ನವದೆಹಲಿ: ದೆಹಲಿ ಮೆಟ್ರೋ ಈಗ ಹೊಸ ಯುದ್ಧಭೂಮಿಯಾಗುತ್ತಿದೆ. ಪ್ರತಿದಿನ, ಮೆಟ್ರೋ ಒಳಗೆ ಹೊಡೆದಾಟಗಳ ವೀಡಿಯೊಗಳು ಹೊರಹೊಮ್ಮುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿಯೂ ಜನರು ಪರಸ್ಪರ ಗುದ್ದಾಡಿ ಮತ್ತು ಕಪಾಳಮೋಕ್ಷ ಮಾಡುವುದನ್ನು ನೀವು ನೋಡಬಹುದು. ವಿಡಿಯೋ ಹೊರಬೀಳುತ್ತಲೇ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಮೆಟ್ರೋದಲ್ಲಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗೆ ಜನರು ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. (Viral News In Kannada)
ಇದನ್ನೂ ಓದಿ-ಸ್ಕೂಟರ್ ಮೇಲೆ ಯುವತಿಯ ಈ ಸ್ಟಂಟ್ ನೋಡಿ ನೆಟ್ಟಿಗರು ಎನನ್ನುತ್ತಿದ್ದಾರೆ ಗೊತ್ತಾ?
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಇಬ್ಬರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಇದೇ ವೇಳೆ ಸುತ್ತಮುತ್ತಲಿನ ಜನರು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಬ್ಬರ ನಡುವಿನ ಜಗಳ ನಿಲ್ಲುವ ಮಾತೆ ಎತ್ತುತ್ತಿಲ್ಲ. ದೆಹಲಿ ಮೆಟ್ರೋದೊಳಗಿನ ಈ ವಿಡಿಯೋ ಶಾಕಿಂಗ್ ಆಗಿದೆ. @gharkekalesh ಎಂಬ ಬಳಕೆದಾರರಿಂದ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದನ್ನು ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದೇ ವೇಳೆ ವಿಡಿಯೋಗೆ ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.
ಇದನ್ನೂ ಓದಿ-ಕೇವಲ 43 ಎಸೆತಗಳಲ್ಲಿ 193 ರನ್... ಬರಿ 4,6,6,4,6,6,4,6 ಗಳೇ... ಆಟಗಾರ ಯಾರು ತಿಳಿಯಲು ವಿಡಿಯೋ ನೋಡಿ
ಜನರ ಪ್ರತಿಕ್ರಿಯೆ ಇಲ್ಲಿದೆ
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರೆ, 'ಈಗ ದೆಹಲಿ ಮೆಟ್ರೋದಲ್ಲಿ ಇದೆಲ್ಲ ಸಾಮಾನ್ಯವಾಗಿದೆ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಅವರು ಅನಿಮಲ್ ಚಿತ್ರ ನೋಡಿ ಬಂದಿರುವಂತೆ ತೋರುತ್ತಿದೆ' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಮೂರನೇ ಬಳಕೆದಾರರು, 'ಇಲ್ಲಿ ಜನರಿಗೆ ಉಚಿತವಾಗಿ ಹೊಡೆದಾಟ ನೋಡಲು ಸಿಗುತ್ತಿದೆ' ಎಂದು ಬರೆದಿದ್ದಾರೆ.
ವೈರಲ್ ಆಗುತ್ತಿರುವ ವೀಡಿಯೋ ಇಲ್ಲಿದೆ...
Kalesh b/w Two man inside Delhi metro over Push and Shove for seat
pic.twitter.com/Ih4x5TSRMY— Ghar Ke Kalesh (@gharkekalesh) December 4, 2023
ಇದನ್ನೂ ನೋಡಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ