ನವದೆಹಲಿ: ಯಾರಾದರೂ ಇಹಲೋಕ ತ್ಯಜಿಸಿದಾಗ ಅವರನ್ನು ಪ್ರೀತಿಸುವವರಿಗೂ ಈ ಜಗತ್ತು ನಿಷ್ಪ್ರಯೋಜಕವಾಗಿ ಕಾಣುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ-ಪಕ್ಷಿಗಳಿಗೂ ಅನ್ವಯಿಸುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ಗ್ಯಾರಂಟಿ ನೀರು ಬರುತ್ತದೆ. ಈ ವಿಡಿಯೋದಲ್ಲಿ ಹಕ್ಕಿಯೊಂದು ಸಾವನ್ನಪ್ಪಿದ್ದು, ಅದರ ಸಂಗಾತಿ ಅದಕ್ಕೆ ಕೊನೆ ವಿದಾಯ ಹೇಳಿದೆ.
ಇದನ್ನೂ ಓದಿ: Viral Video: ವರಮಾಲಾ ಕಾರ್ಯಕ್ರಮದಲ್ಲಿ ಆಯತಪ್ಪಿದ ವಧು, ವರ ಮಾಡಿದ್ದೇನು ನೋಡಿ
ವಿಡಿಯೋ ನೋಡಿದ್ರೆ ಅಳು ಬರುತ್ತದೆ!
Australian Galah, also known as the pink and grey cockatoo, mates for life. Partner grieving at the death of its mate...
The farewell at the end(0.45sec) will break ones heart. pic.twitter.com/vSFGb99KE8— Susanta Nanda IFS (@susantananda3) July 4, 2021
ಪ್ರಾಣಿಗಳು ಮತ್ತು ಪಕ್ಷಿಗಳ ತಮಾಷೆಯ ಮತ್ತು ಮುದ್ದಾದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಕೆಲವೊಮ್ಮೆ ಕೆಲವು ವಿಡಿಯೋ ನಮ್ಮ ಹೃದಯವನ್ನು ಗೆಲ್ಲುತ್ತವೆ. ಆದರೆ ಈ ವಿಡಿಯೋ ನೋಡಿದ್ರೆ ನಿಮಗೆ ಅಳು ಬರುತ್ತದೆ. ಪ್ರಾಣಿ-ಪಕ್ಷಗಳಲ್ಲಿಯೂ ಎಷ್ಟೊಂದು ಪ್ರೀತಿ ಇರುತ್ತದೆ, ಮನುಷ್ಯನಂತೆಯೇ ಅವುಗಳಿಗೂ ಭಾವನೆಗಳಿರುತ್ತವೆ ಅನ್ನೋದಕ್ಕೆ ಈ ವಿಡಿಯೋ ನಿದರ್ಶನವಾಗಿದೆ.
ಇದನ್ನೂ ಓದಿ: ಮೇ 1 ರಿಂದ ಸಿಲಿಂಡರ್ ಬೆಲೆ ದುಬಾರಿ, ಬ್ಯಾಂಕ್ ರಜೆ; ತಿಂಗಳು ಪ್ರಾರಂಭ ಹೇಗೆ?
ಈ ವಿಡಿಯೋದಲ್ಲಿ ಯಾವುದೋ ವಾಹನ ಬಡಿದು ಪಕ್ಷಿಯೊಂದು ಸಾವನ್ನಪ್ಪಿ ರಸ್ತೆಯ ಮಧ್ಯೆ ಬಿದ್ದಿದೆ. ತನ್ನ ಪ್ರೀತಿಯ ಸಂಗಾತಿ ಕಳೆದುಕೊಂಡು ಪಕ್ಷಿಯು ದುಃಖಿಸಿದೆ. ಮೃತಪಟ್ಟ ಪಕ್ಷಿಯ ಬಳಿ ಬರುವ ಸಂಗಾತಿ ಪಕ್ಷಿ ಅದಕ್ಕೆ ಚುಂಬಿಸುವ ಮೂಲಕ ನೋವಿನ ವಿದಾಯ ಹೇಳಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ನಿಮಿಷವಿರುವ ಈ ವಿಡಿಯೋ ಇದೀಗ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಪಕ್ಷಿಯ ಸಾವಿಗೆ ನೆಟಿಜನ್‍ಗಳು ದುಃಖ ವ್ಯಕ್ತಪಡಿಸಿದ್ದಾರೆ. ಅನೇಕರು ಮನಷ್ಯರ ಸ್ವಾರ್ಥಕ್ಕೆ ಪ್ರಾಣಿ-ಪಕ್ಷಿಗಳು ಹೇಗೆ ಅನಾಥವಾಗಿ ಸಾವನ್ನಪ್ಪುತ್ತಿವೆ ನೋಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.