Viral Video: ಕೊರಳಲ್ಲಿ ಬೆಲ್ಟ್ ಕಟ್ಟಿ ನಾಯಿಯಂತೆ ಈ ಮಹಿಳೆ ಯಾರನ್ನು ಸುತ್ತಾಡಿಸುತ್ತಿದ್ದಾಳೆ ನೀವೇ ನೋಡಿ!

Viral Video: ಮಹಿಳೆಯೊಬ್ಬಳು ಬಾಲಕಿಯ ಕೊರಳಿಗೆ  ಬೆಲ್ಟ್ ಕಟ್ಟಿ ರಸ್ತೆಯಲ್ಲಿ ಸುತ್ತಾಡಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವೀಡಿಯೋಗೆ ತರಹೇವಾರಿ ಕಾಮೆಂಟ್‌ಗಳನ್ನು ಮಾಡುವ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. (Viral News In Kannada)  

Written by - Nitin Tabib | Last Updated : Feb 16, 2024, 09:45 PM IST
  • ವೀಡಿಯೊವನ್ನು ಹಂಚಿಕೊಂಡು, 'ಮುಂಬೈಗೆ ಏನಾಗಿದೆ? ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆಗಾಗಿ
  • ಜನರು ಈ ಮಟ್ಟಕ್ಕೆ ಹೇಗೆ ಇಳಿಯುತ್ತಾರೆ?' ಎಂದು ಪ್ರಶ್ನಿಸಿ ಪೋಸ್ಟ್‌ ಅನ್ನು ಮುಂಬೈ ಪೊಲೀಸ್ ಗೆ ಟ್ಯಾಗ್ ಮಾಡಿ,
  • 'ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಕ್ಕೆ ಅವಕಾಶವಿದೆಯೇ' ಎಂದು ಪ್ರಶ್ನಿಸಲಾಗಿದೆ.
Viral Video: ಕೊರಳಲ್ಲಿ ಬೆಲ್ಟ್ ಕಟ್ಟಿ ನಾಯಿಯಂತೆ ಈ ಮಹಿಳೆ ಯಾರನ್ನು ಸುತ್ತಾಡಿಸುತ್ತಿದ್ದಾಳೆ ನೀವೇ ನೋಡಿ! title=

Viral Video: ರಸ್ತೆಯಲ್ಲಿ ನಡೆಯುವಾಗ ಜಗಳವಾಡುವುದನ್ನು ಅಥವಾ ಇನ್ನೇನೋ ಆಗುವುದನ್ನು ನೀವು ಆಗಾಗ್ಗೆ ನೋಡಿರಬಹುದು, ಆದರೆ ಒಬ್ಬ ವ್ಯಕ್ತಿ ತನ್ನ ಕುತ್ತಿಗೆಗೆ ಬೆಲ್ಟ್ ಹಾಕಿಸಿಕೊಂಡು ರಸ್ತೆಯಲ್ಲಿ ನಾಯಿಯಂತೆ ಸುತ್ತಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ?  ಇತ್ತೀಚಿಗೆ ಅಂತಹದ್ದೊಂದು ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಈ ವಿಚಿತ್ರ ದೃಶ್ಯವನ್ನು ನೋಡಿದ ಜನ ರೊಚ್ಚಿಗೆದ್ದು ವಿಡಿಯೋಗೆ ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (Viral News In Kannada)

ಇದನ್ನೂ ಓದಿ-Viral Video: ಟ್ರಾಫಿಕ್ ಜಾಮ್ ಇರುವ ಕಾರಣ ನಡುರಸ್ತೆಯಲ್ಲಿಯೇ ಎಂಥಾ ಕೆಲಸಾ ಮಾಡಿದ್ದಾನೆ ನೋಡಿ ಈ ಭೂಪ!

ಬಾಲಕಿಯ ಕುತ್ತಿಗೆಗೆ ಬೆಲ್ಟ್ ಕಟ್ಟಿ ರಸ್ತೆಗಿಳಿದಿದ್ದಾಳೆ ಮಹಿಳೆ
ವೈರಲ್ ಆಗುತ್ತಿರುವ ಈ ಆಘಾತಕಾರಿ ವಿಡಿಯೋ ಮುಂಬೈನದ್ದು ಎನ್ನಲಾಗಿದೆ. ಮಹಿಳೆಯೊಬ್ಬರು ಬಾಲಕಿಯ ಕೊರಳಿಗೆ ಬೆಲ್ಟ್ ಕಟ್ಟಿ ರಸ್ತೆಯಲ್ಲಿ ಓಡಾಡುವಂತೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಾಣಿಯಂತೆ ಮೊಣಕಾಲು ಮತ್ತು ಕೈಯಲ್ಲಿ ರಸ್ತೆಯಲ್ಲಿ ನಡೆಯುವ ಹುಡುಗಿ ಕಪ್ಪು ಬಟ್ಟೆ ಹಾರಿಸಿದ್ದಾಳೆ. ವಿಡಿಯೋದಲ್ಲಿ ಬಾಲಕಿ ಪ್ರಾಣಿಯಂತೆ ವರ್ತಿಸುತ್ತಿರುವುದು ಕೂಡಾ ಕಂಡು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆಗಾಗಿ ಇದನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-Viral Video: ಸ್ಟೇಡಿಯಂ ನಲ್ಲಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ಪ್ರೇಮಿ, ಮುಂದೇನಾಯ್ತು ನೀವೇ ನೋಡಿ!

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ @mathrunner7 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಂಚಿಕೊಂಡು, 'ಮುಂಬೈಗೆ ಏನಾಗಿದೆ? ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆಗಾಗಿ ಜನರು ಈ ಮಟ್ಟಕ್ಕೆ ಹೇಗೆ ಇಳಿಯುತ್ತಾರೆ?' ಎಂದು ಪ್ರಶ್ನಿಸಿ ಪೋಸ್ಟ್‌ ಅನ್ನು ಮುಂಬೈ ಪೊಲೀಸ್ ಗೆ  ಟ್ಯಾಗ್ ಮಾಡಿ, 'ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಕ್ಕೆ ಅವಕಾಶವಿದೆಯೇ' ಎಂದು ಪ್ರಶ್ನಿಸಲಾಗಿದೆ. ಕೇವಲ 26 ಸೆಕೆಂಡ್‌ಗಳ ಈ ವಿಡಿಯೋ ಇದುವರೆಗೆ 12 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಬಳಕೆದಾರರು ವೀಡಿಯೊಗೆ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಈ ರೋಗ ಈಗ ಭಾರತಕ್ಕೂ ಬಂದಿದೆ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಈಗ Instagram ಅನ್ನು ಮುಚ್ಚುವ ಸಮಯ ಬಂದಿದೆ. ಈ ಜನರು ಇನ್‌ಸ್ಟಾವನ್ನು ಟಿಕ್‌ಟಾಕ್‌ನಂತೆ ಪರಿಗಣಿಸುಟ್ಟಿದ್ದಾರೆ' ಎಂದಿದ್ದಾರೆ. 

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News