Viral Video: ‘ಭಾರತ್ ಜೋಡೋ ಯಾತ್ರೆ’ ವೇಳೆ ಬಂಬೂ ಚಿಕನ್ ತಯಾರಿಸಿದ ರಾಹುಲ್ ಗಾಂಧಿ..!

ಬುಡಕಟ್ಟು ಮಹಿಳೆಯರೊಂದಿಗೆ ಸೇರಿ ರಾಹುಲ್ ಗಾಂಧಿ ಬಂಬೂ ಚಿಕನ್ ತಯಾರಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

Written by - Puttaraj K Alur | Last Updated : Nov 12, 2022, 12:59 PM IST
  • ‘ಭಾರತ್ ಜೋಡೋ ಯಾತ್ರೆ’ ಮಧ್ಯೆ ಬಂಬೂ ಚಿಕನ್ ತಯಾರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
  • ತೆಲಂಗಾಣದ ಭದ್ರಾಚಲಂನ ಬುಡಕಟ್ಟು ಜನರೊಂದಿಗೆ ಬಂಬೂ ಚಿಕನ್ ತಯಾರಿಸಿದ ಕಾಂಗ್ರೆಸ್ ಯುವ ನಾಯಕ
  • ಬುಡಕಟ್ಟು ಜನರೊಂದಿಗೆ ಬೆರೆತು ಬಂಬೂ ಚಿಕನ್ ಸವಿದ ರಾಹುಲ್ ಗಾಂಧಿ ವಿಡಿಯೋ ವೈರಲ್
Viral Video: ‘ಭಾರತ್ ಜೋಡೋ ಯಾತ್ರೆ’ ವೇಳೆ ಬಂಬೂ ಚಿಕನ್ ತಯಾರಿಸಿದ ರಾಹುಲ್ ಗಾಂಧಿ..! title=
ಬಂಬೂ ಚಿಕನ್ ತಯಾರಿಸಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ‘ಭಾರತ್ ಜೋಡೋ ಯಾತ್ರೆ’ ಮಾಡುತ್ತಿದ್ದಾರೆ. ಪಾದಯಾತ್ರೆಯ ಮೂಲಕವೇ ದೇಶವನ್ನು ಸುತ್ತಿ ಜನರನ್ನು ತಲುಪುವ ಗುರಿ ಹೊಂದಿರುವ ರಾಹುಲ್, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

‘ಭಾರತ್ ಜೋಡೋ ಯಾತ್ರೆ’ ಮಧ್ಯೆಯೇ ರಾಹುಲ್ ಗಾಂಧಿ ಬಂಬೂ ಚಿಕನ್ ತಯಾರಿಸಿದ್ದಾರೆ. ಹೌದು, ಕಾಂಗ್ರೆಸ್ ಯುವ ನಾಯಕ ಬಂಬೂ ಚಿಕನ್ ತಯಾರಿಸುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತೆಲಂಗಾಣದ ಭದ್ರಾಚಲಂನ ಬುಡಕಟ್ಟು ಜನರ ಸಾಂಪ್ರದಾಯಿಕ ಆಹಾರ ಬಂಬೂ ಚಿಕನ್ ತಯಾರಿಸಿ ರಾಹುಲ್ ಗಾಂಧಿ ಸವಿದಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದ ಜನ ಕಾಂಗ್ರೆಸ್‌ಗೆ ಓಟ್‌ ಹಾಕ್ತಾರೆ : ರಾಹುಲ್‌ ಗಾಂಧಿ

ಬುಡಕಟ್ಟು ಮಹಿಳೆಯರೊಂದಿಗೆ ಸೇರಿ ರಾಹುಲ್ ಗಾಂಧಿ ಬಂಬೂ ಚಿಕನ್ ತಯಾರಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಬುಡಕಟ್ಟು ಜನರೊಂದಿಗೆ ಬೆರತ ರಾಹುಲ್ ಗಾಂಧಿ ಚಿಕನ್‍ಗೆ ಉಪ್ಪು-ಮಸಾಲೆ ಹಾಕಿ ಹದಗೊಳಿಸಿದ್ದಾರೆ. ಬಳಿಕ ಅದನ್ನು ಬಂಬೂವಿನಲ್ಲಿ ಹಾಕಿ ಬೇಯಿಸಲು ಇಟ್ಟಿದ್ದಾರೆ. ಇದೇ ವೇಳೆ ಬುಡಕಟ್ಟು ಜನರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಂಡಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಬುಡಕಟ್ಟು ಮಹಿಳೆಯರ ಕೈಕೈ ಹಿಡಿದುಕೊಂಡು ‘ಭಾರತ್ ಜೋಡಿಸುವ ಯಾತ್ರೆ’ಯ ಬಗೆಗಿನ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಳಿಕ ಸ್ಥಳೀಯ ಜನರೊಂದಿಗೆ ಸೇರಿ ರಾಹುಲ್ ಬಂಬೂ ಚಿಕನ್ ಸವಿದಿದ್ದಾರೆ. ಕಾಂಗ್ರೆಸ್ ಯುವನಾಯಕ ಬುಡಕಟ್ಟು ಜನರೊಂದಿಗೆ ಬೆರತು ಬಂಬೂ ಚಿಕನ್ ತಯಾರಿಸಿ ಸವಿದಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಹಿಂದೆಯೂ ರಾಹುಲ್ ಗಾಂಧಿ Village Cooking Channelನವರ ಜೊತೆ ಸೇರಿ ಚಿಕನ್ ಬಿರಿಯಾನಿ ತಯಾರಿಸಿದ್ದರು.   

ಇದನ್ನೂ ಓದಿ: IAS ಅಧಿಕಾರಿ ಟೀನಾ ದಾಬಿ ನ್ಯೂ ಲುಕ್‌ : ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಇವರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News