್ಲ. ಇದೀಗ ಕೋತಿ ಕೈಗೆ ಶುಂಠಿ ಸಿಕ್ಕರೆ, ಅದು ಏನು ಮಾಡಬಹುದು? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

Written by - Chetana Devarmani | Last Updated : Nov 28, 2022, 07:02 PM IST
  • ಕೋತಿ ಕೈಗೆ ಶುಂಠಿ ಕೊಟ್ರೆ ಏನಾಗುತ್ತೆ?
  • ಈ ವಿಡಿಯೋ ನೋಡಿ ಗೊತ್ತಾಗುತ್ತೆ!
  • ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್
Monkey Video : ಕೋತಿ ಕೈಗೆ ಶುಂಠಿ ಕೊಟ್ರೆ ಏನಾಗುತ್ತೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ! title=
ಕೋತಿ

Monkey Video : ಕೋತಿ ಕೈಗೆ ಏನೇ ಕೊಟ್ಟರು ಅದು ಮೊದಲು ಪರೀಕ್ಷಿಸುತ್ತದೆ. ಆದರೆ ಮಂಗವೊಂದು ಶುಂಠಿಯ ಸವಿಯನ್ನು ಸವಿಯುವ ದೃಶ್ಯವನ್ನು ಯಾರೂ ನೋಡಿರಲಿಲ್ಲ. ಇದೀಗ ಕೋತಿ ಕೈಗೆ ಶುಂಠಿ ಸಿಕ್ಕರೆ, ಅದು ಏನು ಮಾಡಬಹುದು? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೋತಿಗೆ ತಿನ್ನಲು ಶುಂಠಿ ಕೊಡುವುದನ್ನು ಇದರಲ್ಲಿ ಕಾಣಬಹುದು. ಆದರೆ ರುಚಿ ನೋಡಿದ ತಕ್ಷಣ ಕೋತಿ ಈ ಶುಂಠಿಯನ್ನು ಏನು ಮಾಡುತ್ತದೆ ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ.

ಇದನ್ನೂ ಓದಿ : ಹೈ BP ನಿಯಂತ್ರಿಸಲು ಸಹಾಯಕ ಏಲಕ್ಕಿ : ಹೇಗೆ? ಇಲ್ಲಿದೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಂಗಗಳ ಬಳಿ ಹೋಗುತ್ತಿರುವುದನ್ನು ಕಾಣಬಹುದು. ಎಲ್ಲ ಮಂಗಗಳಿಗೆ ಶುಂಠಿಯ ತುಂಡನ್ನು ನೀಡುತ್ತಾರೆ. ಎರಡು ಕೋತಿಗಳು ಅದರಲ್ಲಿ ಆಸಕ್ತಿ ತೋರಿಸಲಿಲ್ಲ ಆದರೆ ಒಂದು ಶುಂಠಿಯನ್ನು ತೆಗೆದುಕೊಂಡಿತು. ಆದರೆ ರುಚಿ ನೋಡಿದ ತಕ್ಷಣ ಅದನ್ನು ನೆಲಕ್ಕೆ ಎಸೆಯಿತು. ಕೆಲವೇ ಸೆಕೆಂಡುಗಳ ಈ ವಿಡಿಯೋ ವೈರಲ್ ಆಗುತ್ತಿದೆ.

 

 

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಶುಂಠಿಯ ರುಚಿ ಮಂಗಗಳಿಗೆ ಗೊತ್ತು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಬಹುಶಃ ನೆಲದಲ್ಲಿ ಬೆಳೆಯುವುದರಿಂದ ಮಂಗಗಳಿಗೆ ಅದರ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಅವು ಮರಗಳಲ್ಲಿ ಬೆಳೆದ ಹಣ್ಣುಗಳು ಮತ್ತು ಭೂಮಿಯ ಮೇಲೆ ಬೆಳೆದ ತರಕಾರಿಗಳನ್ನು ಮಾತ್ರ ತಿನ್ನುತ್ತವೆ. 

ಇದನ್ನೂ ಓದಿ :  Vande Bharat Expressನಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News