Viral Video: ಸಪ್ತಋಷಿ ಥೀಮ್ ಆಧರಿಸಿ ನಿರ್ಮಾಣಗೊಂಡ ಪಾರ್ಕ್ ನಲ್ಲಿ ಯುವ ಜೋಡಿಯ ಅಶ್ಲೀಲ ಕೃತ್ಯ!

Noida Park Viral Video: ನೋಯ್ಡಾದ ಸುಪ್ರಸಿದ್ಧ ವೇದ್ ಒನ್ ಪಾರ್ಕ್‌ ನಿಂದ ಯುವ ಜೋಡಿಯ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದ ಜನರು ತುಂಬಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರೂ ಪರಸ್ಪರ ಬಾಯಿ ಮುಕ್ಕಳಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬರುತ್ತಿದೆ. ದೆಹಲಿ ಮೆಟ್ರೋ ಮತ್ತು ಕನ್ನಾಟ್ ಪ್ಲೇಸ್‌ನಲ್ಲಿ ಸಾರ್ವಜನಿಕವಾಗಿ ಇಂತಹ ಹೇಯ ಕೃತ್ಯಗಳನ್ನು ನಡೆಸಿದ್ದು ಇದೇ ಜೋಡಿ ಎನ್ನಲಾಗುತ್ತಿದೆ.(Viral News In Kannada)

Written by - Nitin Tabib | Last Updated : Nov 2, 2023, 07:09 PM IST
  • @TheSquind ಹ್ಯಾಂಡಲ್‌ನೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
  • ಆದರೆ ಇನ್‌ಸ್ಟಾ ರೀಲರ್‌ಗಳು ಈ ಸ್ಥಳವನ್ನು ಅಶ್ಲೀಲತೆಯ ತಾಣವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.
  • ಇದರೊಂದಿಗೆ ಬಳಕೆದಾರರು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಪಾರ್ಕ್‌ನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ.
Viral Video: ಸಪ್ತಋಷಿ ಥೀಮ್ ಆಧರಿಸಿ ನಿರ್ಮಾಣಗೊಂಡ ಪಾರ್ಕ್ ನಲ್ಲಿ ಯುವ ಜೋಡಿಯ ಅಶ್ಲೀಲ ಕೃತ್ಯ!  title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಲು, ಜನರು ಹೇಯ ಕೃತ್ಯಗಳನ್ನು ಮಾಡಲು ಹಿಂಜರಿಯುತ್ತಿಲ್ಲ. ದೆಹಲಿ ಮೆಟ್ರೋ ನಂತರ, ಇದೀಗ ನೋಯ್ಡಾದ ಖ್ಯಾತ ವೇದ್ ಒನ್ ಪಾರ್ಕ್‌ನಲ್ಲಿ ಯುವಜೋಡಿ  ಸಾರ್ವಜನಿಕವಾಗಿ ಇಂತಹದ್ದೊಂದು ಕೆಲಸ ಮಾಡಿದ್ದು, ಸಾರ್ವಜನಿಕರ ಪಿತ್ತ ನೆತ್ತಿಗರಿದೆ. ಜನರು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿ ಈ ದಂಪತಿ ಜೋಡಿಯನ್ನು ಬಂಧಿಸುವಂತೆ ಒತ್ತಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಕೋಪಕ್ಕೆ ಕಾರಣವಾದ ಈ ಜೋಡಿ ಏನು ಮಾಡಿದೆ ಎಂಬುದನ್ನು ನೋಡಿ ನೀವು ಆಶ್ಚರ್ಯಪಡುವಿರಿ. (Viral News In Kannada)

ಇತ್ತೀಚೆಗೆ, ದೆಹಲಿ ಮೆಟ್ರೋದ ದಂಪತಿಗಳ ವೀಡಿಯೊ ವೈರಲ್ ಆಗಿತ್ತು, ಇದರಲ್ಲಿ ಇಬ್ಬರೂ ಪರಸ್ಪರ ಬಾಯಿ ಮುಕ್ಕಳಿಸುತ್ತಿರುವುದು ಕಂಡುಬಂದಿತ್ತು. ಈ ವೀಡಿಯೋಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ಇದೀಗ ಈ ಜೋಡಿ ನೋಯ್ಡಾ ಸೆಕ್ಟರ್ 78ರಲ್ಲಿರುವ 'ವೇದ್ ಒನ್' ಪಾರ್ಕ್‌ನಲ್ಲಿ ಇಂತಹದ್ದೇ ಹೇಯ ಕೃತ್ಯ ಎಸಗಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವೇದ್ ಫಾರೆಸ್ಟ್ ಪಾರ್ಕ್‌ನಲ್ಲಿ ದಂಪತಿಗಳು ವಿಚಿತ್ರ ರೀತಿಯಲ್ಲಿ ಪ್ರೇಮ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು. ಹುಡುಗನು ಮೊದಲು ಹುಡುಗಿಗೆ ಉಂಗುರವನ್ನು ಧರಿಸುತ್ತಾನೆ. ಇದಾದ ನಂತರ ಇಬ್ಬರೂ ಪರಸ್ಪರ ಬಾಯಲ್ಲಿ ಬಾಯಿ ಮುಕ್ಕಳಿಸತೊಡಗುತ್ತಾರೆ. ದಂಪತಿಯ ಈ ಕೃತ್ಯ ಕಂಡು ಕೋಪಗೊಂಡ ಜನರು ಇದೀಗ ನೋಯ್ಡಾ ಪೊಲೀಸರಿಂದ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ-ಸ್ಪೀಡ್ ಬ್ರೆಕರ್ ಮೇಲೆ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ಇ-ರಿಕ್ಷಾ... ವಿಡಿಯೋ ನೋಡಿ!

ದಂಪತಿ ವೀಡಿಯೊವನ್ನು ಇಲ್ಲಿ ವೀಕ್ಷಿಸಿ

@TheSquind ಹ್ಯಾಂಡಲ್‌ನೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಆದರೆ ಇನ್‌ಸ್ಟಾ ರೀಲರ್‌ಗಳು ಈ ಸ್ಥಳವನ್ನು ಅಶ್ಲೀಲತೆಯ ತಾಣವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಇದರೊಂದಿಗೆ ಬಳಕೆದಾರರು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಪಾರ್ಕ್‌ನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸೈಬರ್ ಸೆಲ್ ಸಹಾಯದಿಂದ ದಂಪತಿಯನ್ನು ಗುರುತಿಸಲಾಗುತ್ತಿದೆ ಎಂದು ನೋಯ್ಡಾ ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ-Viral Video: ಯಾವುದೇ ಸುರಕ್ಷತೆ ಇಲ್ಲದೆ ಟ್ರಾನ್ಸ್ಫಾರ್ಮರ್ ಗೆ ತಂತಿ ಜೋಡಿಸಿದ ಹುಡುಗ, ನೋಡಿ ದಂಗಾದ ನೆಟ್ಟಿಗರು!

ಅರೆಸ್ಟ್ ಮಾಡಿ ಎಂದ ಜನರು
ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇದೇ ವೇಳೆ, ಮತ್ತೊಬ್ಬ ಬಳಕೆದಾರರು ಇವರನ್ನು ಬಂಧಿಸದ ಹೊರತು ಈ ರೀತಿಯ ಹೀನ ಕೃತ್ಯ ಎಸಗುವುದನ್ನು ಇವರು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಉಂಗುರವನ್ನು ಧರಿಸಿದ ನಂತರ ಬಾಯಿಯನ್ನು ತೊಳೆಯುವ ಪದ್ಧತಿಯನ್ನು ಮೊದಲ ಬಾರಿಗೆ ನೋಡಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News