ನ್ಯೂಯಾರ್ಕ್ ಟೈಮ್ಸ್ ಸ್ಕ್ವೇಯರ್ ನಲ್ಲಿ 'ಹರೇ ಕೃಷ್ಣ, ಹರೇ ರಾಮಾ' ನೃತ್ಯಕ್ಕೆ ಸ್ಪೈಡರ್ ಮ್ಯಾನ್ ಎಂಟ್ರಿ... ವಿಡಿಯೋ ನೋಡಿ

Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಭಕ್ತರು ಕುಣಿದು ಕುಪ್ಪಳಿಸುತ್ತಿರುವುದನ್ನು ನೀವು ನೋಡಬಹುದು. ಆಗ ಇದ್ದಕ್ಕಿದ್ದಂತೆ ಸ್ಪೈಡರ್ ಮ್ಯಾನ್ ವೇಷ ಧರಿಸಿದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು ಅವರೊಂದಿಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಇದನ್ನು ನೋಡಿ ಅಲ್ಲಿದ್ದವರಿಗೆ ಸಂಭ್ರಮ ದುಪ್ಪಟ್ಟಾಗುತ್ತದೆ. (Viral News In Kannada)  

Written by - Nitin Tabib | Last Updated : Nov 20, 2023, 08:36 PM IST
  • ಹೌದು, ಅದೇ ಸ್ಪೈಡರ್‌ಮ್ಯಾನ್ ಭಾರತದ ಮಕ್ಕಳ ನೆಚ್ಚಿನ ಸೂಪರ್ ಹೀರೋ,
  • ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ತನ್ನ ಕೈಯಿಂದ ಜೇಡರ ಬಲೆಗಳನ್ನು ಹೊರತೆಗೆದು ಅಲ್ಲಿ ಇಲ್ಲಿ ನೇತಾಡುತ್ತಾ
  • ಶತ್ರುಗಳನ್ನು ಸದೆಬಡೆಯುವ ಸ್ಪೈಡರ್ ಮ್ಯಾನ್. ಅದನ್ನು ನೋಡಿ ಮಕ್ಕಳು ತುಂಬಾ ಸಂತೋಷಪಡುತ್ತಾರೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇಯರ್ ನಲ್ಲಿ 'ಹರೇ ಕೃಷ್ಣ, ಹರೇ ರಾಮಾ' ನೃತ್ಯಕ್ಕೆ ಸ್ಪೈಡರ್ ಮ್ಯಾನ್ ಎಂಟ್ರಿ... ವಿಡಿಯೋ ನೋಡಿ title=

ನ್ಯೂಯಾರ್ಕ್: ಇನ್ಸ್ಟಾಗ್ರಾಮ್, ಎಕ್ಸ್ ಹಾಗೂ ಫೇಸ್ಬುಕ್ ಮೂಲಕ ಸ್ಕ್ರೋಲ್ ಮಾಡುವಾಗ, ನೀವು ಹಲವು ವಿಡಿಯೋಗಳನ್ನು ನೋಡುತ್ತೀರಿ, ಅವುಗಳಲ್ಲಿ ಕೆಲ ವಿಡಿಯೋಗಳನ್ನು ನಿಮ್ಮನ್ನು ಪದೇ ಪದೇ ವೀಕ್ಷಿಸುವಂತೆ ಮಾಡುತ್ತವೆ.  ಅಂತಹುದೇ ಒಂದು ತಮಾಷೆಯ ಕ್ಲಿಪ್ ಅಮೆರಿಕದ ನ್ಯೂಯಾರ್ಕ್ ಸಿಟಿಯಿಂದ ಹೊರಹೊಮ್ಮಿದೆ, ಇದನ್ನು ಜನರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಿಸುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ಈ ವೀಡಿಯೊದಲ್ಲಿ, ಭಾರತೀಯ ಸನಾತನ ಭಕ್ತರು ಸ್ತೋತ್ರಗಳಿಗೆ ನೃತ್ಯ ಮಾಡುವ ನಡುವೆ, ಇದ್ದಕ್ಕಿದ್ದಂತೆ ಸ್ಪೈಡರ್‌ಮ್ಯಾನ್ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. (Viral News In Kannada)

ಹೌದು, ಅದೇ ಸ್ಪೈಡರ್‌ಮ್ಯಾನ್ ಭಾರತದ ಮಕ್ಕಳ ನೆಚ್ಚಿನ ಸೂಪರ್ ಹೀರೋ, ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ತನ್ನ ಕೈಯಿಂದ ಜೇಡರ ಬಲೆಗಳನ್ನು ಹೊರತೆಗೆದು ಅಲ್ಲಿ ಇಲ್ಲಿ ನೇತಾಡುತ್ತಾ ಶತ್ರುಗಳನ್ನು ಸದೆಬಡೆಯುವ ಸ್ಪೈಡರ್ ಮ್ಯಾನ್. ಅದನ್ನು ನೋಡಿ ಮಕ್ಕಳು ತುಂಬಾ ಸಂತೋಷಪಡುತ್ತಾರೆ. ವೈರಲ್ ವೀಡಿಯೊದಲ್ಲಿ, ಇದೇ ಸ್ಪೈಡರ್‌ಮ್ಯಾನ್ ಕೀರ್ತನದ ಸಂಗೀತಕ್ಕೆ ಸಂಪೂರ್ಣ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ.

ಸ್ಪೈಡರ್ ಮ್ಯಾನ್ ಜೊತೆ ಮೋಜು...
ವೈರಲ್ ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ (@atl_sankirtan) ಹೆಸರಿನ ಬಳಕೆದಾರರು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆಯಲ್ಲಿ - ನ್ಯೂಯಾರ್ಕ್ ಸಿಟಿ ಟೈಮ್ಸ್ ಸ್ಕ್ವೇರ್‌ನಲ್ಲಿರುವ ಅಟ್ಲಾಂಟಾ ಸಂಕೀರ್ತನ್ ಭಕ್ತರ ಮಹಾ ಹರಿನಾಮವನ್ನು ತಲುಪಿದಾಗ ಸ್ಪೈಡರ್ ಮ್ಯಾನ್ ಸಾಕಷ್ಟು ಎಂಜಾಯ್ ಮಾಡಿದ ಎಂದು ಬರೆದುಕೊಂಡಿದ್ದಾರೆ. ನವೆಂಬರ್ 8 ರಂದು ಹಂಚಿಕೊಂಡ ವೀಡಿಯೊದಲ್ಲಿ, ಭಾರತೀಯ ಸಾಂಪ್ರದಾಯಿಕ ಧೋತಿ-ಕುರ್ತಾ ಉಡುಪುಗಳನ್ನು ಧರಿಸಿರುವ ಸಂಕೀರ್ತನ್ ತಂಡದಲ್ಲಿ ಸೇರಿರುವ ಭಕ್ತರು ಡ್ರಮ್ ಮತ್ತು ಮಂಜಿರ್‌ಗಳಲ್ಲಿ ಮಹಾ ಹರಿನಾಮವನ್ನು ಹಾಡುತ್ತಾ ದೇವರ ಹೆಸರಿನಲ್ಲಿ ಭಕ್ತಿಯಿಂದ ನೃತ್ಯ ಮಾಡುವುದನ್ನು ನೀವು ಕಾಣಬಹುದು.

ಇದನ್ನೂ ಓದಿ-ವಿವಾಹದಲ್ಲಿ ಸ್ಟೈಲ್ ಹೊಡೆಯಲು ಹೋದ ವಧು, ನಂತರ ನಡೆದ ಹಠಾತ್ ಘಟನೆಯಲ್ಲಿ ..... ವಿಡಿಯೋ ನೋಡಿ!

ಏತನ್ಮಧ್ಯೆ, ಸ್ಪೈಡರ್ ಮ್ಯಾನ್ ವೇಷಭೂಷಣವನ್ನು ಧರಿಸಿದ ವ್ಯಕ್ತಿ ಇದ್ದಕ್ಕಿದ್ದಂತೆ ಅವರ ನಡುವೆ ತಲುಪುತ್ತಾನೆ ಮತ್ತು ಹುರುಪಿನಿಂದ ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಭಕ್ತರು ಸ್ಪೈಡರ್‌ಮ್ಯಾನ್‌ನೊಂದಿಗೆ ನೃತ್ಯ ಮಾಡುವುದನ್ನು ಮತ್ತು ಮೋಜು ಮಾಡುವುದನ್ನು ಸಹ ಕಾಣಬಹುದು.

ಇದನ್ನೂ ಓದಿ-ಪಾಕಿಸ್ತಾನದಲ್ಲೊಂದು ವಿಚಿತ್ರ ಕ್ರಿಕೆಟ್ ಪಂದ್ಯ, ಪರಸ್ಪರ ಹೊಡೆದಾಡಿಕೊಂಡ ಬ್ಯಾರ್ಟ್ಸ್ಮನ್ ಗಳು... ವಿಡಿಯೋ ನೋಡಿ!

ಸ್ಪೈಡರ್‌ಮ್ಯಾನ್, ಹೋಮ್ ಕಮಿಂಗ್!
ಈ ವೀಡಿಯೊ ಇದುವರೆಗೆ  18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ವಿಡಿಯೋಗೇ ಕಾಮೆಂಟ್ ಮಾಡಿದ ಓರ್ವ ಬಳಕೆದಾರ- ಸ್ಪೈಡರ್‌ಮ್ಯಾನ್ ಈಗ ಸರಿಯಾದ ಹಾದಿಯಲ್ಲಿದ್ದಾರೆ, ಹರೇ ಕೃಷ್ಣ... ಎಂದು ಬರೆದುಕೊಂಡರೆ, ಮತ್ತೊಬ್ಬ ಬಳಕೆದಾರ- ಗ್ಲೋರಿ ಟು ಗಾಡ್ ಸ್ಪೈಡರ್ಮ್ಯಾನ್ ಎಂದಿದ್ದಾರೆ. ಮೂರನೆ ವ್ಯಕ್ತಿ - ಸ್ಪೈಡರ್‌ಮ್ಯಾನ್‌ನ ಹೋಮ್‌ಕಮಿಂಗ್ ಎಂದಿದ್ದಾರೆ. ನೀವು ಈ ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅನಿಸಿಕೆ ಹಂಚಿಕೊಳ್ಳಲು ಮರೆಯಬೇಡಿ.

ಇಲ್ಲಿದೆ ವಿಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News